ಶಾಲಾ ಮುಖ್ಯ ಉಪಾಧ್ಯಾಯರಾದ ಬಸವರಾಜ ಅವರು ಕಾರ್ಯಕ್ರಮದ ಕರಪತ್ರಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ರಫಿ ಮಾತನಾಡಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ
ಈ ವರ್ಷದ ಧ್ಯೇಯ ವಾಕ್ಯ ಅತಿಸಾರ ಭೇದಿ ನಿಲ್ಲಿಸಿ ಎಂಬುದು ಆಗಿದೆ. ಅಲ್ಲದೆ ಓ.ಆರ್.ಎಸ್. ಮತ್ತು ಜಿಂಕ್ ಅತಿಸಾರ ಭೇದಿಗೆ ನೀಡಲಾಗುವ ಪರಿಣಾಮಕಾರಿ ಚಿಕಿತ್ಸೆ ಬಗ್ಗೆ, ಮಕ್ಕಳಿಗೆ ಓ. ಆರ್ .ಎಸ್ ಮತ್ತು ಜಿಂಕ್ ನೀಡುವುದರ ಮೂಲಕ ಸುರಕ್ಷತೆಯನ್ನು ಕಾಪಾಡುವ ಬಗ್ಗೆ, ಅತಿಸಾರಕ್ಕೆ ಕಾರಣವಾಗುವ ಸೋಂಕುಗಳ ಬಗ್ಗೆ, ಕೈಗಳನ್ನು ಸಾಬೂನಿಂದ ತೊಳೆದು ಕೊಳ್ಳುವ ಬಗ್ಗೆ, ಆಟ ಆಡಿದ ನಂತರ ಹಾಗೂ ಪ್ರಾಣಿಗಳನ್ನು ಮುಟ್ಟಿದ ನಂತರ, ಮಕ್ಕಳು ಶೌಚಾಲಯ ಹೋಗಿ ಬಂದಮೇಲೆ, ತಾಯಂದಿರು ಅಡುಗೆ ತಯಾರಿಸುವ ಮೂದಲು, ಮಕ್ಕಳು ಊಟ ಮಾಡುವ ಮೊದಲು , ತಾಯಿಯು ಮಕ್ಕಳಿಗೆ ಉಣಿಸುವ ಮೊದಲು, ತಾಯಿ ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಕೈಗಳನ್ನು ಸ್ವಚ್ಛವಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಮದುಲತಾ ಅವರು ಮಕ್ಕಳಿಗೆ ಪ್ರತ್ಯಕ್ಷವಾಗಿ ಕೈ ತೊಳೆಯುವ ವಿಧಾನಗಳನ್ನು ತೋರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ, ಶಾಲಾ ಸಹ- ಶಿಕ್ಷಕರು, ಆಶಾ ಕಾರ್ಯಕರ್ತೆ ಮಹಾದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.