LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಪರಸ್ಪರ ಸಹಯೋಗದಿಂದ ಸರಕು ಸಾಗಣೆಯಲ್ಲಿ ಸಾಧನೆ

ಹುಬ್ಬಳ್ಳಿ: ಮಾರುಕಟ್ಟೆ ಸ್ನೇಹಿ ಬಾಂಧವ್ಯಗಳನ್ನು ಬೆಳೆಸುವುದರಲ್ಲಿ ನೈಋತ್ಯ ರೈಲ್ವೆ ಬದ್ಧವಿದ್ದು ಲೋಡಿಂಗ್ ವೇಳೆ ಎದುರಾಗುವ ಋಣಾತ್ಮಕ ಅಡಚಣೆಗಳನ್ನು ತ್ವರಿತವಾಗಿ ಪರಿಹರಿಸಲಾಗುತ್ತದೆ ಎಂಬ ಭರವಸೆಯನ್ನು ಗ್ರಾಹಕರಿಗೆ ನೀಡಿದ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ್ ಅವರು ಸರಕು ಸಾಗಣೆ ಸಾಧನೆಗೆ ಗಾಪರಸ್ಪರ ಸಹಯೋಗದಿಂದ ವಲಯದ ಬೆಳವಣಿಗೆ ಸಾಧ್ಯವೆಂದು ತಿಳಿಸಿದರು.

ನೈಋತ್ಯ ರೈಲ್ವೆಯು ರೈಲ್ ಸೌಧದಲ್ಲಿ ಹಮ್ಮಿಕೊಂಡಿದ್ದ ಸರಕು ಸಾಗಣೆ ಗ್ರಾಹಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ ನೈಋತ್ಯ ರೈಲ್ವೆ 2025-26ನೇ ಆರ್ಥಿಕ ವರ್ಷದ  ಮೊದಲ ಸರಕು ಸಾಗಣೆ ಗ್ರಾಹಕರ ಸಭೆ ರೈಲು ಆಧಾರಿತ ಲಾಜಿಸ್ಟಿಕ್ಸ್ನ ಅವಕಾಶಗಳು, ಸವಾಲುಗಳು ಹಾಗೂ ಮುಂದಿನ ಬೆಳವಣಿಗೆ ಕುರಿತು ಚರ್ಚಿಸಲು ವಿವಿಧ ಕ್ಷೇತ್ರಗಳ ಪ್ರಮುಖ ಕಾರ್ಮಿಕ ಗ್ರಾಹಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ಎಂದರು.

ಸಂಜೆ 6 ರಿಂದ ಬೆಳಿಗ್ಗೆ 6ರ ವರೆಗೆ ಕಬ್ಬಿಣದ ಅದಿರು ಲೋಡಿಂಗ್ ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧಗಳ ನಡುವೆಯೂ ಲೋಡಿಂಗ್ ಯೋಜನೆ ಸುಧಾರಣೆ, ಕಾರ್ಯಾಚರಣೆಯ ಬೆಂಬಲ ವಿಸ್ತರಣೆ ಮತ್ತು ಸಮಸ್ಯೆಗಳ ಪರಿಹಾರ ಕುರಿತಂತೆ ಪರಿಣಾಮಕಾರಿ ಚರ್ಚೆಗಳು ನಡೆದವು. ಈ ಸವಾಲುಗಳ ನಡುವೆಯೂ ನೈಋತ್ಯ ರೈಲ್ವೆ 2025ರ ಜೂನ್ ತನಕ ದಿನಕ್ಕೆ ಸರಾಸರಿ 44 ರೇಕ್‌ಗಳನ್ನು ಲೋಡ್ ಮಾಡುವ ಮೂಲಕ ಶ್ಲಾಘನೀಯ ಸಾಧನೆ ಮೆರೆದಿದೆ. ಪ್ರಮುಖ ಪಾಲುದಾರ ಸ್ಟೀಲ್ ಸರಾಸರಿ 241 ರೇಕ್‌ಗಳ ಲೋಡಿಂಗ್ ಮೂಲಕ ಮೊದಲ ತ್ರೈಮಾಸಿಕದಲ್ಲಿ 0.96 ಮಿಲಿಯನ್ ಟನ್‌ಗಳ ಸರಕು ಸಾಗಣೆ ನಡೆಸಿದೆ. ಇದು ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 160 ರೇಕ್‌ಗಳು ಹಾಗೂ 0.64 ಮಿಲಿಯನ್ ಟನ್‌ಗಳ ಲೋಡಿಂಗ್‌ನೊಂದಿಗೆ ಹೋಲಿಸಿದರೆ ಈ ಸಾಧನೆ ಬಹು ಮುಖ್ಯವಾಗಿದೆ.



ಗ್ರಾಹಕರು ವಿಶೇಷವಾಗಿ ಉಕ್ಕು ಹಾಗೂ ಕಬ್ಬಿಣದ ಅದಿರು ಲೋಡಿಂಗ್ ಕಾರ್ಯಾಚರಣೆಯಲ್ಲಿ ನೈಋತ್ಯ ರೈಲ್ವೆ ನೀಡುತ್ತಿರುವ ಬೆಂಬಲದ ದಕ್ಷತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಸಭೆಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸೇವಾ ಗುಣಮಟ್ಟವನ್ನು ಹೆಚ್ಚಿಸಲು, ಪಾಲುದಾರಿಕೆಗಳನ್ನು ಬಲಪಡಿಸಲು ಹಾಗೂ ರೈಲು ಆಧಾರಿತ ಸರಕು ಸಾಗಣೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೈಋತ್ಯ ರೈಲ್ವೆ ಬದ್ಧವಾಗಿದೆ ಎಂದು ಮಹಾಪ್ರಬಂಧಕರು ಸಭೆಯನ್ನು ಸಮಾರೋಪಗೊಳಿಸಿದರು.

ಸಭೆಯಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಉಪಾಧ್ಯಕ್ಷ ಸುಶೀಲ್ ನೋವಲ್, ಎನ್‌ಎಂಡಿಸಿ ಸಂಸ್ಥೆಯ ಜಿ.ಎಂ. ಕೆ.ಪಿ. ಸಿಂಗ್, ಮುಕುಂದ್ ಸ್ಟೀಲ್‌ನ ಗ್ರೂಪ್ ಜಿ.ಎಂ. ಪ್ರವೀಣ್ ಚಂದ್ರ, ಟಿವಿಎಸ್ ಮೋಟಾರ್ ಕಂಪನಿಯ ರ‍್ಕೆಟಿಂಗ್ ಮುಖ್ಯಸ್ಥ ನಾಗೇಂದ್ರ ಪ್ರಸಾದ್ ಹಾಗೂ ಟೊಯೋಟಾ ರ‍್ಲೋಸ್ಕರ್, ನೆಸ್ಲೆ ಸೇರಿದಂತೆ ಉಕ್ಕು, ಕಬ್ಬಿಣದ ಅದಿರು, ಆಟೋಮೊಬೈಲ್, ಸಿಮೆಂಟ್, ರಸಗೊಬ್ಬರ, ಕಂಟೇನರ್, ಸಕ್ಕರೆ, ಅಕ್ಕಿ, ಪೆಟ್ರೋಲಿಯಂ ಉತ್ಪನ್ನಗಳಂತಹ ವಿವಿಧ ವಲಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ರೈಲ್ವೆ ಪರವಾಗಿ ಹೆಚ್ಚುವರಿ ಮಹಾಪ್ರಬಂಧಕ ಕೆ.ಎಸ್. ಜೈನ್, ಪ್ರಧಾನ ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಮತ್ತು ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸ್ತ್ರಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ