LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಣ್ಣಿಗೆ ಬಟ್ಟೆ ಕಟ್ಟಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

ಬಳ್ಳಾರಿ : ಕಲಿಯುಗದ ಗಾಂಧಾರಿಯಾದ ಬಳ್ಳಾರಿಯ ಹಿಮಬಿಂದು ಎಂಬ ವಿದ್ಯಾರ್ಥಿನಿಯಿಂದ ವಿಶೇಷ ಸಾಧನೆ.

ಹೌದು, ಬಳ್ಳಾರಿಯ ಕುರವಳ್ಳಿ ತಿಮ್ಮಪ್ಪ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಹಿಮಬಿಂದು  ಕಣ್ಣಿಗೆ ಕಾಟನ್ ಇಟ್ಟು ಅದರ ಮೇಲೆ ಕಪ್ಪು ಬಟ್ಟೆ ಕಟ್ಟಿ ಪರೀಕ್ಷೆ ಬರೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ.



ಸದ್ಯ ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ  ಸಮಾಜ ವಿಜ್ಞಾನ ಪರೀಕ್ಷೆಯನ್ನು ಬರೆದಿದ್ದಾಳೆ. ಎಂಟನೇ ತರಗತಿಯ ಮುಂದಿನ ಎಲ್ಲಾ ಪರೀಕ್ಷೆಗಳನ್ನ ಕಣ್ಣಿಗೆ ಬಟ್ಟೆಕಟ್ಟಿಯೇ ಬರೆಯಲು ನಿರ್ಧರಿಸಿದ್ದಾಳೆ ಎಂದು ತಿಳಿದುಬಂದಿದೆ.



ಕಣ್ಣಿಗೆ ಬಟ್ಟೆಕಟ್ಟಿಯೇ ಪೋಟೋ‌ಗಳನ್ನ ಗುರುತಿಸುವ ಹಿಮಬಿಂದು ಪಿಎಂ ನರೇಂದ್ರ ಮೋದಿ, ಆಂಜನೇಯಸ್ವಾಮಿ, ಶ್ರೀ ಕನಕದಾಸರು ಹೀಗೆ ಹಲವು ಪೋಟೋಗಳನ್ನ ಥಟ್ಟ್ಂತ ಹೇಳುತ್ತಾಳೆ . ಮೊಬೈಲ್‌ನಲ್ಲಿ ಏನೆ ಟೆಕ್ಸ್ಟ್ ಇದ್ದರು ಪಟ್ಟಂತ ಹೇಳುತ್ತಾಳೆ . ಹನ್ನೊಂದು ವರ್ಷದವಳಿದ್ದಾಗಿನಿಂದಲೂ ಗಾಂಧಾರಿ ವಿದ್ಯೆ ಕರಗತ ಮಾಡಿಕೊಂಡಿದ್ದು, ವಿದ್ಯಾರ್ಥಿನಿಯ ಸಾಧನೆಗೆ ಪೋಷಕರು, ಶಿಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST