ಹೌದು, ಜೀನ್ಸ್ ವಾಷಿಂಗ್ ಘಟಕಗಳಿಂದ ಪರಿಸರಕ್ಕೆ ಹಾನಿ ಆಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಮುಂಡರಗಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಜೀನ್ಸ್ ವಾಷಿಂಗ್ ಘಟಕಗಳಿಗೆ ಬೀಗ ಹಾಕಲಾಗಿದೆ.

ಜೀನ್ಸ್ ಘಟಕದಿಂದ ಹೊರ ಬಿಡಲಾಗುವ ನೀರನ್ನು ಶುದ್ದೀಕರಿಸದೇ ಯಥಾವತ್ತಾಗಿ ಬಿಡಲಾಗುತ್ತಿತ್ತು ಎಂಬ ಆರೋಪದ ಆಧಾರದ ಮೇಲೆ ಹಲವು ಬಾರಿ ನೊಟೀಸ್ಗಳನ್ನು ಕೊಟ್ಟು ಎಚ್ಚರಿಸಲಾಗಿತ್ತು. ಅದನ್ನು ಲೆಕ್ಕಿಸದೇ ಕೆಮಿಕಲ್ ನೀರು ಸಂಸ್ಕರಿಸದೇ ಬಿಡುವ ಕಾರಣ 36 ಘಟಕಗಳ ಬಾಗಿಲು ಬಂದ್ ಮಾಡಲಾಗಿದೆ. ಇನ್ನೂ ಜೆಸ್ಕಾಂ ನಿಂದಲೂ ವಿದ್ಯುತ್ ಸಪ್ಲೈ ಕಡಿತಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
2 ಲಕ್ಷಕ್ಕೂ ಅಧಿಕ ಜನರು ಬಳ್ಳಾರಿ ಜೀನ್ಸ್ ಉದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದರು. ಇದೀಗ ಘಟಕಗಳು ಕ್ಲೋಸ್ ಆಗಿದ್ರಿಂದ ಜೀನ್ಸ್ ವಾಷಿಂಗ್ ಘಟಕಗಳು ಬಿಕೋ ಎನ್ನುತ್ತಿವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜೀನ್ಸ್ ಘಟಕಗಳು ಬಂದ್ ಆಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇಷ್ಟೆಲ್ಲಾ ಸಮಸ್ಯೆ ಆಗಿದ್ರೂ ಜಿಲ್ಲಾಡಳಿತ ಮಾತ್ರ ಗಪ್ ಚುಪ್ ಆಗಿ ಕುಳಿತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕಳೆದ ವರ್ಷಗಳಲ್ಲಿ ಪಾದಯಾತ್ರೆ ಮೂಲಕ ಬಳ್ಳಾರಿಗೆ ಭೇಟಿ ನೀಡಿದ್ದ ಸಂಸದ ರಾಹುಲ್ ಗಾಂಧಿ ಬಳ್ಳಾರಿಯಲ್ಲಿ ಜೀನ್ಸ್ ಅಪೆರಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷವಷ್ಟೇ ಸಿಎಂ ಸಿದ್ದರಾಮಯ್ಯನವರಿಗೂ ಪತ್ರ ಬರೆದು ಶೀಘ್ರದಲ್ಲೇ ಅಪೆರಲ್ ಪಾರ್ಕ್ ಸ್ಥಾಪನೆ ಮಾಡುವಂತೆ ಸೂಚಿಸಿದ್ದರು. ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಜೀನ್ಸ್ ಘಟಕಗಳು ಬಂದ್ ಆಗಿದ್ದು, ರಾಹುಲ್ ಗಾಂಧಿಯವರು ಹೇಳಿದ ಮಾತು ನೆರವೇರುವುದು ಅನುಮಾನ ಮೂಡಿಸಿದೆ.