‘ನಗರದ ಕೌಲ್‌ಪೇಟೆ ನಿವಾಸಿ ಕೆ.ಗಂಗಾಧರ ಸೆಪ್ಟೆಂಬರ್ ೨೮ರಂದು ಎಚ್‌ಎಲ್ಸಿ ಕಾಲುವೆಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿ ತ್ತು. ಈ ಸಾವಿನ ಕುರಿತು ಅವರ ಪತ್ನಿ ಕೆ.ಶಾರದಮ್ಮ ಅವರು ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದರು. ಮೂರು ತಂಡ ರಚಿಸಿ ತನಖೆ ನಡೆಸಿದಾಗ ಆರೋಪಿಗಳ ಸಂಚು ಬಯಲಾಗಿದೆ’ ನಗರದ ರವಿ, ಅಜಯ್, ರೀಯಾಜ್ ಕೊಲೆ ಆರೋಪಿಗಳು. ಆಕ್ಸಿಸ್ ಬ್ಯಾಂಕ್ ನೌಕರ ಯೋಗರಾಜ್ ಸಿಂಗ್ ಕೃತ್ಯಕ್ಕೆ ಯೋಜನೆ ರೂಪಿಸಿದ್ದಾರೆ. ಕೊಪ್ಪಳ ಗಂಗಾವತಿ ಬಾಲಕಿಯರ ಪಿಯು ಕಾಲೇಜು ಉಪ ಪ್ರಾಂಶುಪಾಲರಾಗಿ ಕೃಷ್ಣಪ್ಪ ಈ ಕೃತ್ಯಕ್ಕೆ ಕಿಂಗ್ ಪಿನ್ ಆಗಿದ್ದಾರೆ. ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕಿ ಜಾಹ್ನವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಡಿಎಸ್‌ಪಿ ಡಾ.ಟಿ.ಮಂಜುನಾಥ, ಪಿ.ಐ ಗಳಾದ ಲಖನ್. ಆರ್.ಮಸಗುಪ್ಪಿ, ಡಿ.ಹುಲುಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಕರಣದ ತನಿಖೆ ಸಂಬಂಧ ಎಸ್‌ಪಿಯವರು ೦೩ ತಂಡಗಳನ್ನು ರಚಿಸಿದ್ದು ಘಟನೆ ನಡೆದ ೨೪ ಗಂಟೆಗಳಲ್ಲಿಯೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನಲೆ: ‘ಗಂಗಾಧರ ಅವ ರಿಗೆ ತೀವ್ರ ಅನಾರೋಗ್ಯ, ಆರ್ಥಿಕ ಸಂಕಷ್ಟ ಕಾಡುತಿತ್ತು. ಅವರ ಪರಿಸ್ಥಿತಿಯ ಲಾಭ ಪಡೆಯಲು ಆರು ಜನರು ಸಂಚು ರೂಪಿಸಿದರು. ಅವರಿಗೆ ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯನ್ನು ಪತ್ನಿ ಎಂದು ನಮೂದಿಸಿ ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು. ಗಂಗಾಧರನ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು, ನಕಲಿ ನಾಮಿನಿ ಸೃಷ್ಟಿಸಿದ್ದರು. ವಿವಿಧ ವಿಮಾ ಕಂಪನಿಗಳಲ್ಲಿ ೫.೨೫ ಕೋಟಿ ಮೊತ್ತದ ಅಪಘಾತ ವಿಮೆ, ಇತರೆ ವಿಮೆಯ ಆರು ಪಾಲಿಸಿಗಳನ್ನು ಮಾಡಿಸಿ ಆರೋಪಿಗಳೇ ಪ್ರೀಮಿಯಂ ಹಣ ತುಂಬಿದ್ದರು. ಆದರೆ, ಅವರು ಬೇಗನೇ ಮೃತಪಡದ ಕಾರಣ ಕೆಲ ಪಾಲಿಸಿಗಳು ತಿರಸ್ಕೃತಗೊಂಡವು. ಹೀಗಾಗಿ ಅಪಘಾತ ವಿಮೆ ಪಾಲಿಸಿಯ ಹಣವನ್ನು ಪಡೆಯಲು ವ್ಯಕ್ತಿಯನ್ನು ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಿದ್ದರು’ ಎಂದು ಅವರು ವಿವರಿಸಿದರು. ೦೬ ಜನ ಆರೋಪಿಗಳು ಸೇರಿಕೊಂಡು ಹೊಸಪೇಟೆಯ ವಾಸಿ ಗಂಗಾಧರ.ಕೆ ಈತನ ತೀವ್ರತರನಾದ ಅನಾರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯ ಲಾಭವನ್ನು ಪಡೆಯಲು ಆತನಿಗೆ ಮದುವೆಯಾಗಿದ್ದರೂ ಸಹ, ಬೇರೊಬ್ಬ ಮಹಿಳೆಯೊಂದಿಗೆ ಹೊಸಪೇಟೆಯ ನೊಂದಣಾಧಿಕಾರಿಗಳ ಕಛೇರಿಯಲ್ಲಿ ರಿಜಿಸ್ಟರ್ ಮದುವೆ ಮಾಡಿಸಿ.
ನಕಲಿ ನಾಮಿನಿಯನ್ನು ಸೃಷ್ಟಿಸಿ, ಮೃತ ಗಂಗಾಧರನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಪಾನ್ ಕಾರ್ಡ್ ಮಾಡಿಸಿ, ಆದಾಯ ತೆರಿಗೆ ಕಟ್ಟಿ, ಆತನ ಹೆಸರಿನಲ್ಲಿ ವಿವಿಧ ಇನ್ಸೂರೆನ್ಸ್ ಕಂಪನಿಗಳಲ್ಲಿ ಅಪಘಾತ ಮತ್ತು ಇತರೆ ರೀತಿಯ ೫ ಕೋಟಿ, ೨೫ ಲಕ್ಷ ಮೌಲ್ಯದ ೦೬ ಇನ್ಸೂರೆನ್ಸ್ ಪಾಲಿಸಿಗಳನ್ನು ಮಾಡಿಸಿ, ತಾವೇ ಪ್ರೀಮಿಯಂ ಹಣವನ್ನು ತುಂಬಿ, ಆ ಇನ್ಸೂರೆನ್ಸ್ ಗಳಿಗೆ ನಕಲಿ ನಾಮಿನಿಯನ್ನು ರಿಜಿಸ್ಟರ್ ಮಾಡಿಸಿ, ಬ್ಯಾಂಕ್ ಖಾತೆಯನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು, ಗಂಗಾಧರ. ಕೆ ಇವರ ಮೇಲಿನ ಇನ್ಸೂರೆನ್ಸ್ ಹಣವನ್ನು ಕ್ಲೈಮ್ ಮಾಡಿಕೊಳ್ಳುವ ಸಲುವಾಗಿ ಒಳಸಂಚು ರೂಪಿಸಿದ್ದರು. ಆದರೆ ಗಂಗಾಧರ ಇವರು ಅನಾರೋಗ್ಯದಿಂದ ಬೇಗ ಮೃತಪಡದೆ ಇರುವುದರಿಂದ ಹಾಗೂ ಕೆಲವೊಂದು ಇತರೆ ಇನ್ಸೂರೆನ್ಸ್‌ಗಳು ರಿಜೆಕ್ಟ್ ಆಗಿದ್ದ ರಿಂದ, ಅಪಘಾತದ ಇನ್ಸೂರೆನ್ಸ್‌ಗಳನ್ನು ಕ್ಲೈಮ್ ಮಾಡಿಕೊಂಡಲ್ಲಿ ಎಲ್ಲಾ ಹಣವನ್ನು ನೈಸರ್ಗಿಕವಾಗಿ ಆದಷ್ಟು ಬೇಗನೆ ಪಡೆದುಕೊಳ್ಳಬಹುದು ಎನ್ನುವ ದುರಾಲೋಚನೆಯಿಂದ ಆರೋಪಿತರು ಒಳಸಂಚು ರೂಪಿಸಿದಂತೆ ಕೆ.ಗಂಗಾಧರ ಇವರ ಹೆಸರಿನಲ್ಲಿ ಮೃತಪಡುವ ಹಿಂದಿನ ದಿನ ಸೆಕೆಂಡ್ ಹ್ಯಾಂಡ್ ಟಿ.ವಿ.ಎಸ್ ಎಕ್ಸ್ ಎಲ್ ಬೈಕನ್ನು ಖರೀದಿಸಿ, ಅದೇ ದಿನ ಇನ್ಸೂರೆನ್ಸ್ ಮಾಡಿಸಿ, ಆತನನ್ನು ಕೊಲೆ ಮಾಡಿರುತ್ತಾರೆ ಎಂದು ಎಸ್‌ಪಿ ಜಾಹ್ನವಿ ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೊಂಡ ತನಿಖಾಧಿಕಾರಿಗಳು ೨೪ ಗಂಟೆಯೊಳಗಡೆ ಆರೋಪಿತರನ್ನು ಪತ್ತೆಹಚ್ಚಿ, ಆರೋಪಿಗಳಿಂದ ಕೃತ್ಯಕ್ಕೆ ಸಂಬಂಧಿಸಿದ ವಾಹನಗಳು, ಹಣ, ಮೊಬೈಲ್‌ಗಳು ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿರುತ್ತಾರೆ. ಕಾರ್ಯಾಚರಣೆ ಎಸ್‌ಪಿ ಜಾಹ್ನವಿ, ಎಎಸ್‌ಪಿ ಮಂಜುನಾx ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಡಿಎಸ್‌ಪಿ ಟಿ.ಮಂಜುನಾಥ, ನೇತೃತ್ವದಲ್ಲಿ ಪಟ್ಟಣ ಠಾಣೆ ಪಿಐ ಲಖನ್.ಆರ್.ಮಸಗುಪ್ಪಿ, ಪಿ.ಐ ಸಂಚಾರ ಠಾಣೆ ಡಿ.ಹುಲುಗಪ್ಪ, ಪಿ.ಎಸ್.ಐ ಎಸ್.ಪಿ.ನಾಯ್ಕ, ಎ.ಎಸ್.ಐ ಕೋರಿ ಕೃಷ್ಣಪ್ಪ, ಕೀಮ್ಯಾನಾಯ್ಕ್ ಹೆಡ್ ಕಾನ್‌ಸ್ಟೇಬಲ್‌ಗಳಾದ ದೊಡ್ಡ ಈರಣ್ಣ, ಕೃಷ್ಣಪ್ಪ, ಶ್ರೀನಾಥ, ಬಿ.ರಾಘವೇಂದ್ರ, ಲಿಂಗರಾಜ, ನೀಲಾಂಜನಮೂರ್ತಿ, ಹಾಗೂ ಪಿ.ಸಿಗಳಾದ ಎ.ಕೊಟ್ರೇಶ, ಜೋಗಿ ಕೊಟ್ರೇಶ, ಪಕ್ಕೀರಪ್ಪ, ದೇವೇಂದ್ರ, ಶಿವಪ್ಪ ಹಾಗೂ ತನಿಖಾ ಸಹಾಯಕರುಗಳಾದ ಕೆ.ಸಿದ್ದಪ್ಪ, ಕೆ.ನಾಗರಾಜ, ಹಾಲೇಶಗೌಡ, ಆನಂದಗೌಡ, ಹನುಮಾನಾಯ್ಕ್ ಬಿ.ಚಂದ್ರಪ್ಪ, ರಘು ಪಾಲ್ಗೊಂಡಿರುತ್ತಾರೆ. ಇವರ ಕಾರ್ಯವನ್ನು ಶ್ಲಾಘಿಸಿದ ಎಸ್‌ಪಿ ಜಾಹ್ನವಿ ಅವರು ನಗದು ಬಹುಮಾನ ಘೋಷಣೆ ಮಾಡಿದ್ದಾರೆ.