LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅದ್ದೂರಿಯಾಗಿ ನೆರವೇರಿದ ಗಣರಾಜ್ಯೋತ್ಸವ

ಮರಿಯಮ್ಮನಹಳ್ಳಿ: ಜನವರಿ.26 ರಂದು 77 ನೇ ಗಣರಾಜ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮವನ್ನು ಪಟ್ಟಣ ಹಾಗೂ ಹೋಬಳಿಯಾದ್ಯಾಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪಿಎಸ್ಐ ತಾರಾಬಾಯಿ,ಧ್ವಜಾರೋಹಣ ನೇರವೇರಿಸಿ ಮಾತನಾಡಿದರು,ಪಟ್ಟಣದ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷರಾದ ಆದಿಮನಿ ಹುಸೇನ್ ಭಾಷಾ,ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾದ ಬಿ ವಿಜಯಕುಮಾರ್ ದ್ವಜಾರೋಹಣ ನೆರವೇರಿಸಿದರು. ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಧ್ವಜಾರೋಹಣ ನೆರವೇರಿಸಿದರು.ನಾಡ ಕಛೇರಿಯಲ್ಲಿ ಉಪತಹಶಿಲ್ದಾರ ಧ್ವಜಾರೋಹಣ ನೆರವೇರಿಸಿದರು.ಅಲ್ಲದೇ ಡಣಾಪುರ,ಡಣಾನಾಯಕನಕೆರೆ,ಜಿ ನಾಗಲಾಪುರ,ಚಿಲಕನಹಟ್ಟಿ ಗ್ರಾಮ ಪಂಚಾಯಿತಿಗಳಲ್ಲಿ ಅದ್ಯಕ್ಷರುಗಳು ದ್ವಜಾರೋಹಣ ನೆರವೇರಿಸಿದರು.

 

ಹೋಬಳಿಯಾದ್ಯಾಂತ ಸರಕಾರಿ ಶಾಲಾ-ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು,ಪಟ್ಟಣ ಪಂಚಾಯತಿ,ಪೋಲೀಸ್ ಠಾಣೆ, ಬಸ್ ಮತ್ತು ವಾಣಿಜ್ಯ ಮಳಿಗೆಗಳು,ಕಚೇರಿ,ಅಂಗಡಿ ಮುಗ್ಗಟ್ಟುಗಳು ಸೇರಿದಂತೆ ಅನೇಕ ಮಾದರಿಯ ಜನವಸತಿ ಪ್ರದೇಶಗಳಲ್ಲಿ ತಿರಂಗವು ಪಟ್ಟಣದ ಎಲ್ಲೆಡೆಯೂ ರಾರಾಜಿಸಿದೆ.ಪಟ್ಟಣದ ತುಂಬೆಲ್ಲಾ ಹಬ್ಬದ ಸಂಭ್ರಮ.77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಪಟ್ಟಣ ಹಾಗೂ ಹೋಬಳಿಯದ್ಯಾಂತ  ಶಾಲಾಮಕ್ಕಳು ಪ್ರಭಾತ್ ಪೇರಿ ನಡೆಸಿ,ಘೋಷಣೆಗಳನ್ನು ಕೂಗಿದರು. ಪಟ್ಟಣ ಸೇರಿದಂತೆ



ಹೋಬಳಿ ವ್ಯಾಪ್ತಿಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮಗಳಿಂದ ಜನರು ಆಚರಿಸಿದರು. ಮುಖ್ಯ ಬೀದಿಗಳಲ್ಲಿ ರಾಷ್ಟ್ರಧ್ವಜ ರಾರಾಜಿಸಿದವು.ಅಲ್ಲದೇ ಆಟೋ ಚಾಲಕರು,ವಾಹನಸವಾರರು ತಮ್ಮ ವಾಹನಗಳಿಗೆ ತಿರಂಗಗಳನ್ನು ಕಟ್ಟಿದರು.ಶಾಲಾ ಮಕ್ಕಳು ರಾಷ್ಟ್ರಧ್ವಜ ಮಾದರಿಯ ವಿವಿಧ ಅಲಂಕಾರಿಕಗಳನ್ನು ಧರಿಸಿ ತೆರಳಿದ್ದು ಕಂಡು ಬಂದಿದೆ.ಶಾಲಾ-ಕಾಲೇಜುಗಳಲ್ಲಿ ನಾಡು-ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು,

ಮಕ್ಕಳಿಂದ ಛದ್ಮವೇಷಗಳು,ನೃತ್ಯಗಳು ಪ್ರದರ್ಶನಗೊಂಡವು.ಪಟ್ಟಣದ ಆರಾದ್ಯದೈವ ಶ್ರೀನಾಣೀಕೇರಿ ಆಂಜನೇಯಸ್ವಾಮಿಗೆ ರಾಷ್ಟ್ತಧ್ವಜದ ತ್ರಿವರ್ಣದ ಮಾದರಿಯ ಅಲಂಕಾರ ಗಮನಸೆಳೆಯಿತು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST