LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೌಶಲ್ಯಯುತ ಜೀವನವೇ ಬದುಕನ್ನು ಸುಂದರವಾಗಿಸುತ್ತದೆ

ತುಮಕೂರು : ನಗರದ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ವತಿಯಿಂದ ದ್ವಿತೀಯ ಸೆಮಿಸ್ಟರ್ ಬಿಸಿಎ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ “ಸೈಬರ್ ಭದ್ರತೆ”ವಿಷಯದ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ|| ಪ್ರಸನ್ನ ಕುಮಾರ್ ಅವರು,  ವಿದ್ಯಾರ್ಥಿಗಳ ಜೀವನ ಕೇವಲ ಓದಿಗಷ್ಟೆ ಸೀಮಿತವಾಗಬಾರದು, ಬದುಕಿನಲ್ಲಿ ನಾವೂ ಕಲಿಯುವ ಕೌಶಲ್ಯಗಳು ನಮ್ಮ ಬದುಕನ್ನು ಸುಂದರವಾಗಿಸಲು ಸಹಾಯ ಮಾಡುತ್ತವೆ. ನಮ್ಮಗಳ ಬದುಕಿನಲ್ಲಿ ನಾವು ಕೇವಲ ಆರ್ಥಿಕ ಸಂಪನ್ಮೂಲಗಳ ಭದ್ರತೆ ಕುರಿತು ಯೋಚಿಸುತ್ತೇವೆ ಹೊರೆತು, ಸಂಪಾದಿಸಿದ ಸಂಪನ್ಮೂಲಗಳ ರಕ್ಷಣೆಯ ಕುರಿತು ಯೋಚಿಸುವುದಿಲ್ಲ, ಪ್ರಸ್ತುತ ದಿನಗಳಲ್ಲಿ ಸೈಬರ್ ಭದ್ರತೆಯ ಕುರಿತು ಆಳವಾಗಿ ಯೋಚಿಸಬೇಕಿದೆ. ಜಗತ್ತಿನೆಲ್ಲಡೆ ಸೈಬರ್ ಭದ್ರತೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಎನ್‌ಐಐಟಿ ಫೌಂಡೇಶನ್ ಸಂಸ್ಥೆಯ ಸಹಾಯಕ ನೇಮಕಾತಿ ವ್ಯವಸ್ಥಾಪಕರಾದ ರಂಜಿತ ಬಿ.ಬಿ ರವರು ಪ್ರಸ್ತುತ ಸನ್ನಿವೇಶದಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ವಾಸಿಸುತ್ತಿರುವ ಪೋಷಕರಿಗೆ ಸೈಬರ್ ಭದ್ರತೆಯ ಕುರಿತು ಸಮರ್ಪಕವಾದ ಜ್ಞಾನ ಇಲ್ಲದಿರುವುದರಿಂದ ಬ್ಯಾಂಕ್ ಖಾತೆಯಲ್ಲಿರುವ ಹಣವು ಅವರ ಗಮನಕ್ಕೆ ಬಾರದೆ ಕಳ್ಳರ ಪಾಲಾಗಿದೆ, ಇಂತಹ ಹಲವು ಸಂದರ್ಭದಲ್ಲಿ ಜನರು ಮೋಸಕ್ಕೆ ಬಲಿಯಾಗುತ್ತಿದ್ದಾರೆ. ನಮ್ಮ ಪೋಷಕರಿಗೂ ಮತ್ತು ಜನ ಸಾಮಾನ್ಯರಿಗೆ ಸೈಬರ್ ಭದ್ರತೆಯ ಕುರಿತು ವಿದ್ಯಾರ್ಥಿಗಳು ಜಾಗೃತಿ ಮೂಡಿಸಿ ಸೈಬರ್ ದಾಳಿಯಿಂದ ರಕ್ಷಿಸಬೇಕಿದೆ ಎಂದರು.

ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಸೈಬರ್ ಭದ್ರತಯೆ ಅವಶ್ಯಕತೆಯ ಕುರಿತು ಸಮರ್ಪಕ ಮಾಹಿತಿಯನ್ನು ಒದಗಿಸಲಾಯಿತು.

ಕಾರ್ಯಾಗಾರದಲ್ಲಿ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ (ವಿಮ್ಟೆಕ್) ಪ್ರಾಂಶುಪಾಲರಾದ ಅಮೂಲ್ಯ ಜಿ, ಎನ್‌ಐಐಟಿ ಫೌಂಡೇಶನ್ ಸಂಸ್ಥೆಯ ಸೆಂಟ್ರಲ್ ಮ್ಯಾನೇಜರ್ ಶಶಿಕುಮಾರ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST