ಮರಿಯಮ್ಮನಹಳ್ಳಿ: ಪಟ್ಟಣದ ದುರ್ಗಾದಾಸ ಕಲಾಂಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳ ಕಾಲ ರಂಗ ಕಲಾಚೌಕಿ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ಶನಿವಾರ ಮತ್ತು ಭಾನುವಾರ ನಾಟಕಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ವಿಜಯನಗರ ಜಿಲ್ಲೆ ಗ್ಯಾರಂಟಿ ಯೋಜನಾ ಅನುಷ್ಠಾನ ಅಧ್ಯಕ್ಷ ಕುರಿ ಶಿವಮೂರ್ತಿ ರವರು ಕಾರ್ಯವನ್ನು ಉದ್ಘಾಟಿಸಲಿದ್ದು, ಪದ್ಮಶ್ರೀ ಪುರಸ್ಕೃತೆ ಡಾ ಮಾತಾ ಮಂಜಮ್ಮ ಜೋಗತಿ ರವರು ಅಧ್ಯಕ್ಷತೆ ವಹಿಸಲಿದ್ದಾರೆ 20.9.2025 ಶನಿವಾರ ರಂಗ ಶಾಲಾ ಬೆಂಗಳೂರು ಇವರಿಂದ ನಾಟಕ ಒ.ಬಿ.ಇ ಪ್ರಶಸ್ತಿ ಸಿಗೋದು ಬಹಳ ಕಷ್ಟ ಮತ್ತು 21.9.2025 ಭಾನುವಾರ ಗೀತಾಮೃತ ಕಲಾ ಟ್ರಸ್ಟ್ ಮರಿಯಮ್ಮನಹಳ್ಳಿ ಇವರಿಂದ ಮುದುಕಿಯ ಮದುವೆ ನಾಟಕ ಅದೇ ದಿನ ಕವಿತಾ ರಂಗ ತಂಡ ಮೈಸೂರು ಇವರಿಂದ ಕೌದಿ ನಾಟಕ ಪ್ರದರ್ಶನ ಗೊಳ್ಳಲಿವೆ ಎಂದು ರಂಗ ಕಲಾಚೌಕಿ ಕಲಾ ಟ್ರಸ್ಟ್ ಅಧ್ಯಕ್ಷ ಸರದಾರ ತಿಳಿಸಿದ್ದಾರೆ.