LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜನರ ನೆಮ್ಮದಿ ಕಸಿದ ಖತರ್ನಾಕ್ ಹಂದಿ ಕಳ್ಳರ ಗ್ಯಾಂಗ್.....!

ಅರಕೇರಾ: ಪಟ್ಟಣದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಇದರ ಜೊತೆಗೆ ಹಂದಿ ಕಳ್ಳರ ಖತರ್ನಾಕ್ ಗ್ಯಾಂಗ್ ಎಂಟ್ರಿ ಕೊಟ್ಟು ಜನರ ಜೀವ ಹಿಂಡುತ್ತಿದೆ. ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹಂದಿ ಕಳ್ಳತನಕ್ಕೆ ಸಂಚು ರೂಪಿಸಿದ್ದ ಗ್ಯಾಂಗ್ ‌ಗೆ ಹಂದಿಗಳು ಸಿಕ್ಕಿಲ್ಲ.  ಅದೇ ಸಮಯದಲ್ಲಿ ದಿನನಿತ್ಯದ ಕೆಲಸ ಕಾರ್ಯಕ್ಕೆಂದು ಬೈಕ್ ಮೇಲೆ ತೆರಳುತ್ತಿದ್ದ  ಸ್ಥಳೀಯ ಇಬ್ಬರನ್ನೂ ಕಂಡ ಕಳ್ಳರ ಗ್ಯಾಂಗ್ ಇವರ ಮೇಲೆ ಗಾಜಿನ ಬಾಟಲ್ ಎಸೆದು ದಾಳಿಗೆ ಮುಂದಾಗಿದ್ದಾರೆ.‌ ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ತಮ್ಮ ಬೈಕ್ ಗಳನ್ನು ಅಲ್ಲಿಯೇ ಬಿಟ್ಟು  ಸಿನಿಮೀಯ ರೀತಿಯಲ್ಲಿ ಬಚಾವ್ ಆಗಿದ್ದಾರೆ.

ಇವರ ಮೇಲಿನ ಕೋಪಕ್ಕೆ ಎರಡು ಬೈಕ್ ಗಳ ಮೇಲೆ ಕಲ್ಲು ಎತ್ತಿಹಾಕಿ ಜಖಂಗೊಳಿಸಿದ್ದಾರೆ. ಮೊದಲಿಗೆ ಪಟ್ಟಣದ ಟಿಪ್ಪು ಸುಲ್ತಾನ್ ಚೌಕ್ ಬಳಿ ಓರ್ವ ಬೈಕ್ ಸವಾರನ ಮೇಲೆ ದಾಳಿ ಯತ್ನ ನಡೆದಿದೆ. ನಂತರ ಬಸ್ ನಿಲ್ದಾಣದಲ್ಲಿ ಮತ್ತೋರ್ವ ವ್ಯಕ್ತಿಯ ಮೇಲೆ ದಾಳಿ ಮಾಡಲು ಕಳ್ಳರ ಗ್ಯಾಂಗ್ ಮುಂದಾಗಿದೆ. ಅಲ್ಲಿಯು ಸಹ ಬೈಕ್ ಮೇಲೆ ಕಲ್ಲು ಹಾಕಿ ಗಾಜಿನ ಬಾಟಲ್  ಎಸೆದು ಜಖಂಗೊಳಿಸಿ ಅಲ್ಲಿಂದ ತಾವು ಕಳ್ಳತನಕ್ಕೆ ಬಳಸುವ ಬುಲೆರೋ ಪಿಕಪ್ ವಾಹನದಲ್ಲಿ ಪರಾರಿಯಾಗಿದ್ದಾರೆ.



ಪಟ್ಟಣದಲ್ಲಿ ಹಂದಿ ಕಳ್ಳರ ಗ್ಯಾಂಗ್ ಸಕ್ರಿಯವಾಗಿದೆ. ಪ್ರತಿ ಬಾರಿ ಕಳ್ಳತನ ಮಾಡಿ ಹಂದಿಗಳನ್ನು ಕದ್ದೋಯುತ್ತಾರೆ. ಹಂದಿಗಳು ಸಿಗದೇ ಹೋದರೆ. ಮೇಕೆ ಅಥವಾ ಕುರಿ‌ ಕಳ್ಳತನ ಮಾಡುತ್ತಾರೆ. ಇಲ್ಲವೆ ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗುತ್ತಾರೆ. ಹಂದಿ ಕಳ್ಳರ ಗ್ಯಾಂಗ್ ನಡೆಸುವ ದಾಳಿ ಹಾಗೂ ಕೃತ್ಯಗಳಿಗೆ ಸ್ಥಳೀಯರು ಭಯ‌ ಭೀತರಾಗಿದ್ದರೆ. ಕಳ್ಳರಿಗೆ ಹೆದರಿ ಬೆಳಗಿನ ಜಾವ ವಾಕಿಂಗ್ , ವ್ಯಾಯಾಮದಂತಹ ದಿನ ನಿತ್ಯದ ಚಟುವಟಿಕೆಗಳು ವಿರಳವಾಗಿವೆ.ಇಷ್ಟೆಲ್ಲಾ ಘಟನೆಗಳು ನಡೆದರು.‌ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ. ಜನ‌ ಸ್ನೇಹಿ ಪೋಲಿಸರ ಮೇಲೆ ಸ್ಥಳೀಯವಾಗಿ ನಂಬಿಕೆ ಕಡಿಮೆ ಆಗತೊಡಿಗಿದೆ. ಖತರ್ನಾಕ್ ಗ್ಯಾಂಗ್ ನಿಂದ ದುಷ್ಕೃತ್ಯ ನಡೆಯುವ ಮುನ್ನ ಪೊಲೀಸ್ ‌ಇಲಾಖೆ ಅಲರ್ಟ ಆಗಿ. ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

 

ಅರಕೇರಾದಲ್ಲಿ ರಾತ್ರಿ ವೇಳೆ ಗಸ್ತು ತಿರುಗುವಿಕೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ.


ಅಮರೇಶ ಬಿರಾದಾರ ತಹಶೀಲ್ದಾರ ಅರಕೇರಾ,



 
ಕಳ್ಳತನ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಭದ್ರತೆ ನೀಡಲು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು. ಜನರಿಗೆ ತೊಂದರೆ ಆಗದಂತೆ ರಕ್ಷಣೆ ನೀಡಲಾಗುತ್ತದೆ.

ದತ್ತಾತ್ರೇಯ ಕರ್ನಾಡ್ . ಡಿವೈಎಸ್ ಪಿ ಲಿಂಗಸ್ಗೂರು.


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST