ಸುರಪುರ : ಹುಣಸಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೋಸ್ಕರ ಆಯೋಜಿಸುತ್ತಿರುವ ಸಮಾವೇಶದ ಕುರಿತು ಚಿಂತನ ಸಭೆ ನಡೆಸಲಾಯಿತು.
ರಾಜ್ಯಾಧ್ಯಕ್ಷರಾದ ಎಂ ಬಸವರಾಜ ಪಡುಕೋಟೆ ಜಿಲ್ಲಾಧ್ಯಕ್ಷರಾದ ವಿಶ್ವರಾಧ್ಯ ದಿಮ್ಮೆ ಹುಣಸಗಿ ತಾಲೂಕು ಅಧ್ಯಕ್ಷರಾದ ಭೀಮನಗೌಡ ಪೊಲೀಸ್ ಪಾಟೀಲ್ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ. ರಾಜಶೇಖರ ದೇಸಾಯಿ, ಭೀಮನಗೌಡ ಮಾಲಿಪಾಟೀಲ್, ನಾಗರಾಜ ಪೂಜಾರಿ, ತಿರುಪತಿ ಹೊಸಗೌಡ್ರ, ಅಮರೇಶ ಬೈಲಕುಂಟಿ, ಆನಂದ ಹೊಸಗೌಡ್ರ, ಗೋವಿಂದ ರಾಠೋಡ, ಭೀರಣ್ಣ ಬೆಲ್ಲದ, ಬಂದಗಿಸಾಬ ಕಲ್ಲದೇವನಹಳ್ಳಿ, ಅಯ್ಯಣ್ಣ ಕಲ್ಲದೇವನಹಳ್ಳಿ , ಬಸವರಾಜ ಪೊಲೀಸ್ ಪಾಟೀಲ್ ಸೇರಿದಂತೆ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.