LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಧ್ರುವ ಸರ್ಜಾರ ಅದ್ದೂರಿ ಚಿತ್ರಕ್ಕೆ 13ನೇ ವರ್ಷದ ಸಂಭ್ರಮ

ದೇವರು ಕಣ್ ತೆರೆದರೆ ಸಾವಿರಾರು ಬಡ ಜನರಿಗೆ ಆಸರೆ - ಎಂ.ಜಿ ಕನಕ

ಬಳ್ಳಾರಿ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಟಿಸಿರುವ ಅದ್ದೂರಿ ಸಿನಿಮಾವು 13ನೇ ವರ್ಷಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಸಂಭ್ರಮದ ದಿವಸವಾಗಿದೆ.

ಇದನ್ನು ಅಭಿಮಾನಿಗಳು 13ನೇ ವಾರ್ಷಿಕೋತ್ಸವವೆಂದು ಅಚರಿಸಲ್ಪಡುತ್ತಿದ್ದು, ಇದರ ಅಂಗವಾಗಿ ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರು ಮತ್ತು ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಎಂ.ಜಿ ಕನಕ ಅವರು ನಗರದಲ್ಲೆಡೆ ದೇವಸ್ಥಾನಗಳಲ್ಲಿ ವಿಷೇಶ ಪೂಜೆ ಸಲ್ಲಿಸುತ್ತಾ. ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನ , ರಾಯಲ್ ಸರ್ಕಲ್, ಮೋತಿ ಸರ್ಕಲ್, ಹೊಸ ಬಸ್ ನಿಲ್ದಾಣದಲ್ಲಿರುವ ಹಿರಿಯ ವೃದ್ಧರಿಗೆ ಹಾಗೂ ನಿರ್ಗತಿಕರಿಗೆ ಊಟದ ಪೊಟ್ಟಣ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.



ಇದೇ ವೇಳೆ ಪತ್ರಿಕೆ ಹೇಳಿಕೆ ನೀಡಿರುವ ಎಂ. ಜಿ ಕನಕ, ಅದ್ದೂರಿ 2012ರ ಕನ್ನಡ ರೋಮ್ಯಾಂಟಿಕ್ (ಪ್ರೇಮಿಗಳ) ಚಲನಚಿತ್ರವಾಗಿದ್ದು, ಧ್ರುವ ಸರ್ಜಾ ಅವರ ಚೊಚ್ಚಲ ಸಿನಿಮಾ ಅದ್ದೂರಿ, ಅದ್ದೂರಿಯಾಗಿ ಸಿನಿಮಾ ಬಿಡುಗಡೆಯಾಗಿ ಜೂನ್ 15ಕ್ಕೆ 13 ವರ್ಷಗಳನ್ನು ಪೂರೈಸಿದೆ. ಅದ್ದೂರಿ ಸಿನಿಮಾವನ್ನು ಚಿತ್ರಮಂದಿರಗಳಿಗೆ ಹೋಗಿ ನೋಡಿ ಆಶೀರ್ವದಿಸಿದ ಎಲ್ಲಾ ಕನ್ನಡ ಕಲಾಭಿಮಾನಿಗಳಿಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದರು.

 

ಇಂದಿನ ದಿನಗಳಲ್ಲಿ ಬಡವರಿಗೆ ನಾನು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಇದಕ್ಕೆ ಕಾರಣ ಶ್ರೀ ಕನಕ ದುರ್ಗಮ್ಮನ ಆಶಿರ್ವಾದ, ನನ್ನ ಆರಾಧ್ಯ ದೈವ ಧ್ರುವ ಸರ್ಜಾ ಅವರ ಹಾಗೂ ನನ್ನ ಸ್ನೇಹಿತರ ಪ್ರೋತ್ಸಾಹ ಕಾರಣವಾಗಿದೆ. ಮುಂದಿನ ದಿಗಳಲ್ಲಿಯೂ ದೇವರು ಕಣ್ ತೆರೆದರೆ ಇನ್ನು ದೊಡ್ಡ ಮಟ್ಟದ ಸೇವೆಗೆ  ಸಿದ್ದನಾಗುತ್ತೆನೆ. ನೂರಲ್ಲ ಸಾವಿರಾರು ಬಡ ಜನರ ಆಸರೆಗೆ ಮುಂದಾಗುತ್ತೇನೆ ಎಂದು ಎಂ.ಜಿ ಕನಕ ಹೇಳಿದರು. 



ಈ ಸಂದರ್ಭದಲ್ಲಿ ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಉಮಾರ್ ಫಾರೂಕ್, ಚೇಳ್ಳಗುರ್ಕೀ ನಾಗರಾಜ್, ಕಿರಣ್ ಕುಮಾರ್, ಬೆಳಗಲ್ ಗಣೇಶ್, ಹರಗಿನಡೊಣಿ ಗಾದಿ, ಗಂಗಾಧರ, ಮೆಹಬೂಬ್ ಬಾಷಾ, ಆರೀಫ್, ವೈಫೈ ಶಿವು ಸೇರಿದಂತೆ ಧ್ರುವ ಸರ್ಜಾ ಅವರು ಅಭಿಮಾನಿಗಳು ಹಾಜರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ