LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಬಲ್ಡೋಟ ವಿರೋಧಿ ಹೋರಾಟಕ್ಕೆ 18 ದಿನ

ಪರಿಸರ ಉಳಿಸಿ ಹೋರಾಟ ಉತ್ತರ ಕರ್ನಾಟಕಕ್ಕೆ ವಿಸ್ತರಣೆ : ತೋಂಟದಶ್ರೀ

ಕೊಪ್ಪಳ: ನಗರಕ್ಕೆ ಹೊಂದಿಕೊಂಡು 10.5 ಎಂಟಿಪಿಎಸ್ ಸಾಮರ್ಥ್ಯದ ಕಾರ್ಖಾನೆ ವಿಸ್ತರಣೆ ಮಾಡಲು ಮುಂದಾದ ಬಲ್ಡೋಟ ಬಿಎಸ್ಪಿಎಲ್ ಮತ್ತು ಇತರೆ ಕಾರ್ಖಾನೆಗಳ ವಿರೋಧಿ ಧರಣಿ ಸತ್ಯಾಗ್ರಹದ ೧೮ನೇ ದಿನದ ಹೋರಾಟ ಬೆಂಬಲಿಸಿ ಗದುಗಿನ ತೋಂಟದ ಸಿದ್ದಲಿಂಗ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರಣಿಗೆ ಬರುವ ಮೊದಲು ಬಾಧಿತ ಪ್ರದೇಶದ ಹಲವು ಗ್ರಾಮಗಳ ದುಸ್ತಿತಿ ನೋಡಿ, ಅಲ್ಲಿನ ಜನರ, ರೈತರ ಮತ್ತು ಮಕ್ಕಳ ಜೊತೆ ಮಾತನಾಡಿ ತಮ್ಮ ಅನುಭವ ಹಂಚಿಕೊAಡರು. ಅಲ್ಲಿ ಬೇರೆಯದ್ದೇ ಒಂದು ಲೋಕ ಸೃಷ್ಟಿ ಆಗಿದೆ ಅಲ್ಲಿನ ಹಳ್ಳಿಗಳನ್ನೇ ಬೇರೆಡೆ ಶಿಫ್ಟ್ ಮಾಡುವಷ್ಟು ತೊಂದರೆ ಇದೆ, ೨೦ ವರ್ಷ ಅವರು ಅನುಭವಿಸಿದ ನೋವಿಗೆ ಯಾವ ಮುಲಾಮು ಇಲ್ಲ, ಆದ್ದರಿಂದ ಈ ಕಾರ್ಖಾನೆ ಇಲ್ಲಿ ಅವಶ್ಯಕವೂ ಇಲ್ಲವಾದ್ದರಿಂದ ಈ ಹೋರಾಟ ಒಂದು ಬೃಹತ್ ಜನಾಂದೋಲವಾಗಬೇಕು ಅದಕ್ಕಗಿ ಉತ್ತರ ಕರ್ನಾಟಕದಲ್ಲಿ ಹೋರಾಟವನ್ನು ವಿಸ್ತರಿಸಲು ಬೇಕಾದ ವ್ಯವಸ್ಥೆ ಅನುಕೂಳ ಮಡಿಕೊಡುವ ಜೊತೆಗೆ ರಾಜ್ಯದ ನೂರಾರು ಮಠಾದೀಶರು ಇದಕ್ಕೆ ಬೇಕಾದರೆ ತಾವು ಕರೆದುಕೊಂಡು ಬರುವ ಆಶ್ವಾಸನೆ ನೀಡಿದರು.

ಗವಿಮಠದ ಪೂಜ್ಯರು ಇಲ್ಲಿನ ಅತ್ಯಂತ ಪ್ರಭವಿ ಮತ್ತು ಜ್ಞಾನಿಗಳು, ಜನರ ನೋವು ಅರಿತವರು, ಅವರನ್ನೇ ಮುಂದು ಮಾಡಿ ಹೋರಾಟ ಯಶಸ್ವಿಗೊಳಿಸಲು ನಾವು ಸಹ ಅನೇಕ ಮಠಾದೀಶರ ಜೊತೆಗೆ ಭೇಟಿ ಮಾಡಿ ಮುಂದಾಳತ್ವವಹಿಸಿಕೊಳ್ಳುವAತೆ ಬಿನ್ನವಿಸಿಕೊಳ್ಳುವದಾಗಿ ಹೇಳಿದರು. ಹೋರಾಟಕ್ಕೆ ಜನರು ತಂಡೋಪತAಡವಾಗಿ ಬರಬೇಕು ಎಂದರು.

ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಯುತ್ತಿರುವ ಹೋರಾಟಕ್ಕೆ ಈಗಾಗಲೇ ಅನೇಕ ಸಂಘಟನೆಗಳು ಬೆಂಬಲ ನೀಡಿವೆ, ೧೮ನೇ ದಿನ ಕೊಪ್ಪಳ ಜಿಲ್ಲಾ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಸದಸ್ಯರು ಬೆಂಬಲ ನೀಡಿದರು. ಇಂದು ತೋಂಟದ ಸ್ವಾಮೀಜಿಯವರು ಬಂದು ಅದಕ್ಕೆ ಮತ್ತೊಂದು ತಿರುವು ನೀಡಿದ್ದಾರೆ.



ಪ್ರತ್ಯೇಕ ರಾಜ್ಯ ಕೇಳಲು ಇಂತಹ ಪರಿಸ್ಥಿತಿ ಕಾರಣವಾಗುತ್ತವೆ : ಬೆಟ್ಟದೂರು

ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದದ ಕಾರಣ, ಪರಿಸರ ವಿರೋಧಿ ಹಾಗೂ ಜನರ ಹೋರಾಟವನ್ನು ಗಮನಿಸದೆ ಇರುವದು ನೋವು ತಂದಿದೆ ಎಂದು ಕಾರ್ಖಾನೆ ವಿರೋಧಿ ಹೋರಾಟದ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯ ಪಟ್ಟಿದ್ದಾರೆ.

ಅವರು ನಗರಸಭೆ ಮುಂದೆ ನಡೆದಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿ ಇತರೆ ಕಾರ್ಖಾನೆಗಳ ವಿಸ್ತೀರ್ಣ, ಸ್ಥಾಪನೆ ವಿರೋಧಿಸಿ ನಡೆದಿರುವ ಹೋರಾಟದ 18 ನೇ ದಿನ ಅವರು ಮಾತನಾಡಿದರು.

ಬಾಧಿತ ಪ್ರದೇಶಕ್ಕೆ ಭೇಟಿ ನೀಡದ, ಪ್ರತಿಭಟನೆ ಗಮನಿಸದ, ಜನರ ಕೂಗು ಕೇಳದ ಸರಕಾರಗಳ ಇಂತಹ ಧೋರಣೆಗಳೇ ಪ್ರತ್ಯೇಕ ಕೂಗಿಗೆ ಪುಷ್ಟಿ ನೀಡುತ್ತವೆ ಎಂದು ಗುಡುಗಿದರು.

ಸದರಿ      ಹೋರಾಟದಲ್ಲಿ ಸಂಚಾಲಕರಾದ ಕೆ. ಬಿ. ಗೋನಾಳ, ಡಿ. ಹೆಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಸಾಹಿತಿ ಡಿ.ಎಂ. ಬಡಿಗೇರ, ಮೂಕಪ್ಪ ಮೇಸ್ತ್ರಿ, ಬಸಾಪುರ, ಮಹಿಳಾ ಕಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಪುಷ್ಪಲತಾ ಏಳುಬಾವಿ, ಮಾಲಾ ಬಡಿಗೇರ, ಶಾಂತಯ್ಯ ಅಂಗಡಿ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಎಂ. ಎಸ್. ಘಂಟಿ, ಕಾಶಪ್ಪ ಛಲವಾದಿ, ಭೀಮಸೇನ ಕಲಿಕೇರಿ, ಮಖಬೂಲ್ ರಾಯಚೂರು, ಮಹಾದೇವಪ್ಪ ಎಸ್. ಮಾವಿನಮಡು, ಮುದುಕಪ್ಪ ಹೊಸಮನಿ ಸೇರಿ ಅನೇಕರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ