LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಅಬ್ಬಿಗೇರಿ: ಭಕ್ತಿಭಾವದಿಂದ ಹನುಮ ಜಯಂತಿ ಆಚರಣೆ

ಬೆಂಗಳೂರು: ಅಂಜನಿಪುತ್ರ ಹನುಮ ಜಯಂತಿಯನ್ನು ರಾಜಧಾನಿಯಲ್ಲಿ  ಮಂಗಳವಾರ ಶ್ರದ್ಧಾ–ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ಭಕ್ತರು ಆಂಜನೇಯ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಗಾಳಿ ಆಂಜನೇಯ ಸ್ವಾಮಿ, ಉತ್ತರ ಹಳ್ಳಿಯ ಗುಂಡಾಂಜನೇಯ, ಜೆಪಿ ನಗರದ ರಾಗಿಗುಡ್ಡ ಆಂಜನೇಯ ಸ್ವಾಮಿ, ನೆಲಮಂಗಲದ ರಾಮಾಂಜನೇಯ ಸ್ವಾಮಿ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ ಸೇರಿ ನಾಗರಬಾವಿ, ಸಂಜೀವಿನಿ ನಗರ,  ಅಬ್ಬಿಗೇರಿಯನಲ್ಲಿರುವ ಆಂಜನೇಯ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಬಳೆಪೇಟೆಯ ಪಿಳ್ಳಾಂಜನೇಯಸ್ವಾಮಿ, ಚಿಕ್ಕಪೇಟೆಯ ತುಪ್ಪದ ಆಂಜನೇಯಸ್ವಾಮಿ, ರಾಜಾಜಿನಗರ 6ನೇ ಬ್ಲಾಕ್‌ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆಗಳು ನೆರವೇರಿದವು.

ಹನುಮಾನ್ ಜಯಂತಿ ಪ್ರಯುಕ್ತ ಬೆಂಗಳೂರಿನ ಅಬ್ಬಿಗೇರಿಯ ಆಂಜನೇಯ ದೇವಸ್ಥಾನಕ್ಕೆ ಇಂದು(ಮಂಗಳವಾರ) ಭಕ್ತ ಸಾಗರವೆ ಹರಿದು ಬಂದಿತ್ತು, ಇಡೀ ದೇವಸ್ಥಾನವನ್ನು ವಿವಿಧ ಬಗೆಯ ಪುಸ್ಪಗಳಿಂದ ಹಾಗೂ ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು.  ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ವಾಯು ಪುತ್ರನ ದರ್ಶನ ಪಡೆದರು.



ಬೆಳಗ್ಗೆ ಹನುಮ ದೇವರಿಗೆ  ಹಾಲು, ಜೇನುತುಪ್ಪ, ಮೊಸರು, ತೆಂಗಿನ ನೀರು, ಸಕ್ಕರೆ ನೀರು, ಅರಿಶಿನ ಮತ್ತು ಇತರ ಶುಭ ಪದಾರ್ಥಗಳಿಂದ ವಿಶೇಷ ಅಭಿಷೇಕ ಮಾಡಲಾಯಿತು.  ಹೂವಿನ ಅಲಂಕಾರ ಮುಂತಾದ ಧಾರ್ಮಿಕ ಕಾರ್ಯಗಳ ನಂತರ ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೂಗಲಾಯಿತು.  ನೂರಾರು ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ತೊಟ್ಟಿಲು ತೂಗುವ ಮೂಲಕ ತೂಗಿರೇ ಹನುಮಾನ್... ತೂಗಿರೇ ವಾಯುಪುತ್ರನ.. ಎಂದು ಜೋಗುಳ ಹಾಡುವ ಮೂಲಕ ಸಾಂಪ್ರದಾಯಿಕ ಹನುಮಾನ್ ಜಯಂತಿ ಆಚರಣೆ ಮಾಡಿದ್ದು, ಅಬ್ಬಿಗೇರಿಯ  ಆಚರಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಹನುಮನ ತೊಟ್ಟಿಲು ತೂಗಿ ಧನ್ಯತೆ ಮೆರೆದರು.  ಭಜನೆ, ನಾಮಸಂಕೀರ್ತನೆ ಮುಗಿದ ಬಳಿಕ ಮಹಾಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಶುಂಠಿಪುಡಿ ಪ್ರಸಾದ, ಪಂಚಕಜ್ಜೆ, ಪಾನಕವನ್ನು ವಿತರಿಸಲಾಯಿತು.ಹರಕೆ ಹೊತ್ತವರು ತುಳಸಿ, ವಡೆ, ವೀಳ್ಯದೆಲೆ ಹಾರಗಳನ್ನು ಅರ್ಪಿಸಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ