ಆಕಾಶವಾಣಿ ಸೆಳೆತ ಹೊಂದಿರುವ ಮಾಧ್ಯಮ – ಡಾ. ಸುಧಾಮೂರ್ತಿ
ಬೆಂಗಳೂರು : ಆಕಾಶವಾಣಿಗೆ ಈಗ 90ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಆಕಾಶವಾಣಿ ವಿಶೇಷ ಕಾರ್ಯಕ್ರಮದ ಅತಿಥಿಯಾಗಿ ಇಂದು ಇನ್ಫೋಸಿಸ್ ಪ್ರತಿಷ್ಠಾನದ ರೂವಾರಿ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು ಆಕಾಶವಾಣಿ ಎಲ್ಲರ ಒಡನಾಡಿ. ರಾಷ್ಟ್ರೀಯ ಪ್ರಸಾರಕ, ಸತ್ಯದ ಪ್ರತಿಪಾದಕ, ಆಕಾಶವಾಣಿ ಗಂಗೆಯಷ್ಟೇ ಪವಿತ್ರ ಮತ್ತು ಸೆಳೆತ ಹೊಂದಿರುವ ಮಾಧ್ಯಮ ಎಂದು ಬಣ್ಣಿಸಿದರು.
ದೂರದರ್ಶನದ ದಕ್ಷಿಣ ವಲಯದ ಉಪಮಹಾನಿರ್ದೇಶಕ ಭಾಗ್ಯವಾನ್, ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಡಾ. ಎ.ಎಸ್. ಶಂಕರನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.