ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಾಯೂನ್ ಖಾನ್ ಸಮ್ಮುಖದಲ್ಲಿ ನಡೆದ ಈ ಹುಟ್ಟು ಹಬ್ಬದಾಚರಣೆಯಲ್ಲಿ ಖರ್ಗೆ ಅವರ ರಾಜಕೀಯ ಹೋರಾಟಗಳನ್ನು ಮೆಲುಕು ಹಾಕಲಾಯಿತು. ಅಲ್ಲದೇ ಅವರು ಪಕ್ಷಕ್ಕಾಗಿ ಶ್ರಮಿಸುವ ಪರಿ ಎಲ್ಲ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಲಿ. ಅವರ ಆಯುಷ್ಯ ವೃದ್ಧಿಸಲಿ ಎಂದು ನಾಯಕರು ಈ ಸಂದರ್ಭದಲ್ಲಿ ಹೇಳಿದರು.

ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ್, ಡಿಸಿಸಿ ಉಪಾಧ್ಯಕ್ಷ ಕೆ. ಶ್ರೀನಿವಾಸಲು, ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಂ.ಎಸ್. ಮಂಜುಳಾ, ಕಾಂಗ್ರೆಸ್ ಹಿರಿಯ ನಾಯಕರಾದ ಎಲ್. ಮಾರಣ್ಣ, ಪಾಲಿಕೆ ಸದಸ್ಯರಾದ ಪ್ಯಾರಂ ವಿವೇಕ್, ಆಸಿಫ್, ಗೋವಿಂದರಾಜುಲು, ಬಳ್ಳಾರಿ ಜಿಲ್ಲಾ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಅಲಿವೇಲು ಸುರೇಶ್, ಬಳ್ಳಾರಿ ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷ ಅಫಾಕ್ ಅಹಮದ್, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಎರುಕುಲ ಸ್ವಾಮಿ, ಗ್ಯಾರೆಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಗೋನಾಳ್ ನಾಗಭೂಷಣ ಗೌಡ, ಡಿಸಿಸಿ ಕಾರ್ಯದರ್ಶಿ ವೀರನಗೌಡ, ಬಳ್ಳಾರಿ ಜಿಲ್ಲಾ ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಸಂತೋಷ್ ಸ್ವಾಮಿ, ಸಂಗನಕಲ್ಲು ವಿಜಯ್ ಕುಮಾರ್, ರಾಜೇಶ್, ಶ್ರೀಕಾಂತ್, ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಇದ್ದರು.