ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಅಂಬೇಡ್ಕರ್ ಸಂಘದ ನಾಮಫಲಕ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಹೆಸರೆಂದರೆ ಬರಿ ವ್ಯಕ್ತಿಯ ಹೆಸರಲ್ಲ ಒಂದು ದೊಡ್ಡ ಶಕ್ತಿ, ಅದು ಜ್ಞಾನದ ಸಂಕೇತ ಡಾ||ಬಿ.ಆರ್.ಅಂಬೇಡ್ಕರ್ ರವರಿಗಿರೂವ ಅಪಾರವಾದ ಜ್ಞಾನದಿಂದ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದರು. ಸಂವಿಧಾನದ ಆಶಯದಂತೆ ಸರ್ಕಾರಗಳು ಆಡಳಿತ ನಡೆಸಬೇಕು ತಳ ಸಮುದಾಯಗಳು ಮುಖ್ಯವಾಹಿನಿಗೆ ಬರುವತ್ತ ಚಿಂತನೆ ನಡೆಸಬೇಕು ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ಮೀಸಲಾತಿ ವ್ಯವಸ್ಥೆ ಪರಿಣಾಮ ಕಾರಿಯಾಗಿ ಜಾರಿಯಾಗಬೇಕು ಎಂದರು. ಮಾದಿಗ ಸಮುದಾಯದ ಶೈಕ್ಷಣಿಕ ಸಮಾಜಿಕ ಸುಧಾರಣೆಗೆ ಒಳ ಮೀಸಲಾತಿ ಆಧಾರ ಆಗಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ಅಗೌರವದಿಂದ ಕಾಣುವ ಘಟನೆಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ನ್ಯಾಯಾದೀಶ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪ್ರತಿ ನ್ಯಾಯಾಲದ ಒಳಗಡೆ ಬರಿಗಾಲಿನಲ್ಲಿ ಪ್ರವೇಶಿಸುವಂತೆ ಕಾನೂನು ಜಾರಿಯಾಗಬೇಕಿದೆ. ಗ್ರಾಮಾಂತರ ಭಾಗದಲ್ಲಿ ಈಗಲೂ ಪರಿಶಿಷ್ಟರ ಮೇಲೆ ನಡೆಯುತ್ತಿರುವ ಹಲ್ಲೆ ದೌರ್ಜನ್ಯಗಳ ಪ್ರಕರಣಗಳ ಕಡಿವಾಣಕ್ಕೆ ಸಂಘಟನೆಗಳು ಬಲಗೊಳ್ಳಬೇಕಿದೆ ಎಂದು ತಿಳಿಸಿದರು.

ಶಿಕ್ಷಣ ಸಂಘಟನೆ ಮತ್ತು ಹೋರಾಟದಂತಹ ಮೂರು ಮಂತ್ರಿಗಳನ್ನು ಶೋಷಿತ ವರ್ಗಕ್ಕೆ ಅಂಬೇಡ್ಕರ್ ನೀಡಿದ್ದಾರೆ. ನಾವೆಲ್ಲ ಅಂಬೇಡ್ಕರ್ ರವರ ಸಂವಿಧಾನದ ಆಶಯದಂತೆ ಬದುಕಬೇಕು ಎಂದು ಹೇಳಿದರು. ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿಯೊಬ್ಬ ಪೋಷಕರು ಸಹ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದು ಮನವಿ ಮಾಡಿಕೊಂಡರು. ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯ ಆರೋಗ್ಯ ಹಾಳಾಗುವುದಲ್ಲದೆ ನಿಮ್ಮ ಕುಟುಂಬ ಮತ್ತು ಸಮಾಜದ ಶಾಂತಿ ಸಹ ಹಾಳಾಗುವುದು ಆದ್ದರಿಂದ ನಿಮ್ಮ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ವಕೀಲರು ಹಿರೇಹಳ್ಳಿ ಮಲ್ಲೇಶ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯ ಆರ್.ಬಸಪ್ಪ, ಗ್ರಾ.ಪ.ಸದಸ್ಯ ಹೆಚ್.ರಾಜಣ್ಣ, ಬಂಜಿಗೆರೆ ವೆಂಕಟೇಶ್, ಮಾಜಿ ಸದಸ್ಯ ರಾಮಣ್ಣ, ಕಲಾವಿದ ಚಂದ್ರಣ್ಣ, ಗ್ರಾಮ ಶಾಖೆ ಅಧ್ಯಕ್ಷ ಟಿ.ಮಲ್ಲೇಶ್, ಉಪಾಧ್ಯಕ್ಷ ಹೆಚ್.ಕೆ.ತಿಮ್ಮಣ್ಣ, ಗೌರವಾಧ್ಯಕ್ಷ ಹೆಚ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಪಿ.ಮಾರಣ್ಣ, ಟಿ.ಮಂಜಣ್ಣ, ವೈ.ಮೈಲಾರಪ್ಪ, ಕುದಾಪುರ ತಿಪ್ಪೇಸ್ವಾಮಿ ಆರೋಗ್ಯ ಇಲಾಖೆ, ತಿಪ್ಪೇಸ್ವಾಮಿ ಕಣಿವೆ ಮಾರಮ್ಮನ ದೇವಸ್ಥಾನ ಅಧ್ಯಕ್ಷ, ಆನಂದಕುಮಾರ್ ಸಾಹಿತಿ ಚಿತ್ರದುರ್ಗ, ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್, ಗುಬ್ಬಿ ತಿಪ್ಪೇಸ್ವಾಮಿ ಹೊಸಹಳ್ಳಿ, ಎಸ್.ಕೆ.ಸುರೇಶ್ ಬಂಜಿಗೆರೆ, ಬಸಣ್ಣ ದಾವಣಗೆರೆ, ಚಂದ್ರಯ್ಯ ಹನುಮಂತನಹಳ್ಳಿ, ಹಿರೇಹಳ್ಳಿ ದುರುಗೇಶ್, ಆರ್.ರುದ್ರಮುನಿ ವಕೀಲರು, ಎಂ.ತಿಪ್ಪೇಸ್ವಾಮಿ ಸಹ ಕಾರ್ಯದರ್ಶಿ, ಗ್ರಾಮ ಶಾಖೆ ಅಧ್ಯಕ್ಷ ಟಿ.ಮಲ್ಲೇಶ್ ಹೊಸಹಳ್ಳಿ, ಉಪಾಧ್ಯಕ್ಷ ಹೆಚ್.ಕೆ.ತಿಮ್ಮಣ್ಣ, ಗೌರವ ಅಧ್ಯಕ್ಷ ಹೆಚ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಪಿ.ಮಾರಣ್ಣ, ಗ್ರಾಮದ ಹಟ್ಟಿಯ ಮುಖಂಡರು, ಮಾದಿಗ ಸಮುದಾಯದ ಯುವಕ, ಯುವತಿಯರು ಇದ್ದರು.