ಜಸ್ಟಿಟಿಟಿಯಾ “ಅಡ್ವೋಕಥಾನ್” ಫ್ರಿಡಂ ಪಾರ್ಕ್ ನಿಂದ ಕಂಠೀರವ ಸ್ಟೇಡಿಯಂ ಮಾರ್ಗವಾಗಿ ಎಂ.ಜಿ, ರಸ್ತೆ, ಹೈಕೋರ್ಟ್ ಮತ್ತು ವಿಧಾನಸೌಧ ವರೆಗೆ ನಡೆದ 10.ಕೆ, 5.ಕೆ, 3ಕೆ ಯಲ್ಲಿ 750 ಸ್ಪರ್ಧಿಗಳು ಭಾಗವಹಿಸಿದ್ದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಮಹತ್ವದ ಬಗ್ಗೆ ಅರಿವು ಮೂಡಿಸುವ, ಕ್ರೀಡೆ ಮತ್ತು ದೈಹಿಕ ಸದೃಢತೆಯ ಮೂಲಕ ಬಾಲಾಪರಾಧ ತಡೆಗಟ್ಟುವ ದಿಸೆಯಲ್ಲಿ ಪ್ರಗತಿಪರ ಕಾನೂನು ಸಂಸ್ಥೆ “ಜಸ್ಟಿಟಿಟಿಯಾ” ತಂಡ ಇದೇ ಮೊದಲ ಬಾರಿಗೆ “ಅಡ್ವೋಕಥಾನ್” ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿತು.

ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ದೇಶದ ಸದೃಢತೆ, ಕಾನೂನು ವೃತ್ತಿಪರರು ಮತ್ತು ನಾಗರಿಕರಲ್ಲಿ ಮಾನಸಿಕ – ಶಾರೀರಿಕ ಆರೋಗ್ಯ ವೃದ್ಧಿಗೊಳಿಸುವ ಉದ್ದೇಶದಿಂದ ಅಡ್ವೋಕಥಾನ್ ಏರ್ಪಡಿಸಲಾಗಿದೆ. ಇದು ಕೇವಲ ಓಟವಲ್ಲ. ನ್ಯಾಯಾಂಗ ವ್ಯವಸ್ಥೆಯ ಬಲ, ಏಕತೆ ಮತ್ತು ನೈತಿಕ ಹೊಣೆಗಾರಿಕೆಯನ್ನು ಜಾರಿಗೊಳಿಸುವ ಗುರಿ ಹೊಂದಲಾಗಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ, ಸಾರ್ವಜನಿಕರ ನಡುವೆ ಸಂವಾದ, ಸಹಕಾರ ಹೆಚ್ಚಿಸುವುದು ಈ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ತಿಳಿಸಿದರು.
ವಕೀಲರಾದ ನಂಜಪ್ಪ ಕಾಳೆಗೌಡ ಅಂಟೋನಿ ಜೋಸೆಫ್, ಡಾ. ಮಿರ್ ರಫಿಕುಲ್ ಇಸ್ಲo, ರಾಹುಲ್,ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.