LIVE TV StateNationalPoliticsCrimeEntertainmentSportsEducationFINANCE & TAXATION
Districts

ಜ್ಯೋತಿಕಾ ಜೊತೆಗೆ ಸನ್ಫೀಸ್ಟ್ ಮಾರಿ ಲೈಟ್

ದಂಪತಿಗಳು ತಮ್ಮ ಮನೆಯ ನೇಮ್‌ಪ್ಲೇಟ್‌ಗಳಲ್ಲಿ ತಮ್ಮಿಬ್ಬರ ಹೆಸರನ್ನು ಪ್ರದರ್ಶಿಸುವಂತೆ ಸವಾಲು

ಬೆಂಗಳೂರು : ದಂಪತಿಗಳಲ್ಲಿ ಸಮಾನತೆ ಬೆಳೆಸುವ ಉದ್ದೇಶದಿಂದ ಸನ್‌ಫೀಸ್ಟ್‌ ಮಾರಿ ಲೈಟ್‌ನ ರಾಯಬಾರಿ ಆಗಿರುವ ನಟಿ ಜ್ಯೋತಿಕಾ ತಮ್ಮ ಮನೆ ಮುಂಭಾಗ ಇಬ್ಬರ ಹೆಸರೂ ಹೊಂದಿರುವ “ನೇಮ್‌ಪ್ಲೇಟ್‌” ಹಾಕುವ ಮೂಲಕ ಎಲ್ಲಾ ದಂಪತಿಗಳಿಗೂ ತಮ್ಮ ಮನೆ ಮುಂಭಾಗ ನೇಮ್‌ಪ್ಲೇಟ್‌ ಹಾಕುವಂತೆ ಸಲಹೆ ನೀಡಿದ್ದಾರೆ.

ಸನ್‌ಫೀಸ್ಟ್‌ ಮಾರಿಲೈಟ್‌ ನೂತನ ಉಪಕ್ರಮ ಜಾರಿಗೆ ತಂದಿದ್ದು, ಸಂಸಾರ ಸಾಗಿಸುವ ದಂಪತಿಗಳು ತಮ್ಮ ಮನೆಯಲ್ಲಿ ನೇಮ್‌ಪ್ಲೇಟ್‌ ಹಾಕುವುದರಲ್ಲೂ ಸಹ ಸಮಾನತೆ ಹೊಂದಿರಬೇಕು ಎಂಬ ಸಂದೇಶ ಸಾರುವ ಉದ್ದೇಶ ಇದಾಗಿದೆ.



ಈ ಕುರಿತು ಮಾತನಾಡಿದ ITC ಫುಡ್ಸ್‌ನ ಬಿಸ್ಕತ್ತು ಮತ್ತು ಕೇಕ್‌ಗಳ ವ್ಯವಹಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಲಿ ಹ್ಯಾರಿಸ್ ಶೇರ್, ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಮೂರರಲ್ಲಿ ಎರಡಷ್ಟು ಮನೆಗಳಲ್ಲಿ ತಮ್ಮ ಮನೆಯ ನೇಮ್‌ಪ್ಲೇಟ್‌ಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಹೆಸರೂ ಇದೆ, ಉಳಿದಂತೆ ಕೇವಲ ಗಂಡನ ಹೆಸರಷ್ಟೇ ಇದೆ. ಸುಖ ಸಂಸಾರ ಸಾಗಿಸುವ ಈ ಜೀವನದಲ್ಲಿ ಗಂಡ-ಹೆಂಡತಿ ಇಬ್ಬರೂ ಸಮಾನವಾಗಿ ಜವಾಬ್ದಾರಿ ಹೊತ್ತಿರುತ್ತಾರೆ, ಮನೆ ಮುಂಭಾಗದ ನೇಮ್‌ಪ್ಲೇಟ್ ನಂತಹ ಸಣ್ಣ ವಿಷಯಗಳಲ್ಲೂ ಸಮಾನತೆ ಹೊಂದದೇ ಹೋದರೆ ಹೇಗೆ? ಹೀಗಾಗಿ ಸನ್‌ಫೀಸ್ಟ್‌ ಮಾರಿ ಲೈಟ್‌ ಇಂತಹ ಸಣ್ಣ ವಿಷಯಗಳಲ್ಲೂ ದಂಪತಿಗಳ ನಡುವೆ ಪ್ರೀತಿ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಈ ಉಪಕ್ರಮ ತಂದಿದ್ದೇವೆ. ಈ ಅಭಿಯಾನವನ್ನು ಈಗಾಗಲೇ ತಮಿಳುನಾಡಿನಲ್ಲಿ ನಡೆಸಿದ್ದು, 3 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆ ಮುಂಭಾಗದ ನೇಮ್‌ಪ್ಲೇಟ್‌ ಬದಲಿಸುವ ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದರು.

ನಟಿ ಜ್ಯೋತಿಕಾ ದಂಪತಿಯೂ ಇಬ್ಬರ ಹೆಸರನ್ನೂ ಮನೆಯ ನೇಮ್‌ಪ್ಲೇಟ್‌ ಮೇಲೆ ಬರೆಸುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು, ಜಾಹಿರಾತು ಮೂಲಕ ಸಂದೇಶ ನೀಡಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲ್ಲಿಕಾರ್ಜುನ ಖರ್ಗೆ ಅವರಿಂದ ಇಂತಹ ಪದಬಳಕೆಯನ್ನು ನಿರೀಕ್ಷಿಸಿರಲಿಲ್ಲ – ಬಿಜೆಪಿ ಮುಖಂಡ ಪ್ರಭಾಕರ್ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ದಿಢೀರ್ ಭೇಟಿಆರ್.ವಿ.ಐ.ಎಂ ನಲ್ಲಿ 2024–26ನೇ ಸಾಲಿನ ಎಂಬಿಎ ಮತ್ತು ಪಿ ಜಿ ಡಿ ಬಿ ಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ;ಐಸಿಎಫ್ಎಐ ಕಾನೂನು ಶಾಲೆಯಲ್ಲಿ ಭಾರತದ ನಾಲ್ಕು ಕಾರ್ಮಿಕ ಸಂಹಿತೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ ಕಪ್ಪು ಪಟ್ಟಿ ಧರಿಸಿ ವಾಲ್ಮೀಕಿ ಜಯಂತಿ ಆಚರಣೆಏಷ್ಯನ್‌ ಗೇಮ್ಸ್‌ ಪದಕ ವಿಜೇತ ಕೆಐಐಟಿ, ಕಿಸ್‌ ಸಾಧಕರಿಗೆ ಸನ್ಮಾನಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ.  ಮೊಳಕಾಲ್ಮೂರಿಗೆ ಹೊಸ ನಾಯಕತ್ವದ ಅಗತ್ಯ ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆ