ಮರಿಯಮ್ಮನಹಳ್ಳಿ: ಪಟ್ಟಣದ ಅಧಿದೇವತೆ ರಾಂಪುರದುರ್ಗಾದೇವಿಯ ಜಾತ್ರೆಯ ಮುನ್ನ ನಡೆಯುವ ದೇವಿಯ ಉತ್ಸವ ಮೂರ್ತಿಯ ಗ್ರಾಮಗಳ ಪ್ರದಕ್ಷಿಣೆ ಆರಂಭವಾಗಿದೆ.
ದೇವಿಯ ಭಕ್ತರಿರುವ ಅಯ್ಯನಹಳ್ಳಿ, ಮರಿಯಮ್ಮನಹಳ್ಳಿತಾಂಡ, ವೆಂಕಟಾಪುರ, ಹನುಮನಹಳ್ಳಿ, ಡಣಾಪುರ, ವ್ಯಾಸನಕೆರೆ, ಹೊಸೂರು(7ನೇವಾರ್ಡು) ಗ್ರಾಮಗಳಿಗೆ ದೇವಿಯ ಉತ್ಸವಮೂರ್ತಿಯ ಪಲ್ಲಕ್ಕಿ ಗ್ರಾಮಗಳ ಪ್ರತಿಯೊಬ್ಬ ಭಕ್ತರ ಮನೆ ಮನೆಗೆ ತೆರಳಿ ದರ್ಶನ ನೀಡುವ ಪರಂಪರೆ ಹಲವು ವರ್ಷಗಳಿಂದ ನಡೆದು ಕೊಂಡು ಬಂದಿದೆ.
ಶುಕ್ರವಾರ-ಶನಿವಾರ ಪಟ್ಟಣದ ತಾಂಡದಲ್ಲಿ ದೇವಿಯ ಗ್ರಾಮಪ್ರದಕ್ಷಿಣೆ ಅದ್ದೂರಿಯಾಗಿ ನಡೆಯಿತು.