ಎಳೆ ವಯಸ್ಸಿನಲ್ಲಿಯೇ ಉತ್ತಮ ಸಂಪ್ರದಾಯ, ಸಂಸ್ಕೃತಿ ಕಲಿಸಬೇಕು
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ, ಮೂಡಲಪಾಳ್ಯದಲ್ಲಿ ಶಾರದ ವಿದ್ಯಾನಿಕೇತನದ ನೂತನ ಕಟ್ಟಡದಲ್ಲಿ ಹೊಸದಾಗಿ ಶಾಲೆಗೆ ಸೇರಿದ 50 ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು.
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಿ.ಆರ್.ವಿಜಯಸಾರಥಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಡಿ.ಆರ್.ವಿಜಯಸಾರಥಿರವರು ಮಾತನಾಡಿ, ಮಕ್ಕಳು ದೇವರ ಸಮಾನ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಏನನ್ನು ಕಲಿಯುತ್ತಾರೆ ಅದನ್ನು ಜೀವನ ಪೂರ್ತಿ ಪಾಲಿಸಿ ಕೊಂಡು ಬರುತ್ತಾರೆ. ಚಿಕ್ಕ ಮಕ್ಕಳಿಗೆ ಪಾಠದ ಜೊತೆಯಲ್ಲಿ ಕ್ರೀಡೆ ಮತ್ತು ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದ ಗಣ್ಯ ಮಹನೀಯರ ಜೀವನಗಾಥೆ, ನಮ್ಮ ಸಂಸ್ಕೃತಿ, ಸಂಪ್ರಾದಯಗಳನ್ನು ಹೇಳಿಕೊಟ್ಟರೆ ಜೀವನದಲ್ಲಿ ಉತ್ತಮ ಪ್ರಜೆಗಳಾಗಬಹುದು ಎಂದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.