LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಹಕರ ಸ್ನೇಹಿ, ಕನ್ನಡಿಗರ ಹೆಮ್ಮೆಯ ಸ್ಮಾರ್ಟ್ ಕ್ವಿಕ್ ಇ-ಕಾರ್ಮಸ್ ಉದ್ಯಮದಲ್ಲಿ ಅಪೂರ್ವ ಸಾಧನೆ

ಬೆಂಗಳೂರು: ಭಾರತದ ಮೊದಲ ಇ-ಕಾಮರ್ಸ್ ಅಫಿಲಿಯೇಟೆಡ್ ಸಂಸ್ಥೆ ಸ್ಮಾರ್ಟ್ ಕ್ವಿಕ್ ತನ್ನ ಪ್ರಥಮ ವರ್ಷದ ಸಂಭ್ರಮಾಚರಣೆಯನ್ನು ಭವ್ಯವಾಗಿ ಆಚರಿಸಿತು.

 

ಈ ಕಾರ್ಯಕ್ರಮವನ್ನು ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿರವರು,   ಬೇಲಿ ಮಠದ ಶ್ರೀ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮೀಜಿಗಳು, ಸದಸ್ಯರು  ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ ಡಾ. ಎಂ. ನವೀನ್ ಕುಮಾರ್,  ಒಕ್ಕಲಿಗರ ಯುವ ಬ್ರಿಗೇಡ್ ಅಧ್ಯಕ್ಷರಾದ ನಂಜೇಗೌಡ ನಂಜುಂಡ ಹಾಗೂ ಸ್ಮಾರ್ಟ್ ಕ್ವಿಕ್ ಸಂಸ್ಥೆಯ ಸಂಸ್ಥಾಪಕರಾದ ದೀಪುಗೌಡರವರು ದೀಪ ಬೆಳಗಿಸಿ ಉದ್ಘಾಟಿಸಿದರು.



ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಅವರು, “ಸರ್ಕಾರ ಎಲ್ಲ ಕೆಲಸವನ್ನೂ ಮಾಡಲಾಗುವುದಿಲ್ಲ. ಖಾಸಗಿಕರಣದ ಮೂಲಕ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚೇತನ ಸಾಧ್ಯ. ಇ-ಕಾಮರ್ಸ್ ಮೂಲಕ ನಗರದಲ್ಲಿಯೇ ಅಲ್ಲ, ಗ್ರಾಮೀಣ ಭಾಗಗಳಿಗೂ ಸೇವೆ ತಲುಪಬೇಕು. ಇದರಿಂದ ಗ್ರಾಮೀಣ ಮಕ್ಕಳಿಗೆ ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆ ದೊರೆಯುತ್ತದೆ” ಎಂದು ಹೇಳಿದರು.

 

ಸಂಸ್ಥಾಪಕರಾದ ದೀಪುಗೌಡ ಅವರು ಮಾತನಾಡಿ, “ಇ-ಕಾಮರ್ಸ್ ಉದ್ಯಮ ಇಂದು ನಿರುದ್ಯೋಗ ನಿವಾರಣೆ, ಆರ್ಥಿಕ ಸ್ವಾವಲಂಭನೆ ಹಾಗೂ ಸ್ವಯಂ ಉದ್ಯೋಗಕ್ಕೆ ದೊಡ್ಡ ವೇದಿಕೆಯಾಗಿದೆ. ನಮ್ಮ ಸಂಸ್ಥೆ ಸ್ಮಾರ್ಟ್ ಕ್ವಿಕ್ ಒಂದು ವರ್ಷದಲ್ಲಿ ಲಕ್ಷಾಂತರ ಗ್ರಾಹಕರ ವಿಶ್ವಾಸ ಗಳಿಸಿದೆ. ಸಾವಿರಾರು ಯುವಕರಿಗೆ ಉದ್ಯೋಗ ಒದಗಿಸಿದೆ. ನಾವು ಸೂಪರ್ ಮಾರ್ಕೆಟ್ ಆರಂಭಿಸಿದ್ದು, ಮುಂದಿನ ಆರು ತಿಂಗಳಲ್ಲಿ 10ಕ್ಕೂ ಹೆಚ್ಚು ಶಾಖೆಗಳನ್ನು ಜೈಪುರ ಸೇರಿದಂತೆ ಹಲವು ನಗರಗಳಲ್ಲಿ ಆರಂಭಿಸಲು ಯೋಜಿಸಿದೆವು” ಎಂದು ಹೇಳಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST