ಬೆಂಗಳೂರು : ಜಾಗತಿಕ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಉತ್ಕೃಷ್ಟ ಆಭರಣಗಳ ಝೆನ್ ಡೈಮಂಡ್ ಬ್ರ್ಯಾಂಡ್, ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸುವ ಮೂಲಕ ತನ್ನ ಹೆಜ್ಜೆಗುರುತುಗಳನ್ನು ಬಲಪಡಿಸುತ್ತಿದೆ. ಈ ಬ್ರ್ಯಾಂಡ್ 450ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಮುಂಬೈನ ಬಾಂದ್ರಾ, ಬೊರಿವಲಿಯಲ್ಲಿ ಆರಂಭಿಸಿದ ಮಳಿಗೆಗಳ ಯಶಸ್ಸಿನ ನಂತರ ಝೆನ್ ಡೈಮಂಡ್ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಮತ್ತು ಫೀನಿಕ್ಸ್ ಮಾರ್ಕೆಟ್ಸಿಟಿಯಲ್ಲಿ ಮಳಿಗೆಗಳನ್ನು ಪ್ರಾರಂಭಿಸಿ ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟಿದೆ.

ಫೀನಿಕ್ಸ್ ಮಾರ್ಕೆಟ್ಸಿಟಿ ಮತ್ತು ಮಾಲ್ ಆಫ್ ಏಷ್ಯಾದಲ್ಲಿನ ಮಳಿಗೆಗಳು ಝೆನ್ ಡೈಮಂಡ್ನ ವಿಶಿಷ್ಟವಾದ ಆಭರಣಗಳ ಸಂಗ್ರಹವನ್ನು ಹೊಂದಿವೆ. ಅತ್ಯುತ್ತಮ ಗುಣಮಟ್ಟದ ನೈಸರ್ಗಿಕ ವಜ್ರಗಳ ಆಭರಣ ಸಿದ್ಧಪಡಿಸುವಲ್ಲಿ ಹೊಂದಿರುವ ಪರಿಣತಿಯ ಮೂಲಕ ಝೆನ್ ಡೈಮಂಡ್ ಸಮಕಾಲೀನ ವಿನ್ಯಾಸಗಳು ಹಾಗೂ ಬಹುಕಾಲದಿಂದ ಉಳಿದುಬಂದಿರುವ ನಾಜೂಕಿನ ವಿನ್ಯಾಸಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ.
ಆಭರಣಗಳನ್ನು ಸೂಕ್ಷ್ಮವಾಗಿ ರೂಪಿಸುವಲ್ಲಿ ಹಾಗೂ ಹೊಸ ಬಗೆಯಲ್ಲಿ ಸಿದ್ಧಪಡಿಸುವಲ್ಲಿ ಬಹಳ ಶ್ರೀಮಂತವಾದ ಪರಂಪರೆಯನ್ನು ಈ ಬ್ರ್ಯಾಂಡ್ ಹೊಂದಿದೆ. ವಿವೇಚನೆಯಿಂದ ಖರೀದಿ ಮಾಡುವ, ವಿಶಿಷ್ಟವಾದ ಹಾಗೂ ಸೂಕ್ಷ್ಮವಾಗಿ ಸಿದ್ಧಪಡಿಸಿದ ಉತ್ಪನ್ನಗಳನ್ನುಬಯಸುವ ಗ್ರಾಹಕರಿಗೆ ಈ ಬ್ರ್ಯಾಂಡ್ ಆಧುನಿಕತೆ ಮತ್ತು ಹೊಸತನವನ್ನು ಹೊಂದಿರುವ ಆಭರಣಗಳನ್ನು ಒದಗಿಸುತ್ತಿದೆ.

ಬೆಂಗಳೂರಿನ ಮಳಿಗೆಯ ಉದ್ಘಾಟನೆ ಬಗ್ಗೆ ಮಾತನಾಡಿದ ಝೆನ್ ಡೈಮಂಡ್ನ ವ್ಯವಸ್ಥಾಪ ನಿರ್ದೇಶಕ ನೀಲ್ ಸೊನಾವಾಲಾ, “ನಮ್ಮ ಬ್ರ್ಯಾಂಡ್ಗೆ ಭಾರತವು ಯಾವಾಗಲೂ ಬಹಳ ಮಹತ್ವದ ಮಾರುಕಟ್ಟೆಯಾಗಿದೆ. ಮುಂಬೈನಲ್ಲಿ ನಾವು ಆರಂಭಿಸಿದ ಮಳಿಗೆಗಳಿಗೆ ದೊರೆತ ಭಾರಿ ಪ್ರತಿಕ್ರಿಯೆಯು ನಮಗೆ ಬಹಳ ಉತ್ತೇಜನ ನೀಡಿದೆ. ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸುವ ಮೂಲಕ ಝೆನ್ ಡೈಮಂಡ್ನ ಕೌಶಲದ ಪರಂಪರೆಯನ್ನು ದಕ್ಷಿಣ ಭಾರತಕ್ಕೆ ತರುತ್ತಿರುವುದಕ್ಕೆ ಸಂತಸ ತಂದಿದೆ ಎಂದರು.