LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನಿಂದ ಬೆಂಗಳೂರಿನಲ್ಲಿ ಜಲ ಸಂಕ್ಷಣೆ, ಪುನಶ್ಚೇತನ ಕುರಿತು ವಿಶೇಷ ಅಭಿಯಾನ

ಬೆಂಗಳೂರು: ಜಲ ಸಂರಕ್ಷಣೆ ಮತ್ತು ಜಲಮೂಲಗಳ ಪುನಶ್ಚೇ ತನ ಕುರಿತು ರಾಷ್ಟ್ರಮಟ್ಟದ ಸ್ವಯಂ ಸೇವಾ ಮಹಿಳಾ ಘಟನೆ  “ಸಂಪೂರ್ಣ” ಮತ್ತು ತೇರಾಪಂತ್ ಮಹಿಳಾ ಮಂಡಲ, ವಿಜಯನಗರದಿಂದ ಸೆ. 10 ರಿಂದ 3-ದಿನಗಳ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಪೂರ್ಣ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಶೋಭಾ ವಿಜಯೇಂದ್ರ ಸಿಂಗ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರದ ಅರ್ಹಮ್ ಭವನ್ ನಲ್ಲಿ ಜಲ ವಾರ್ತಾ – ಅಂದರೆ ಜಲ ಸಂವಾದ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 9.15 ರಿಂದ ಇಡೀ ದಿನ ಜಲ ಸಂರಕ್ಷಣೆ ಕುರಿತು ಸಂವಾದ ನಡೆಯಲಿದೆ. 11 ರಂದು ಅಕ್ಷಯನಗರ ಸರೋವರಕ್ಕೆ ಭೇಟಿ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ನೀತಿ ಆಯೋಗದ 2018 ರ ಜಲ ನಿರ್ವಹಣಾ ಸೂಚ್ಯಂಕದ ಪ್ರಕಾರ, 600 ದಶಲಕ್ಷ ಭಾರತೀಯರು 2030 ರ ವೇಳೆಗೆ ತೀವ್ರ ನೀರಿನ ಬಿಕ್ಕಟ್ಟು ಎದುರಿಸುವ ನಿರೀಕ್ಷೆ ಇದೆ. ದೆಹಲಿ, ಬೆಂಗಳೂರು, ಚೆನ್ನೈ, ಜೈಪುರ, ಪುಣೆ, ಅಹಮದಾಬಾದ್, ಹೈದರಾಬಾದ್ ಮತ್ತು ಇತರ ಹಲವು ರಾಜ್ಯಗಳು ಈಗಾಗಲೇ ಈ ಆತಂಕಕಾರಿ ಸವಾಲನ್ನು ಎದುರಿಸುತ್ತಿವೆ ಎಂದರು.



1993 ರಲ್ಲಿ ಸ್ಥಾಪನೆಯಾದ “ಸಂಪೂರ್ಣ”, ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಮೀಸಲಾಗಿರುವ ಮತ್ತು ನೀರು ಮತ್ತು ಪರಿಸರ ಸಂರಕ್ಷಣೆಗೆ ಬದ್ಧವಾಗಿರುವ ಸಂಸ್ಥೆಯಾಗಿದೆ. ಆದರ್ಶ ಮಹಿಳಾ ಸ್ವಚ್ಛಾಗ್ರಹಿ ಅಭಿಯಾನ, ಮಳೆನೀರು ಕೊಯ್ಲು, ಸೌರ ಫಲಕ ಅಳವಡಿಕೆ. ತ್ಯಾಜ್ಯ ವಿಂಗಡಣೆ, ಗೊಬ್ಬರ ತಯಾರಿಕೆ ಮತ್ತು ಬಟ್ಟೆ ಚೀಲಗಳ ಬಳಕೆ ಮುಂತಾದ ಉಪಕ್ರಮಗಳ ಮೂಲಕ ನಾವು ಸಕ್ರಿಯವಾಗಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

2023 ರ ಜನವರಿ 29 ರಂದು, ಸಂಪೂರ್ಣ, ಅಖಿಲ ಭಾರತ ತೇರಾಪಂಥ್ ಮಹಿಳಾ ಮಂಡಲದ ಸಹಯೋಗದೊಂದಿಗೆ, ಬೆಂಗಳೂರಿನ ಗಾಂಧಿನಗರದಲ್ಲಿ "ನೀರು ಉಳಿಸಿ – ಭವಿಷ್ಯವನ್ನೂ ಉಳಿಸಿ” ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ನೂರಾರು ಮಂದಿ ಅಭಿಯಾನದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಈ ಅಭಿಯಾನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ, ತೇರಾಪಂಥ್ ಸಮಾಜ ಮತ್ತು ಇತರ ಪರಿಸರ ಸಂರಕ್ಷಣಾ ಸಂಸ್ಥೆಗಳು ಬೆಂಬಲಿಸುತ್ತಿವೆ. ಈ ಕಾರ್ಯಕ್ರಮವು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದನ್ನು ಸಾಮೂಹಿಕ ಚಳುವಳಿಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ವಿಶೇಷ ಪ್ರದರ್ಶನ ಮತ್ತು ಹಲವಾರು ಚಿಂತನಶೀಲ ಅಧಿವೇಶನಗಳನ್ನು ಇದು ಒಳಗೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಚಾರ ಸಂಕಿರಣದ ಸಂಚಾಲಕರಾದ ವೀಣಾ ಬೇದ್, ಮಾಧ್ಯಮ ಸಂಚಾಲಕರಾದ ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST