
ಸಮೀಪದ ರಾಮಸಾಗರ ಗ್ರಾಮದಲ್ಲಿ ಮಂಗಳವಾರ ದೀಪಾವಳಿ ಹಬ್ಬದ ಪ್ರಯುಕ್ತ ಕ್ರಿಕೇಟ್ ಟೂರ್ನಮೆಂಟ್ ಆಯೋಜಿಸಿ ನಂತರ ಮಾತನಾಡಿದ ಅವರು ಕ್ಷಣಿಕ ಸುಖಕ್ಕಾಗಿ ಜನರು ವ್ಯಸನಕ್ಕೆ ದಾಸರಾಗುವುದರೊಂದಿಗೆ ದುಶ್ಚಟಗಳ ಚಕ್ರವ್ಯೂಹದಲ್ಲಿ ಸಿಲುಕಿದರೆ ಅದರಿಂದ ಹೊರ ಬರುವುದು ಕಷ್ಟಸಾಧ್ಯ ಯುವ ಜನರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ನಿಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿ, ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕ, ಸಾಮಾಜಿ, ಅಭಿವೃದ್ಧಿ ಸಾಧ್ಯವಿದೆ ನಾವು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಪೋಷಕರು ನಿಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿಕೊಂಡರು. ದುಶ್ಚಟಗಳು ಸ್ವಲ್ಪ ಸುಖ ನೀಡಿದರು ನಂತರದಲ್ಲಿ ತಮ್ಮ ಅಮೂಲ್ಯವಾದ ಸಮಯ ಗೌರವವನ್ನು ಹಾಳು ಮಾಡುವ ಜೊತೆಗೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ರಿಕೇಟ್ ಟೂರ್ನಮೆಂಟ್‌ನಲ್ಲಿ ಆರ್.ಎಂ.ಎಸ್ ಕಿಂಗ್ ಮೊದಲ ಸ್ಥಾನ ಪಡೆದಿದೆ. ದ್ವಿತೀಯ ಸ್ಥಾನ ಲೆಜೆಂಡ್ ವಾರಿಯರ್ಸ್, ತೃತೀಯ ಸ್ಥಾನ ಆರ್‌ಸಿಬಿ, ಹಾಗೂ 4ನೇ ಸ್ಥಾನ ಮದಕರಿ ಪಡೆದಿದೆ. ಆರ್.ಎಂ.ಎಸ್ ಕಿಂಗ್ ತಂಡದ ನಾಯಕ ಬೋರೇಶ್, ಲೆಜೆಂಡ ವಾರಿಯರ್ಸ್ ತಂಡದ ನಾಯಕ ಸುನೀಲ್, ಆರ್‌ಸಿಬಿ ತಂಡದ ನಾಯಕ ಜಗದೀಶ್, ಮದಕರಿ ತಂಡದ ನಾಯಕ ಪುನೀತ್.
ಈ ಸಂದರ್ಭದಲ್ಲಿ ಉಪಸ್ಥಿತರಾದ ರಾಮಸಾಗರ ಮಹಂತೇಶ್, ತಿಪ್ಪೇಸ್ವಾಮಿ ಮಾಜಿ ಗ್ರಾ.ಪಂ.ಉಪಾಧ್ಯಕ್ಷರು ಹಾಲಿ ಸದಸ್ಯ, ಸಣ್ಣಪಾಲಯ್ಯ, ಆರ್.ಜಿ.ಜಯಣ್ಣ, ಸಣ್ಣತಿಪ್ಪಯ್ಯ ಕಾಂತಣ್ಣ, ಗಜ್ಜುಗಾನಹಳ್ಳಿ ಓಬಣ್ಣ, ತೀರ್ಪುಗಾರರು ವೀರೇಶ್, ವೆಂಕಟೇಶ್, ಪಾರಿತೋಷಕ ದಾನಿಗಳಾದ ಪ್ರತೀಕ್ ಎಂ.ನಾಯಕ, ಹಾಗೂ ಕ್ರೀಡಾಪಟುಗಳು ಇನ್ನೂ ಇತರರು ಇದ್ದರು.

ಕ್ರೀಡಾಪಟುಗಳು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ, ಪ್ರತಿಯೊಬ್ಬರು ಗೆಲ್ಲುವ ಉತ್ಸಹದಿಂದ ಪಾಲ್ಗೊಳ್ಳುತ್ತಾರೆ. ಎಲ್ಲಾರು ಗೆಲ್ಲಲು ಸಾಧ್ಯವಿಲ್ಲ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ
ರಾಮಸಾಗರ ಮಹಂತೇಶ್