ಮರಿಯಮ್ಮನಹಳ್ಳಿ : ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಮರಿಯಮ್ಮನಹಳ್ಳಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸರಳವಾಗಿ ಆಚರಿಸಲಾಯಿತು ಪಟ್ಟಣದ 9ನೇ ವಾರ್ಡಿನ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ಯುವಕರು, ಹಿರಿಯರು, ನೌಕರರು, ನಿವೃತ್ತ ನೌಕರರು, ಮಹಿಳೆಯರು ಸೇರಿ ಕಪ್ಪು ಪಟ್ಟಿ ಧರಿಸಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಿದರು. ನಂತರ ವಾಲ್ಮೀಕಿ ಸಮಾಜದ ಹೋಬಳಿ ಅಧ್ಯಕ್ಷ ಮರಡಿ ಹನುಮಂತ ಮಾತನಾಡಿ. ರಾಜ್ಯದಲ್ಲಿ ಇತ್ತೀಚಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯ ಕುರಿತಂತೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಮತ್ತು ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯ ಮಾಡುವ ಉದ್ದೇಶದಿಂದ ಕಪ್ಪುಪಟ್ಟಿ ಧರಿಸಿ ಸರಳವಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ನಂತರ ವಾಲ್ಮೀಕಿ ಭವನದಿಂದ ಮರಿಯಮ್ಮನಹಳ್ಳಿಯ ನಾಡ ಕಾರ್ಯಲಯದವರಿಗೆ ಬೈಕ್ ರ್ಯಾಲಿ ಮೂಲಕ ತೆರಳಿದ ಮರಿಯಮ್ಮನಹಳ್ಳಿ ಹೋಬಳಿ ಮತ್ತು ಪಟ್ಟಣದ ವಾಲ್ಮೀಕಿ ನಾಯಕ ಸಮಾಜದ ಮುಖಂಡರುಗಳು ಉಪ ತಹಸಿಲ್ದಾರ್ ಗೆ ಮನವಿಯನ್ನು ಸಲ್ಲಿಸಿದರು. ಮೀಸಲಾತಿಯಲ್ಲಿ ದಮನಿತ, ಶೋಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿಪಡಿಸಿ ಹೆಚ್ಚಳಗೊಂಡಿರುವ ಮೀಸಲಾತಿಯನ್ನು ಸಂವಿಧಾನದ ಅನುಸೂಚಿ 9 ಕ್ಕೆ ಸೇರ್ಪಡೆ ಮಾಡಲು ಮರಿಯಮ್ಮನಹಳ್ಳಿ ಹೋಬಳಿ ಮತ್ತು ಪಟ್ಟಣ ವ್ಯಾಪ್ತಿಯ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಒತ್ತಾಯಿಸಿ ಮನವಿ ಪತ್ರವನ್ನು ನೀಡಿದರು.
ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಅನುಗುಣವಾಗಿ ಹೆಚ್ಚಳವಾದ ಮೀಸಲಾತಿ ವಿಷಯದಲ್ಲಿ ಈ ಸಮುದಾಯಗಳಿಗೆ ಅನ್ಯಾಯವಾದರೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ರೂಪಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಸಮುದಾಯದ ಮುಖಂಡರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಮರಡಿ ಹನುಮಂತ, ಪಟ್ಟಣದ ಅಧ್ಯಕ್ಷ ರೋಗಣ್ಣನವರ ಮಂಜುನಾಥ, ಹಿರಿಯ ಮುಖಂಡರಾದ ಎನ್ ಸತ್ಯನಾರಾಯಣ, ಗರಗ ಪ್ರಕಾಶ್, ತಳವಾರ ಹುಲುಗಪ್ಪ, ಬುರುಡಿ ರಾಮಣ್ಣ, ದಾಸರ ಹನುಮಂತಪ್ಪ, ಎಸ್ ನವೀನ್ ಕುಮಾರ್ , ಛಲವಾದಿ ಮಂಜುನಾಥ, ಕಾಸ್ಲಿ ಅಂಕಲೇಶ್, ಸ್ವಾಮಿ. ಡ್ರೈವರ್ ಹನುಮಂತಪ್ಪ ಉದ್ದೇಕಲ್ ವೆಂಕಟೇಶ, ಕೆ ರಾಘವೇಂದ್ರ, ಯು. ರಾಮು, ಬಾಪೂರಿ ಅಂಜಿನಿ, ಮಾರುತಿ, ವೆಂಕಟೇಶ, ಕೆ ಅಂಬಣ್ಣ, ತಳವಾರ್ ಈಶ್ವರ, ಮರಡಿ ವಿಷ್ಣು ,ಬಿ. ರಾಘವೇಂದ್ರ, ನಂದಿಹಳ್ಳಿ ಮುಕುಂದ, ವೆಂಕಟೇಶ .ಬಿ. ಪಟ್ಟಣ ಪಂಚಾಯಿತಿ ಸದಸ್ಯರಾದ ಮರಡಿ ಸುರೇಶ್, ಜ್ಯೋತಿ ಬಿ. ಸುರೇಶ್, ಕುಸುಮ ಬಿ. ರಮೇಶ್ ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ಮುಖಂಡರುಗಳು, ಮೀಸಲಾತಿ ಹೋರಾಟಗಾರರು ಸೇರಿದಂತೆ ಹಲವಾರು ಯುವಕರು ಇದ್ದರು. ಪಟ್ಟಣ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.