ಈ ಬೆಳವಣಿಗೆಯು, ಎಎಂ/ಎನ್ಎಸ್ ಇಂಡಿಯಾವನ್ನು, ಸದಾ ಬದಲಾಗುತ್ತಿರುವ ಸ್ವಯಂ ಚಾಲಿತ, ಸುರಕ್ಷಿತವಾದ, ದೀರ್ಘಕಾಲ ಬಾಳಿಕೆ ಬರುವ ಅತ್ಯಾಧುನಿಕ ಶಕ್ತಿಶಾಲಿ ಉಕ್ಕು ಉತ್ಪಾದಿಸುವ ಸಾಮರ್ಥ್ಯದ ಭಾರತದ ಏಕೈಕ ಆಧುನಿಕ ಸಿಜಿಎಲ್ ಲೈನ್ ಇದಾಗಿದೆ.
ಇದು ಸಂಸ್ಥೆಯ 60,000 ಕೋಟಿ ರೂ ವಿಸ್ತರಣಾ ಯೋಜನೆಯಾಗಿದ್ದು, ಮೊದಲ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ 2022ರಲ್ಲಿ ಉದ್ಘಾಟಿಸಿದ್ದರು. ಸಂಯೋಜಿತ ಸ್ಟೀಲ್ ಕಾರ್ಖಾನೆಯಲ್ಲಿರುವ ಈ ವಿಸ್ತರಣಾ ಯೋಜನೆಯು ಸದಾ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಸ್ಟೀಲ್ ಗ್ರೇಡ್ಗಳ ವೈವಿಧ್ಯಮಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ.

ಹೊಸ ಸಿಜಿಎಲ್, ತನ್ನ ಮೂಲ ಸಂಸ್ಥೆಗಳಾದ ಆರ್ಸಿಲಾರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ನ ಸುದೀರ್ಘ ಜಾಗತಿಕ ನೈಪುಣ್ಯತೆಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡು, ಉನ್ನತ-ದರ್ಜೆಯ, ವಿಶೇಷ ಉಕ್ಕಿಗಾಗಿ ಬಹುತೇಕವಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಆಟೋಮೋಟಿವ್ ಕ್ಷೇತ್ರಕ್ಕೆ ಒಂದು ಮಹತ್ತರ ಪರಿವರ್ತನೆ ತರಲು ಸಜ್ಜಾಗಿದೆ.
ಆರ್ಸಿಲಾರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ ಮುಖ್ಯ ಕಾರ್ಯಕಾರಿ ಅಧಿಕಾರಿ ದಿಲಿಪ್ ಊಮ್ಮನ್ ಮಾತನಾಡಿ, "ಈ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಯತ್ನಗಳು ಈಗ ಸಾಕಾರಗೊಂಡಿದ್ದು, ಹೊಸ ಮಾರ್ಗ ಮತ್ತು ಮುಂಬರುವ ಘಟಕವು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಸ್ತುತ ಲಭ್ಯವಿರುವ ಕೊಡುಗೆಗಳ ಗುಣಮಟ್ಟಕ್ಕೆ ಸಮನಾದ ಉಕ್ಕು ಉತ್ಪಾದಿಸಲು ವಿನ್ಯಾಸಗೊಂಡಿವೆ. ಅಭಿವೃದ್ಧಿ ಹೊಂದಿದ ಭಾರತದ ದೂರದೃಷ್ಟಿಯೆಡೆಗೆ ಪ್ರಗತಿ ಹೊಂದುತ್ತಿರುವ ಸಮಯದಲ್ಲೇ ಅದಕ್ಕೆ ಅಗತ್ಯವಾದ ವರ್ಗದಲ್ಲೇ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ.” ಎಂದು ಹೇಳಿದರು.

ಸಂಸ್ಥೆಯು ಆಂಧ್ರಪ್ರದೇಶದಲ್ಲಿ ಒಂದು ಸಂಯೋಜಿತ ಉಕ್ಕಿನ ಕಾರ್ಖಾನೆ ಸ್ಥಾಪಿಸಲಿದ್ದು, ಈಗಾಗಲೇ ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಒದಿಶಾದಲ್ಲೂ ಸಂಸ್ಥೆಯು ಮಹತ್ತರವಾದ ಅಸ್ತಿತ್ವ ಹೊಂದಿದ್ದು ಅಲ್ಲೂ ಕೂಡ ಸಂಯೋಜಿತ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದರು.