LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೊಬೈಲ್ ಬುಕಿಂಗ್ ಆ್ಯಪ್ ನಿಷೇಧಿಸಲು ಮನವಿ

ಬಳ್ಳಾರಿ: ಮೊಬೈಲ್ ಸಂಚಾರಿ ಆಪ್ ಗಳಾದ ರಾಪಿಡೋ, ನಮ್ಮ ಯಾತ್ರೆ ಇತರ ಮೊಬೈಲ್ ಆ್ಯಪ್ ಗಳನ್ನು ನಗರದಲ್ಲಿ ನಿಷೇದಿಸಬೇಕೆಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಹುಂಡೇಕಾರ್ ರಾಜೇಶ್ ಮನವಿ ಮಾಡಿದ್ದಾರೆ.

 

ಆಟೋ ಚಾಲಕರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ ಕರೆದುಕೊಂಡು ಬಂದ ಅವರು, ಬಳ್ಳಾರಿ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಸುಮಾರು ೧೦ ಸಾವಿರ ಆಟೋ ಚಾಲಕರು ಇದ್ದಾರೆ. ಆಟೋ ಚಾಲನೆಯಿಂದ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಬಳ್ಳಾರಿ ನಗರದಲ್ಲಿ ಸಂಚಾರಕ್ಕಾಗಿ ಮೊಬೈಲ್ ಬುಕಿಂಗ್ ಆ್ಯಪ್ ಗಳು ಆಳವಡಿಸಲು ಕಂಪನಿಯವರು ಆಟೋಚಾಲಕರಿಗೆ ಒತ್ತಾಯ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಡಿಸಿ ಅವರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.



ಬಳ್ಳಾರಿ ನಗರ ಸುತ್ತ ಮುತ್ತಲು 5 ಕಿ.ಮಿ ಇದ್ದು ನಮಗೆ ಮತ್ತು ನಮ್ಮ ಚಾಲಕರಿಗೆ ತೊಂದರೆ ಉಂಟಾಗುತ್ತದೆ. ಇದಕ್ಕೆ ಪ್ರಯಾಣಿಕರು ಸಹಕರಿಸುವುದಿಲ್ಲ. ಈ ಆ್ಯಪ್‌ಗಳಿಂದ ಚಾಲಕರ ನಡುವೆ ಸಂಘರ್ಷಗಳು ಉಂಟಾಗುವ ಸಂಭವಿರುತ್ತದೆ. ಜನ ಸಂಪರ್ಕ ಪ್ರದೇಶಗಳು 4-5 ವೃತ್ತಗಳು ಇರುತ್ತವೆ. ಆದರಿಂದ ಆಟೋಗಳು ಪ್ರತಿ ವೃತ್ತದಲ್ಲಿ ಇರುತ್ತವೆ.ಬಳ್ಳಾರಿ ನಗರ ಇತರ ದೊಡ್ಡ ನಗರಗಳಂತೆ ವಿಸ್ತೀರ್ಣ ಹೊಂದಿಲ್ಲ. ಅದರಿಂದ ಬಡಚಾಲಕರಿಗೆ ಯಾವುದೇ ಈ ಆ್ಯಪ್ ಗಳಿಂದ ಲಾಭದಾಯಕವಿಲ್ಲ.

ನಗರ ಮತ್ತು ಗ್ರಾಮಾಂತರ ಭಾಗದ ಎಲ್ಲ ಚಾಲಕರು ಮತ್ತು ಮಾಲೀಕರ ಪರವಾಗಿ ಈ ಮೊಬೈಲ್ ಬುಕಿಂಗ ಆಪ್‌ಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ರಾಜೇಶ್ ಹುಂಡೇಕಾರ್ ತಿಳಿಸಿದ್ದಾರೆ. 7 ದಿನಗಳ ಒಳಗಾಗಿ ನಿಲ್ಲಿಸದಿದ್ದರೆ ಆಟೋಚಾಲಕರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST