ಮೊಳಕಾಲ್ಮುರು ತಾಲೂಕು ದೇವಸಮುದ್ರ ಹೋಬಳಿ ವ್ಯಾಪ್ತಿಯ ಎನ್ ಆರ್ ಕೊಂಡಾಪುರ ಗ್ರಾಮದ ಲಕ್ಷ್ಮಿ ಕಾರಮಂಚಪ್ಪ ಹಾಗೂ ಜಡೆಮ್ಮ ಹನುಮಂತಪ್ಪನವರ ಮದುವೆಗೆ ಆಗಮಿಸಿದ್ದ ಅತಿಥಿಗಳು ಮಧ್ಯಾಹ್ನದ ಊಟ ಸೇವಿಸಿದ ಕೆಲವು ಗಂಟೆಗಳಲ್ಲಿ ಬಹುತೇಕರಿಗೆ ಹೊಟ್ಟೆ ನೋವಿನೊಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಸಂಜೆ 5:00 ನಂತರ ಆಸ್ಪತ್ರೆಗೆ ಚಿಕಿತ್ಸೆಗೆ ಧಾವಿಸಿದ ರೋಗಿಗಳು ರಾತ್ರಿಯಾದರೂ ರೋಗಿಗಳು ಬರುತ್ತಿರುವ ದೃಶ್ಯ ಕಂಡು ಬಂತು.

ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಾಧಿಕಾರಿ ಡಾಕ್ಟರ್ ರಮೇಶ್ ಕುಮಾರ್ ಹಾಗೂ ಡಾಕ್ಟರ್ ಲೀಲ ರಾಘವನ್, " ಸಂಜೆ ಆರು ಏಳು ಗಂಟೆಯಿಂದ ವಾಂತಿ ಭೇದಿ ಹೊಟ್ಟೆ ನೋವು ಎಂದು ಸುಮಾರು 24 ಹೆಚ್ಚು ಮಂದಿ ದಾಖಲಾಗಿದ್ದಾರೆ. ಊಟವಾದ ಮೇಲೆ ಈ ರೀತಿಯಾಗಿದೆ ಎಂದು ಗೊತ್ತಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 24 ರೋಗಗಳು ಚಿಕಿತ್ಸೆ ಪಡೆಯುತ್ತಿತ್ತು ಇದರಲ್ಲಿ ನಾಲ್ಕು ಜನ ಮಕ್ಕಳು ಸೇರಿದ್ದಾರೆ. ಹೊನ್ನೂರಮ್ಮ ಎಂಬುವರಿಗೆ ತುಂಬಾ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಅವರನ್ನು ಸೂಕ್ತ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆ ಕಳುಹಿಸಿಕೊಡಲಾಗಿದೆ. ಇನ್ನುಳಿದ ರೋಗಿಗಳು ಗುಣಮುಖರಾಗುತ್ತಿದ್ದಾರೆ,ಎಂದು ತಿಳಿಸಿದ್ದಾರೆ.
ಪ್ರಥಮ ಚಿಕಿತ್ಸೆಗಾಗಿ ಊರಿನ ಅಂಗನವಾಡಿ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯನ್ನು ನೇಮಿಸಿ ಪರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ಅಣ್ಣನ ಮಗನ ಮದುವೆಗೆ ಹೋದ ಸಂದರ್ಭದಲ್ಲಿಮದುವೆ ಊಟ ಮಾಡಿದ 40 45 ಜನಕ್ಕೆ ಫುಡ್ ಪಾಯಿಸನ್ ಆಗಿ ವಾಂತಿ ಭೇದಿ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದೇವೆ. ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದಾರೆ ಇನ್ನು ಕೆಲವುರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದೇವೆ.
ನಾಗರಾಜ್