ನಿಜವಾದ ಆಸ್ತಿ ಫಲಾನುಭವಿ ಇದ್ದರೂ ಸಹ ಅವರನ್ನು ಹೊರೆತು ಪಡಿಸಿ ಅನರ್ಹ ವ್ಯಕ್ತಿಗಳು ಫಲಾನುಭವಿಗಳು ಊರಿಗೆ ಹೋಗುವ ಸಂದರ್ಭದಲ್ಲಿ ಅಥವಾ ಫಲಾನುಭವಿಗಳು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ, ಮನೆಯ ಮುಂಭಾಗದಲ್ಲಿ ಮತ್ತು ಖಾಲಿ ಜಾಗದಲ್ಲಿ ತಮ್ಮದೇ ಆದ ಫೋಟೋ ತೆಗೆಸಿಕೊಂಡು ಫೇಕ್ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಅವರ ಹೆಸರಿಗೆ ಎ / ಬಿ ಖಾತವನ್ನು ಮಾಡಿಸಿಕೊಂಡು ನಿಜವಾದ ಫಲಾನುಭವಿಗಳು ಕೇಳುವ ಸಂದರ್ಭದಲ್ಲಿ ಅವರ ಮೇಲೆ ದೌರ್ಜನ್ಯ ದಬ್ಬಾಳಿಕೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಾರೆ . ಇದಕ್ಕೆ ಸಂಬಂಧಪಟ್ಟ ಪಟ್ಟಣ ಪಂಚಾಯತಿ ಅಧಿಕಾರಿಗಳು ಸಹ ಶಾಮಿಲಾಗಾ ದೆ ಅರ್ಹ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳು ಸಂಪೂರ್ಣ ದಾಖಲೆಗಳ ಪರಿಶೀಲನೆ ಮಾಡಿದ ನಂತರ ಅವರ ಹೆಸರುಗಳು ಖಾತೆ ಮಾಡುವುದರಿಂದ ನಿಜವಾದ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ . ಅನರ್ಹರ ಹೆಸರಿಗೆ ನೇರವಾಗಿ ಎ / ಬಿ. ಖಾತಾ ವನ್ನು ನೀಡುವುದರೆ ಪಟ್ಟಣದಲ್ಲಿ ಗೊಂದಲವನ್ನು ಮೂಡಿಸಿದಂತಾಗುತ್ತದೆ. ಅನರ್ಹರು ಗುಂಪುಗಾರಿಕೆ ಯಿಂದ ಅರ್ಹ ಫಲಾನುಭವಿಗಳ ನ್ನು ಬೆದರಿಸುವುದು ಹೆದರಿಸುವುದು ನಿರಂತರವಾಗಿ ಮಾಡುತ್ತಾರೆ ಅರ್ಹ ಫಲಾನುಭವಿಗಳು ಅಶಕ್ತರಾಗಿ ಇರುತ್ತಾರೆ. ಆದ್ದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ ನಿಜವಾದ ಫಲಾನುಭವಿಗಳಿಗೆ ಅಧಿಕಾರಿಗಳು ಆಸ್ತಿ ಹಕ್ಕು ನ್ನು ನೀಡಬೇಕೆಂದು ಮನವಿ ಮಾಡಿಕೊಂಡರು.
ಅನರ್ಹ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಎ/ಬಿ ಖಾತೆ ಮಾಡಲು ಪಟ್ಟಣ ಪಂಚಾಯಿತಿಗೆ ಖಾತೆ ಮಾಡಲು ಅರ್ಜಿಯನ್ನು ನೀಡಿದ ತಕ್ಷಣ, ಮೂಲ ವಾರಸುದಾರರು ಅವರ ಸ್ವ ತ್ತಿಗೆ ಸಂಬಂಧಿಸಿದ ಅಸಲಿ ದಾಖಲೆಗಳೊಂದಿಗೆ ಕಚೇರಿಗೆ ದಾವಿಸಿ . ಖಾತೆ ಮಾಡದಂತೆ ತಡೆಹಿಡಿಯಿರಿ ಎಂದು ಮನವಿ ಪತ್ರವನ್ನು ಸಲ್ಲಿಸಿದ್ದ ಲ್ಲಿ ಜರೂರಾಗಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.
ಓ. ಶ್ರೀನಿವಾಸ್ , ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ನಾಯಕನಹಟ್ಟಿ.