LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೂ.೧ ಸಾವಿರ ಕೋಟಿ ವೆಚ್ಚದಲ್ಲಿ ವೇಗವರ್ಧಕ ಕಾರ್ಯಕ್ರಮ

5 ಲಕ್ಷ ಉದ್ಯೋಗ ಸೃಷ್ಟಿ- ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಹೊರತು ಪಡಿಸಿ ರಾಜ್ಯಾದ್ಯಂತ ನಾವೀನ್ಯತೆಯನ್ನು ಹೆಚ್ಚಿಸಲು ಹಾಗೂ ಬೆಳವಣಿಗೆಯನ್ನು ವೇಗಗೊಳಿಸಲು ರೂ. ೧ ಸಾವಿರ ಕೋಟಿ ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮವನ್ನು ಅನಾವರಣಗೊಳಿಸಿದ್ದು, ೫ ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೃಢವಾದ ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಲು ವಿನ್ಯಾಸಗೊಳಿಸಲಾದ ಮಹತ್ವದ ಕಾರ್ಯಕ್ರಮ ಆಯೋಜಿಸಲಾಗಿದೆ.

 

ಈ ಕುರಿತು ಇಂದು ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಇಂದು ತನ್ನ ಮಹತ್ವದ, ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಐದು ವರ್ಷಗಳಲ್ಲಿ ರೂ. ೧ ಸಾವಿರ ಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ, "ಐಇಂP" ರಾಜ್ಯದಾದ್ಯಂತ ನಾವೀನ್ಯತೆಯನ್ನು ಉತ್ತೇಜಿಸುವ, ಅವಕಾಶಗಳನ್ನು ಜನಸಾಮಾನ್ಯಗೊಳಿಸುವುದಾಗಿದೆ. ಇದರಿಂದ ಸಮತೋಲನ ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುವ ಕಾರ್ಯತಂತ್ರದ ಮತ್ತು ಸಮಗ್ರ ಬದ್ಧತೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು ತಿಳಿಸಿದರು.



ಬೆಂಗಳೂರು ವಿಶ್ವಮಟ್ಟದಲ್ಲಿ ಪ್ರಸಿದ್ಧ ತಂತ್ರಜ್ಞಾನ ಕೇಂದ್ರವಾಗಿದ್ದು, ಸ್ಮಾರ್ಟ್ ಅಪ್ ಬ್ಲಿಂಕ್ ಸೂಚ್ಯಂಕ ೨೦೨೫ ಹಾಗೂ ಸ್ಮಾರ್ಟ್ ಅಪ್ ಜೀನೋಮ್ ೨೦೨೫ರಲ್ಲಿ ವಿಶ್ವದಾದ್ಯಂತ ಕ್ರಮವಾಗಿ ೧೦ ನೇ ಮತ್ತು ೧೪ ನೇ ಸ್ಥಾನ ಪಡೆದಿದೆ. ಎಲ್ ಇ ಎ ಪಿ ರಾಜ್ಯದಾದ್ಯಂತ ಸಮಗ್ರ ಅಭಿವೃದ್ಧಿಯ ಕುರಿತಾದ ಒಂದು ಉಪಕ್ರಮವಾಗಿದ್ದು, ಮುಂದಿನ ಹಂತದಲ್ಲಿ ಉದಯೋನ್ಮುಖ ತಂತ್ರಜ್ಞಾನ ಸಮೂಹಗಳಿಗೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಎಲ್ ಇ ಎ ಪಿ  ಯೋಜನೆಯನ್ನು ಮೈಸೂರು-ಚಾಮರಾಜನಗರ, ಮಂಗಳೂರು-ಉಡುಪಿ, ಹುಬ್ಬಳ್ಳಿ-ಬೆಳಗಾವಿ-ಧಾರವಾಡ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗ ಮುಂತಾದ ಕ್ಲಸ್ಟರ್ ಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ನವೋತ್ಪಾದನಾ ಹಬ್‌ಗಳಾಗಿ ಪರಿವರ್ತಿಸಿ ರೂಪಾಂತರಗೊಳಿಸಲಿದೆ.

 

ಕರ್ನಾಟಕದಾದ್ಯಂತ ನಾವೀನ್ಯತೆಯ ಫಲಗಳು ಹಂಚಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಎಲ್ ಇ ಎ ಪಿ ಕಾರ್ಯಕ್ರಮ ಒಂದು ಬದ್ಧತೆಯಾಗಿದೆ. ಬೆಂಗಳೂರು ಜಾಗತಿಕವಾಗಿ ತಾಂತ್ರಿಕತೆಯ ಹಬ್ ಆಗಿದ್ದು ಮೈಸೂರು, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಉದ್ಯಮಿಗಳನ್ನು ಸಬಲೀಕರಣಗೊಳಿಸಿದಾಗ ರಾಜ್ಯದ ನಿಜವಾದ ಸಾಮರ್ಥ್ಯವು ಅನಾವರಣಗೊಳ್ಳುತ್ತದೆ. ರೂ. ೧ ಸಾವಿರ ಕೋಟಿ ಮೌಲ್ಯದ ಈ ಕಾರ್ಯಕ್ರಮವು ನಾವೀನ್ಯತೆಯಲ್ಲಿ ಹೂಡಿಕೆಗಿಂತ ಹೆಚ್ಚಿನದಾಗಿದೆ; ಇದು ಇಡೀ ರಾಜ್ಯಕ್ಕೆ ಸಮತೋಲಿತ, ಸಮಾನ ಮತ್ತು ಸ್ಥಿತಿಸ್ಥಾಪಕ ಆರ್ಥಿಕ ಭವಿಷ್ಯದಲ್ಲಿ ಹೂಡಿಕೆಯಾಗಿದ್ದು, ೫ ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಕರ್ನಾಟಕವನ್ನು ವೈವಿಧ್ಯಮಯ ಜಾಗತಿಕ ತಂತ್ರಜ್ಞಾನ ನಾಯಕನನ್ನಾರಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

 

ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಏಕ್ ರೂಪ್ ಕೌರ್ ರವರು ಕಾರ್ಯಕ್ರಮದ ಕಾರ್ಯತಂತ್ರದ ವಿನ್ಯಾಸವನ್ನು ಪರಿಚಯಿಸಿದ್ದಾರೆ. ಎಲ್ ಇ ಎ ಪಿ ಉಪಕ್ರಮವು ನಾವೀನ್ಯತೆಗೆ ಸಂಪೂರ್ಣ ಬೆಂಬಲವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಒಂದು ಚೌಕಟ್ಟಾಗಿದೆ. ಸ್ಮಾರ್ಟ್ ಅಪ್ ಫೌಂಡ್ರಿಯೊAದಿಗೆ ಶಾಲೆಗಳಲ್ಲಿ ಉದ್ಯಮಶೀಲತಾ ಮನೋಭಾವವನ್ನು ಬೆಳೆಸುವುದರಿಂದ ಹಿಡಿದು ಎಲೆವೆಟ್ ನೆಕ್ಸ್ ಮೂಲಕ ಆಳವಾದ ಬೆಂಬಲದೊಂದಿಗೆ ಡೀಪ್-ಟೆಕ್ ಸ್ಮಾರ್ಟ್ ಅಪ್‌ಗಳನ್ನು ಒದಗಿಸುವವರೆಗೆ, ನಾವು ದೃಢವಾದ, ಪರಸ್ಪರ ಸಂಬAಧ ಹೊಂದಿರುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ಎಲ್ ಇ ಎಪಿ ನಮ್ಮ 'ಬೆಂಗಳೂರಿನಾಚೆಗೆ' ದೃಷ್ಟಿಕೋನದೊಂದಿಗೆ, ನಮ್ಮ ಉದಯೋನ್ಮುಖ ತಂತ್ರಜ್ಞಾನ ಸಮೂಹಗಳಿಗೆ ಸುಸ್ಥಿರ ಬೆಳವಣಿಗೆ ಮತ್ತು ದೀರ್ಘಕಾಲೀನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಮೂಲಸೌಕರ್ಯ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.'



ಶಾಲೆಗಳಲ್ಲಿ ಉದ್ಯಮಶೀಲತಾ ಕುತೂಹಲ ಸೃಷ್ಟಿಯ ಆದಿಯಿಂದ ಹಿಡಿದು ಪ್ರಬುದ್ಧ ನವೋದ್ಯಮಗಳು ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಹಾಯ ಮಾಡುವವರೆಗೆ, ನವೋದ್ಯಮದ ಸಂಪೂರ್ಣ ಜೀವನಚಕ್ರವನ್ನು ಬೆಂಬಲಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಮೂಲಸೌಕರ್ಯ, ಹಣಕಾಸು, ಮಾರ್ಗದರ್ಶನ ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಯಲ್ಲಿನ ನಿರ್ಣಾಯಕ ಅಂತರವನ್ನು ಪರಿಹರಿಸುವ ಮೂಲಕ, ಐಇಂP ರಾಜ್ಯಾದ್ಯಾಂತ ಒಂದು ಸಮಗ್ರ ನಾವೀನ್ಯತೆಯ ನಿರೂಪಣೆಯನ್ನು ರಚಿಸುವ ಗುರಿಯನ್ನು ಹೊಂದಿದೆ.

 

ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮವು ೧೬ ಪ್ರಮುಖ ಉಪ-ಕಾರ್ಯಕ್ರಮಗಳ ಮೂಲಕ ರೂಪುಗೊಂಡಿದೆ, ಪ್ರತಿಯೊಂದು ಉಪ-ಕಾರ್ಯಕ್ರಮವೂ ರಾಜ್ಯಾದ್ಯಾಂತ ನವೋತ್ಪಾದನಾ ಪರಿಸರವನ್ನು ನಿರ್ಮಿಸಲು ಅಗತ್ಯವಾದ ಮೂಲಭೂತ ಅಂಶಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕರ್ನಾಟಕ ಸ್ಮಾರ್ಟ್ ಅಪ್ ಫೌಂಡ್ರಿ,

ನಿಧಿಗಳ ನಿಧಿಯ ರಚನೆ, ಎಲೆವೇಟ್ ನೆಕ್ಸ್÷್ಟ, ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ, ಬೆಂಗಳೂರು ಹೊರತು ಪಡಿಸಿ ಎಲಿವೇಟ್ ಕಾರ್ಯಕ್ರಮ, ಇನ್ನುಬೇಟರ್‌ಗಳು ಮತ್ತು ಆಕ್ಸಿಲರೇಟರ್‌ಗಳ ರಚನೆ, ಬೆಳವಣಿಗೆಯ ಪ್ರಯೋಗಾಲಯಗಳು, ನಾವೀನ್ಯತೆ ಪ್ರಯೋಗಾಲಯಗಳು, ನಾವೀನ್ಯತೆಯನ್ನು ಬೆಳೆಸುವ ಕಾರ್ಯಕ್ರಮಗಳು, ಹ್ಯಾಕಥಾನ್‌ಗಳು,

ಡಿಜಿಟಲ್ ಕ್ಲಿನಿಕ್, ನಿರ್ಣಾಯಕ ಸಂಶೋಧನಾ ನಿಧಿ ಸಂಶೋಧನೆಯ ಅನುವಾದ, ಬೂಟ್ ಕ್ಯಾಂಪ್‌ಗಳು, ಮೂಲಮಾದರಿ ಪ್ರಯೋಗಾಲಯಗಳು, ಬಿಯಾಂಡ್ ಬೆಂಗಳೂರು ಸ್ಮಾರ್ಟ್ಅಪ್‌ಗಳ ಸಮಾವೇಶ ಭಾಗವಹಿಸುವಿಕೆ ಮತ್ತು ಎಲ್ ಇ ಎ ಪಿ ವೆಬ್‌ಸೈಟ್ ಒಳಗೊಂಡಿವೆ ಎಂದರು.

 

ಎಲ್ಲಾ ಕಾರ್ಯಕ್ರಮ ಮಾಹಿತಿ, ಅಪ್ಲಿಕೇಶನ್‌ಗಳು ಮತ್ತು ಸಂಪರ್ಕಕ್ಕಾಗಿ ಏಕೀಕೃತ ಡಿಜಿಟಲ್ ಪೋರ್ಟಲ್ ಅನ್ನು ರಚಿಸಲು, ಪಾಲುದಾರರ ತಡರಹಿತ ತೊಡಗಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು. ಇಲಾಖೆಯು ೧೮ನೇ ಸೆಪ್ಟೆಂಬರ್ ೨೦೨೫ ರಂದು ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ ಅಡಿಯಲ್ಲಿ ಇನೋವೇಶನ್ ಲ್ಯಾಬ್‌ಗಳನ್ನು ಸ್ಥಾಪಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸುವುದಾಗಿ ಪ್ರಕಟಣೆ ಹೊರಡಿಸಿದೆ. ಹ್ಯಾಕಥಾನ್‌ಗಳು, ಬೂಟ್ ಕ್ಯಾಂಪ್‌ಗಳು ಮತ್ತು ಸೆಂಟರ್ ಆಫ್ ಎಕ್ಸೆಲೆನ್ಸ್ ಕೇಂದ್ರಗಳ ಸ್ಥಾಪನೆಗಾಗಿ ಪ್ರಮುಖ ಉಪಕ್ರಮಗಳ ಪ್ರಾರಂಭವನ್ನು ದೃಢೀಕರಿಸುವ ಹೆಚ್ಚಿನ ಪ್ರಕಟಣೆಗಳು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದರು.



ಸುದ್ದಿಗೋಷ್ಠಿಯಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ರಾಹುಲ್ ಶರಣಪ್ಪ ಸಂಕನೂರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST