ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಬಿ.ಶ್ರೀಶೈಲಗೌಡರವರು ವಹಿಸಿದ್ದರುಮುಖ್ಯ ಅತಿಥಿಗಳಾಗಿ ಹಿರಿಯ ಇನ್ಸ್ ಪೆಕ್ಟರ್ ರಫೀಕ್ ಅಹಮದ್, ವಿಶ್ವನಾಥ್, ಮಲ್ಲಿಕಾರ್ಜುನ್ ಎಲ್ಲಾ ವಿಭಾಗದ ವಿಧ್ಯಾರ್ಥಿ ವಿದ್ಯಾರ್ಥಿನಿಯರು, ಮುಖ್ಯಸ್ಥರು , ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾಲೇಜಿನ ವತಿಯಿಂದ ಸನ್ಮಾನ ಸ್ವೀಕರಿಸಿದ ರಫೀಕ್ ಅಹಮದ್ ಮಾತನಾಡುತ್ತಾ, ರಸ್ತೆ ಸುರಕ್ಷತಾ ನಿಯಮಗಳಬಗ್ಗೆ ವಿಸ್ತಾರವಾಗಿ ತಿಳಿಸಿದರು ಇದೇ ಸಮಯದಲ್ಲಿ ರಸ್ತೆ ಸುರಕ್ಷತೆಗೆ ಅನುಸರಿಸಬೇಕಾದ ನಿಯಮಗಳು ಮತ್ತು ಅಜಾಗರೂಕ ವಾಹನ ಚಾಲನೆಯ ದುಷ್ಪರಿಣಾಮಗಳ ಸಾಕ್ಷ್ಯಚಿತ್ರದ ಮೂಲಕ ವಿವರಿಸಿದರು.
ಪರವಾನಿಗೆಇಲ್ಲದೆ ಮತ್ತು18 ವರ್ಷದೊಳಗಿನವರು ವಾಹನ ಚಲಾಯಿಸಿದರೆ ಕಟ್ಟ ಬೇಕಾದದಂಡ ಹಾಗೂ ಜೈಲು ಶಿಕ್ಷೆಯ ಬಗ್ಗೆ ಮಾಹಿತಿ ನೀಡಿದರು
ಶ್ರೀ ಮಲ್ಲಿಕಾರ್ಜುನ್ ಕಾರ್ಯಕ್ರಮದ ನಿರೊಪಣೆ ಮಾಡಿದರು ಮತ್ತು ವಂದನಾರ್ಪಣೆಯನ್ನು ವಿಶ್ವನಾಥ್‍ರವರು ನಡೆಸಿಕೊಟ್ಟರು
