LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಹಕಾರ ಸಂಘ ಸಾರ್ವಜನಿಕ ಆಸ್ತಿ

ನಾಯಕನಹಟ್ಟಿ : ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘ ನಾಲ್ಕು ಗೋಡೆಗೆ ಸೀಮಿತವಲ್ಲ, ಇದು ಸಾರ್ವಜನಿಕರ ಆಸ್ತಿ ಎಂದು ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ.ಆರ್.ರವಿಕುಮಾರ್ ಹೇಳಿದರು.

 

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು ರೈತರಿಗಾಗಿ ಇರುವ ಸಹಕಾರ ಸಂಘ, ರೈತರು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು. ರೈತರು ಕೃಷಿ ಜೊತೆಗೆ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಮಾಡಿದರೆ ನಿಮ್ಮ ಕುಟುಂಬಗಳಿಗೆ ಶಕ್ತಿ ಬಲ ತುಂಬತ್ತದೆ. ಸಾಲ ಪಡೆದ ರೈತರು ಸರಿಯಾದ ಸಮಯಕ್ಕೆ ಮರು ಪಾವತಿಸಿ ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ರೈತರು ಹೊಸದಾಗಿ ಸೇರಲು ಇಚ್ಛಿಸುವವರು ಷೇರು ಕಟ್ಟಿ ಸದಸ್ಯವನ್ನು ಪಡೆದುಕೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಿದರು. ಹುಟ್ಟಿದಾಗಿನಿಂದಲೂ ಇಲ್ಲಿಯವರೆಗೂ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿದೆ. ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘ ನಷ್ಟವಾಗಿದ್ದು, ಇದಕ್ಕೆ ಆಡಳಿತ ಕಾರ್ಯದರ್ಶಿನೆ ಎಂದು ನೇರ ಆರೋಪ ಮಾಡಿದರು. ಕೆಲವು ಹೋಬಳಿಯ ರೈತರು ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಮರು ಪಾವತಿ ಮಾಡದಿರುವುದು ಬಹಳ ಹಿನ್ನಡೆಯಾಗಿದೆ. ಇದರಿಂದ ಹೊಸ ರೈತರಿಗೆ ನೀಡುವುದು ಸವಾಲಾಗಿದೆ. ಆದರು ಹೊಸ ರೈತರಿಗೆ ಸಾಲ ನೀಡಲು 76 ಕೋಟಿ ಮೀಸಲಿಡಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು. ಮಾಜಿ ಕಾರ್ಯನಿರ್ವಾಹಣ ಅಧಿಕಾರಿ ಸಂಘದಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರ ನಡೆಸಿರುವ  ಹಿನ್ನಲೆಯಲ್ಲಿ ಡಿಸಿಸಿಯಿಂದ ಲೆಕ್ಕ ಪರಿಶೋಧಕರು ಬಂದು ಪ್ರತಿದಿನ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡಿಸಿಸಿಯ ನಿರ್ದೇಶನದಂತೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಸಿದರು.



ಕೆಸಿಸಿ ಸಾಲ ಸೇರಿದಂತೆ ಇನ್ನೀತರೆ ಸಾಲ ನೀಡಿಕೆ ಮತ್ತು ಮರು ಪಾವತಿಯಲ್ಲಿ ಹಗರಣಗಳು ಪತ್ತೆಯಾಗಿವೆ. ಇವುಗಳ ಬಗ್ಗೆ ತನಿಖೆಯಾಗಬೇಕು ಇಲ್ಲವಾದರೆ ಸಂಘದ ಬಗ್ಗೆ ತಪ್ಪು ಮಾಹಿತಿ ಹೋಗುತ್ತದೆ ಎಂದು ಷೇರುದಾರ ಸೈಯದ್ ಅನ್ವರ್ ಆಗ್ರಹಿಸಿದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಸಂಘದ ಉಪಾಧ್ಯಕ್ಷ ಜೆ.ಎಸ್.ಕೃಷ್ಣಪ್ಪ, ನಿರ್ದೇಶಕರಾದ ಮಹಮದ್ ಅಕ್ರಮ್ ಉಲ್ಲ, ಗೊಂಚಿಗಾರು ಪಾಲಯ್ಯ, ಸೋಮ್ಲನಾಯ್ಕ, ಎನ್.ಪಿ.ಮಂಜುನಾಥ, ಜಿ.ನಿಂಗಪ್ಪ, ಬೋಸೆರಂಗಪ್ಪ, ಹಾಯ್ಕಲ್ ರಾಜಯ್ಯ, ಇಂದಿನ ಕಾರ್ಯನಿರ್ವಾಹ ಸಿದ್ದಮ್ಮ, ನೀಲಮ್ಮ ಇನ್ನೂ ಇತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST