LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ ಎಸ್ ಎಸ್ ನ ನೂರು ವರ್ಷಗಳ ವಿಜಯದಶಮಿ ಉತ್ಸವ ಯಶಸ್ವಿ ಆಚರಣೆ

 ತಿಪಟೂರು : ತಾಲೂಕಿನ ಕರಡಿ ಗ್ರಾಮ ಪಂಚಾಯತಿ ಮಟ್ಟದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ವಿಜಯದಶಮಿ  ಉತ್ಸವವನ್ನು ಕರಡಿ ರಂಗನಾಥಪುರ ಗ್ರಾಮದಲ್ಲಿ ಯಶಸ್ವಿಯಾಗಿ ಆಚರಿಸಲಾಯಿತು.



ಸಂಘದ ಜಿಲ್ಲಾ ಸಂಚಾಲಕರಾದ ಮನೀಶ್ ಹಡಗೂರು ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸಂಘ ಬೆಳೆದು ಬಂದ ಹಾದಿ, ಸಂಘದ ಉದ್ದೇಶಗಳು, ಚಟುವಟಿಕೆಗಳು, ಹಾಗೂ ಶಿಸ್ತಿನ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.

 

ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ಕೆ ಆರ್ ದೇವರಾಜು ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರತಿಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಬೇಕೆಂದು ತಿಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಶಿಸ್ತುಭದ್ಧ ಸಂಘ ವಾಗಿದ್ದು ಇದರಿಂದ ಶಿಸ್ತಿನ ಜೀವನ ನಡೆಸಲು ಸಾಧ್ಯ ಹಾಗಾಗಿ ಚಿಕ್ಕ ಮಕ್ಕಳಿಂದಲೇ ಈ ಬಗ್ಗೆ ಅರಿವು ಮೂಡಿಸಬೇಕು ಯುವಕರಲ್ಲಿ ಹೆಚ್ಚು ಸಂಘಟಿತರನ್ನಾಗಿಸಬೇಕು ಹಿಂದೂ ಧರ್ಮದ ಉಳಿವಿಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇನ್ನು ಹೆಚ್ಚು ವಿಸ್ತಾರವಾಗಿ ಬೆಳೆಯಬೇಕೆಂದು ತಿಳಿಸಿದರು.



ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಿಬ್ಬನಹಳ್ಳಿ ಹೋಬಳಿ ಉಸ್ತುವಾರಿಗಳಾದ ನಗರಸಭೆ ಸದಸ್ಯ ಶಶಿಕಿರಣ್ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷರಾದ ಬಳ್ಳೆಕಟ್ಟೆ ಸುರೇಶ್ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST