ಮರಿಯಮ್ಮನಹಳ್ಳಿ: ಲಲಿತಕಲಾ ರಂಗದ 41ನೇ ವಾರ್ಷಿಕೋತ್ಸವವನ್ನು ಜ.25 ಭಾನುವಾರ ದಂದು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಟ್ಟಣದ ಲಲಿತ ಕಲಾರಂಗದ ಕಾರ್ಯದರ್ಶಿ ಬಿಎಂಎಸ್ ಮೃತ್ಯುಂಜಯರವರು ತಿಳಿಸಿದರು.
ಅವರು ಪಟ್ಟಣದ ದುರ್ಗಾದಾಸ ಕಲಾಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 41ನೇ ವಾರ್ಷಿಕೋತ್ಸವ ಅಂಗವಾಗಿ ಕಲಾನಿಧಿ ಪ್ರಶಸ್ತಿ ಹಾಗೂ ಗಮಕ ವಾಚನ ಮತ್ತು ಗುಡಿಯ ನೋಡಿರಣ್ಣ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಕಲಾವಿದೆ ಗಂಗಮ್ಮ ಅವರನ್ನು ಕಲಾನಿಧಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಹಗರಿಬೊಮ್ಮನಹಳ್ಳಿಯ ಉಪನ್ಯಾಸಕಿ ಸುಧಾ ಚಿದಾನಂದ ಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ . ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ ಬಿ ಅಂಬಣ್ಣ, ಉದ್ಯಮಿ ಕೀರ್ತಿ ರಾಜ್ ಜೈನ್, ನಿವೃತ್ತಿ ಶಿಕ್ಷಕರಾದ ಡಿ ಭಾರತಿ, ಕೆ ಕರಿಬಸಪ್ಪ ಉಪಸ್ಥಿತಿ ಇದ್ದು, ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಲಿತ ಕಲಾರಂಗದ ಉಪಾಧ್ಯಕ್ಷ ಜಿ ಎಂ ಕೊಟ್ರೇಶ್, ಖಜಾಂಚಿ ಜಿ ಮಲ್ಲಪ್ಪ, ಕಟ್ಟಿ ಉಮೇಶ ಇದ್ದರು.