LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

6 ದಿನಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ

ಮರಿಯಮ್ಮನಹಳ್ಳಿ :  ಪಟ್ಟಣದ ಪ್ರಿಯದರ್ಶಿನಿ ಸ್ವತಂತ್ರ  ಪದವಿ  ಪೂರ್ವ ಕಾಲೇಜ್ ವತಿಯಿಂದ 6 ದಿನಗಳ ಕಾಲ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ವನ್ನು ಹಮ್ಮಿಕೊಳ್ಳಲಾಗುತ್ತಿದೆ  ಎಂದು ಕಾಲೇಜಿನ ಪ್ರಾಚಾರ್ಯ ಎಂ.ಅಶೋಕ ರವರು ಹೇಳಿದರು. ಅವರು ಗುರುವಾರ ಪಟ್ಟಣದ ಪ್ರಿಯದರ್ಶಿನಿ ಸ್ವತಂತ್ರ  ಪದವಿ  ಪೂರ್ವ ಕಾಲೇಜ್ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  ದತ್ತು ಗ್ರಾಮ ಹೊಸ ಅಯ್ಯನಹಳ್ಳಿಯಲ್ಲಿ, ನಶಾ ಮುಕ್ತ ಭಾರತ ಅಭಿಯಾನ  ಘೋಷಣಾ ವಾಖ್ಯಾದೊಂದಿಗೆ  ಸೆ. 20 ರಿಂದ ಸೆ . 26 ವರೆಗೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ.ನೇಮಿರಾಜ ನಾಯ್ಕ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.‌ ವಿಜಯ ನಗರ ಜಿಲ್ಲಾ ಉಪನಿರ್ದೇಶಕ ಲಕ್ಷ್ಮಣ.ಆರ್ ಹಳ್ಳದ ಮನೆ ಹಾಗೂ ಎಸ್ ಎಲ್ ಎನ್ ಎ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಸತ್ಯನಾರಾಯಣ ಹಾಗೂ ವಿಶೇಷ ಶಿಬಿರದ ಶಿಬಿರಾಧಿಕಾರಿ ರಾಮಚಂದ್ರ.ಪಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST