ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನೆಲ್ಲಕುದುರಿ ಗ್ರಾಮದ ರೂಪ(25) ಗರ್ಭಿಣಿಯು ಶುಕ್ರವಾರ ರಾತ್ರಿ ಹೊಸಪೇಟೆ ಎಂ.ಸಿ.ಹೆಚ್.ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಜನಿಸಿದ ಮಗುವಿನ ತೂಕ 900 ಗ್ರಾಂ ಹಾಗೂ ಉಸಿರಾಟದ ಸಮಸ್ಯೆಯಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಇಲ್ಲಿನ ವೈದ್ಯರು ಶಿಫಾರಸು ಮಾಡಿದ್ದರು. ತುರ್ತಾಗಿ ಕೊಪ್ಪಳ ಆಸ್ಪತ್ರೆಗೆ ತಲುಪಬೇಕಾಗಿದ್ದರಿಂದ ಆಸ್ಪತ್ರೆ ಸಿಬ್ಬಂದಿಗಳು 108 ಗೆ ಕರೆ ಮಾಡಿದರು.

ತಕ್ಷಣವೇ 108 ಅಂಬುಲೆನ್ಸ್ ಎಂ.ಸಿ.ಹೆಚ್.ಆಸ್ಪತ್ರೆಗೆ ದಾವಿಸಿತು. ಮಗುವಿನ ಪರಿಸ್ಥಿತಿ ನೋಡಿ ಕರುಳು ಕಿವುಚಿ ಬಂದಂತಾಯಿತು. ಕ್ಷಣಮಾತ್ರವೂ ವ್ಯರ್ಥ ಮಾಡದೆ ಆಂಬುಲೆನ್ಸ್ ಸಿಬ್ಬಂದಿಗಳು ಅಲ್ಲಿಂದ ಇ.ಎಂ.ಟಿ.ಗಜೇಂದ್ರ ನಾಯ್ಕ ಅಂಬುಲೆನ್ಸ್ ನಲ್ಲಿಯೇ ಮಗುವಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದರು. ಚಾಲಕ ಮಾರ್ಕಂಡೇಯ 25 ನಿಮಿಷಗಳಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆ ತಲುಪಿದರು. ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು.
108 ಸಿಬ್ಬಂದಿಗಳ ಈ ಸೇವೆಗೆ 108 ಆರೋಗ್ಯ ಕವಚದ ಪ್ರಾದೇಶಿಕ ಅಧಿಕಾರಿ ಸದಾನಂದ, ಜಿಲ್ಲಾ ಅಧಿಕಾರಿ ವಿನಯ್ ಕುಮಾರ್,ವ್ಯವಸ್ಥಾಪಕ ಅಧಿಕಾರಿ ಸಂತೋಷ ಮತ್ತು ಸಾರ್ವಜನಿಕರು ಅಭಿನಂದನೆಗಳು ತಿಳಿಸಿದರು.