LIVE TV StateNationalPoliticsCrimeEntertainmentSportsEducationFINANCE & TAXATION
Entertainment News

‘ಪಂಚಾಯಿತಿ’ ಸಿನಿಮಾದಲ್ಲಿ ಯೂಟ್ಯೂಬರ್ಗಳಿಗೂ ಅವಕಾಶ!

ಬೆಂಗಳೂರು : ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಸಹಸ್ರಾರು ಪ್ರೇಕ್ಷಕ ಬಳಗವನ್ನು ಹೊಂದಿರುವ ಪ್ರತಿಭಾವಂತ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ನೀಡುವ ಮೂಲಕ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅವರು ತಮ್ಮ ಹೊಸ ಹದಿನಾಲ್ಕನೇ ಸಿನಿಮಾ ನೇಟಿವ್ ಕ್ರಿಯೆಶನ್ಸ್ ಅಡಿಯಲ್ಲಿ ತಯ್ಯಾರಾಗುತ್ತಿರುವ ‘ಪಂಚಾಯಿತಿ’ಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಯೂಟ್ಯೂಬ್‌ನಲ್ಲಿ ಜನಪ್ರಿಯರಾದ ಕಲಾವಿದ ಗೋಕುಲ್ ರಾಜ್, ಜಗದೀಶ್ ಮೂಕಿ, ಪ್ರಕಾಶ ರಾಜಕುಮಾರ್, ಶ್ರುತಿ ಹೇಮಂತ್, ಬಿಂದು, ವೀರಣ್ಣ ಹೊಸಮನಿ ಮೊದಲಾದ ಕಲಾವಿದರಿಗೆ ‘ಪಂಚಾಯಿತಿ’ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನೀಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ, ಸಿನಿಮಾದ ಎಲ್ಲ ಪಾತ್ರಗಳಿಗೂ ಉತ್ತರ ಕರ್ನಾಟಕದ ಕಲಾವಿದರನ್ನೇ ಬಳಸಿಕೊಂಡಿರುವುದು.

news_1791517096_2_493.webp

 

“ಉತ್ತರ ಕರ್ನಾಟಕದ ಭಾಷೆ ಮತ್ತು ಇಲ್ಲಿನ ಸೊಗಡು ನನಗೆ ಬಹಳ ಇಷ್ಟ. ಹನ್ನೆರಡು ವರ್ಷಗಳ ಹಿಂದೆ ‘ಡಿಸೆಂಬರ್-1’ ಚಿತ್ರವನ್ನು ಇಲ್ಲಿಯ ಪ್ರಾದೇಶಿಕತೆ ಅಳವಡಿಸಿ ಮಾಡಿದ್ದೆ ಆ ಚಿತ್ರ ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿತ್ತು, ಇಲ್ಲಿನ ಜನರ ಆತ್ಮೀಯತೆ ನನ್ನನ್ನು ಇಲ್ಲಿಗೆ ಮತ್ತೆ ಕರೆತಂದಿದೆ ಎಂದು ಪಿ. ಶೇಷಾದ್ರಿ ಹೇಳಿದ್ದಾರೆ.

ಚಿತ್ರದ ಮತ್ತೊಂದು ವಿಶೇಷವೆಂದರೆ ಪ್ರಮುಖ ಪಾತ್ರವೊಂದರಲ್ಲಿ ನಿಜ ಜೀವನದ ಜೋಗತಿ ‘ದೀಪಾ ಜೋಗತಿ’ ಅಭಿನಯಿಸಿರುವುದು. ಮೂಲತಃ ರಾಯಚೂರಿನವರಾದ ‘ದೀಪಾ ಜೋಗತಿ’ ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಜೋಗತಿ ಸಮುದಾಯದ ಪ್ರತಿನಿಧಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರಕ್ಕಾಗಿ ಜನಪದ ಸೊಗಡಿನ ಹಾಡು ಕೂಡ ಹಾಡಿದ್ದಾರೆ. ಹುಬ್ಬಳ್ಳಿ, ಧಾರವಾಡ, ಶಿವಳ್ಳಿ, ಕುಂದಗೋಳ, ಹೆಬ್ಬಳ್ಳಿ, ಬೂದನಗುಡ್ಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಸದ್ಯ ಚಿತ್ರದ ಸಂಕಲನ ಕಾರ್ಯ ಪೂರ್ಣಗೊಂಡಿದ್ದು, ಸಂಗೀತದ ಜೋಡಣೆ ಹಾಗೂ ಶಬ್ದವಿನ್ಯಾಸದ ಜೊತೆಗೆ ಉಳಿದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಚಿತ್ರ ತಂಡ ನಡೆಸಿದೆ.

news_1791517096_1_801.webp

 

ಶ್ರುತಿ ಬಿಸರಹಳ್ಳಿ, ಬಸವರಾಜ್ ತಿರ್ಲಾಪುರ ಮೊದಲಾದವರೂ ಅಭಿನಯಿಸಿರುವ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದು, ಕಥೆ ಅರವಿಂದ ಮಿತ್ರ, ಛಾಯಾಗ್ರಹಣ ಗುರುಪ್ರಸಾದ್ ಕಾಶಿ. ಶಿವಾ ಸಂಗೀತ, ಬಿ.ಎಸ್. ಕೆಂಪರಾಜ್ ಸಂಕಲನ, ಪಿ ಆರ್ ಓ. ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ಸಹ ನಿರ್ದೇಶನ ಟಿ.ಆರ್.ಪ್ರಭು, ವಿದ್ಯಾಶ್ರೀ, ಪ್ರಕಾಶ್‌ರಾಜಕುಮಾರ್ ಕಾರ್ಯನಿರ್ವಹಿಸಿದ್ದಾರೆ. ರವಿಶಂಕರ್ ನಿರ್ಮಾಣ ನಿರ್ವಹಣೆ ಜವಾಬ್ದಾರಿ ಚಿತ್ರಕ್ಕಿದೆ. ದೊಡ್ಡ ನಾಗಯ್ಯ ನಿರ್ಮಾಪಕರಾಗಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲ್ಲಿಕಾರ್ಜುನ ಖರ್ಗೆ ಅವರಿಂದ ಇಂತಹ ಪದಬಳಕೆಯನ್ನು ನಿರೀಕ್ಷಿಸಿರಲಿಲ್ಲ – ಬಿಜೆಪಿ ಮುಖಂಡ ಪ್ರಭಾಕರ್ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ದಿಢೀರ್ ಭೇಟಿಆರ್.ವಿ.ಐ.ಎಂ ನಲ್ಲಿ 2024–26ನೇ ಸಾಲಿನ ಎಂಬಿಎ ಮತ್ತು ಪಿ ಜಿ ಡಿ ಬಿ ಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ;ಐಸಿಎಫ್ಎಐ ಕಾನೂನು ಶಾಲೆಯಲ್ಲಿ ಭಾರತದ ನಾಲ್ಕು ಕಾರ್ಮಿಕ ಸಂಹಿತೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ ಕಪ್ಪು ಪಟ್ಟಿ ಧರಿಸಿ ವಾಲ್ಮೀಕಿ ಜಯಂತಿ ಆಚರಣೆಏಷ್ಯನ್‌ ಗೇಮ್ಸ್‌ ಪದಕ ವಿಜೇತ ಕೆಐಐಟಿ, ಕಿಸ್‌ ಸಾಧಕರಿಗೆ ಸನ್ಮಾನಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ.  ಮೊಳಕಾಲ್ಮೂರಿಗೆ ಹೊಸ ನಾಯಕತ್ವದ ಅಗತ್ಯ ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆ