ಹೆಚ್ಚುವರಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಜಲಾಶಯ ಭಾಗದಲ್ಲಿ ಹರಿಯುತ್ತಿರುವ ನೀರು ನೋಡುವುದು ಸೌಭಾಗ್ಯವಾಗಿದೆ. ಜಲಾಶಯದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹರಿಯುತ್ತಿರುವ ನೀರು ನೋಡಿ ಪ್ರವಾಸಿಗರು ಪುಳಕಗೊಂಡಿದ್ದಾರೆ.
[caption id="attachment_24362" align="alignnone" width="2048"]
default[/caption]ಪ್ರವಾಸಿಗ ಉಮೇಶ್ ಮಾತನಾಡಿ, ತುಂಗಭದ್ರಾ ಜಲಾಶಯ ಹಳೆಯ ಜಲಾಶಯವಾಗಿದ್ದು, ಈ ವರ್ಷ 80 ಟಿಎಂಸಿ ನೀರು ಸಂಗ್ರಹಿಸಲು ತಿರ್ಮಾನಿಸಿದ್ದರಿಂದ ನದಿಗೆ ಬೇಗ ನೀರು ಹರಿಬಿಡಲಾಗಿದೆ ಎಂದು ಹೇಳಿದರು.
ಅಣುವೀರಯ್ಯ ಎಂಬುವರು ಮಾತನಾಡಿ, ನದಿಗೆ ನೀರು ಹರಿ ಬಿಟ್ಟಾಗ ತುಂಗಭದ್ರಾ ಜಲಾಶಯವನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ದೊರೆತಿದ್ದು, ಕುಟುಂಬದೊಂದಿಗೆ ಆಗಮಿಸಿ ಜಲಾಶಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ ಎಂದರು.
ಮಹಿಳಾ ಪ್ರವಾಸಿಗರಾದ ಜ್ಯೋತಿ ಮಾತನಾಡಿ, ಜಲಾಶಯದಿಂದ ನದಿಗೆ ನೀರು ಹರಿ ಬಿಟ್ಟಾಗ 33 ಗೇಟ್ ಗಳಿಗೆ ಅಳವಡಿಸಿದ ವಿದ್ಯುತ್ ದೀಪಾಲಂಕಾರ ಆಕರ್ಷಣೀಯವಾಗಿದ್ದು, ಅದರ ಸೊಬಗನ್ನು ಕಣ್ತುಂಬಿಕೊಳ್ಳಲು ಬಂದಿರುವುದಾಗಿ ಹೇಳಿದರು.