ಹೌದು, ಲೋಡ್ ಗಟ್ಟಲೇ ಟಮೋಟೋ ಕುರಿ, ಮೇಕೆಗಳಿಗೆ ರೈತರು ಹಾಕುತ್ತಿದ್ದಾರೆ. ನಿತ್ಯ ಮೂರ್ನಾಲ್ಕು ಟ್ರಾಕ್ಟರ್ ಲೋಡ್ ಹೊಸಪೇಟೆಯ APMC ಯಿಂದ ಕುರಿಗಳಿಗೆ ಆಹಾರವಬಾಗುತ್ತಿದೆ.
ಹೊಸಪೇಟೆಯ APMC ಗೆ ನಿತ್ಯ ಬರೋ ಟಮೋಟೋ ಯಾರೂ ಕೂಡ ಖರೀದಿ ಮಾಡ್ತಿಲ್ಲ. ಹೊಟೇಲ್ ಮಾಲೀಕರು ಸಹ ಖರೀದಿ ಮಾಡೋದು ಕಡಿಮೆ ಮಾಡಿದ್ದಾರೆ. ಟಮೋಟೋ ಚಿಪ್ಸ್ ಗೆ ಖರೀದಿಯಾಗುತ್ತಿದ್ದ ಟಮೋಟೋ ಕೂಡ ಖರೀದಿಯಾಗ್ತಿಲ್ಲ . ಹಾಗಾಗಿ ರೈತರು ತರುವ ಮಾಲು, ಎಪಿಎಂಸಿಯಿಂದ ನೇರವಾಗಿ ಕುರಿಹಟ್ಟಿಗಳಿಗೆ ಹೋಗ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನ ಹಳ್ಳಿ ಸೇರಿದಂತೆ 5 ತಾಲೂಕುಗಳಿಂದ ಹೊಸಪೇಟೆ APMC ಗೆ ಬರುವ ಟಮೋಟೋ, ಉಳ್ಳಾಗಡ್ಡಿ, ಬದನೆಕಾಯಿ ಟ್ರಾಕ್ಟರ್ ಮೂಲಕ ಬಂದು ಲೋಡ್ ಮಾಡಿಕೊಂಡು ಕುರಿಹಟ್ಟಿಗಳಿಗೆ ಕೊಂಡೋಯ್ತಿದ್ದಾರೆ.
ರಸ್ತೆಗಳಿಗೆ ಸುರಿಯೋ ಬದಲು, ಕುರಿ ಮೇಕೆಗಳಿಗೆ ಹಾಕಲಾಗುತ್ತಿದೆ ಎನ್ನುತ್ತಾರೆ ಟೊಮೊಟೋ ಬೆಳೆದ ರೈತರು