LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಪಿಎಸ್.ನಿಂದ ಕಿಡ್.ಝೀ ಪ್ರೀ-ಸ್ಕೂಲ್ ಪ್ರಾರಂಭ

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ 91 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಆಚಾರ್ಯ ಪಾಠಶಾಲಾ ಎಜುಕೇಶನಲ್ ಟ್ರಸ್ಟ್ ಇದೀಗ ಕಿಡ್‌.ಝೀ ಪ್ರೀ-ಸ್ಕೂಲ್   ಪ್ರಾರಂಭಿಸುತ್ತಿದೆ.

 

1.5 ರಿಂದ 3 ವರ್ಷದ ಮಕ್ಕಳಿಗಾಗಿ  ರೂಪಿಸಲಾಗಿರುವ ಈ ಪ್ರೀ-ಸ್ಕೂಲ್, ಮಕ್ಕಳಿಗೆ ಸಂತೋಷ ಮತ್ತು ಆಸಕ್ತಿದಾಯಕ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಆಟದ ಮೂಲಕ ಕಲಿಯುವ, ಒಟ್ಟಿಗೆ ಬೆಳೆಯುವ, ಸ್ನೇಹದ ವಾತಾವರಣದ ಜೊತೆಗೆ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪಠ್ಯ ಕ್ರಮವನ್ನು ರೂಪಿಸಲಾಗಿದೆ.

 

ಕಟ್ಟಡದಲ್ಲಿ ಸುರಕ್ಷಿತ ಮತ್ತು ಮನೆಯಂತಿರುವ ವಾತಾವರಣದಲ್ಲಿ ಪ್ರೀ-ಸ್ಕೂಲ್ ಆರಂಭಿಸಲಾಗುತ್ತಿದೆ. ಮಕ್ಕಳಲ್ಲಿ ಕುತೂಹಲ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುವ ಸ್ನೇಹಪೂರ್ಣ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗಿದೆ ಎಂದು ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿಎ ಡಾ. ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದ್ದಾರೆ.



ಎಪಿಎಸ್ ಪ್ರತಿಯೊಬ್ಬ ಮಗುವನ್ನೂ "ಚಿಕ್ಕ ಮಿನುಗುವ ನಕ್ಷತ್ರ"ವಾಗಿ ಭವಿಷ್ಯದ "ಎಪಿಎಸ್ ಸೂಪರ್ ಸ್ಟಾರ್"ಗಳಾಗಿ ರೂಪಿಸುತ್ತದೆ. ಎಪಿಎಸ್ ನಲ್ಲಿ ಶಿಕ್ಷಣವು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗಿಲ್ಲ. "ಜೀವನ" ಎಂಬ ಮಹತ್ವದ ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತದೆ. ಎಪಿಎಸ್ ನಲ್ಲಿ ಪ್ರವೇಶ ಪಡೆದ ಮಕ್ಕಳು ತಮ್ಮ ಪೂರ್ಣ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲೇ ಮುಂದುವರಿಸಬಹುದಾಗಿದೆ. ಕೆಜಿಯಿಂದ ಪಿಜಿವರೆಗೆ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಮತ್ತು ಪಿಎಚ್ಡಿ ಶಿಕ್ಷಣ ಲಭ್ಯವಿದೆ.

ಆಟದ ಮೂಲಕ ಸಮಗ್ರ ಅಭಿವೃದ್ಧಿ, ಶೈಕ್ಷಣಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ, ಒಂದೇ ಸಂಸ್ಥೆಯಲ್ಲಿ ನಿರಂತರ ಶಿಕ್ಷಣ. ಸೃಜನಶೀಲತೆ, ಸಂವಹನ ಮತ್ತು ಆತ್ಮವಿಶ್ವಾಸ ಅಭಿವೃದ್ಧಿ, 91 ವರ್ಷಗಳ ಶೈಕ್ಷಣಿಕ ಪರಂಪರೆ, ಎಪಿಎಸ್ ನಲ್ಲಿ ನಾವು ಕೇವಲ ಶಿಕ್ಷಣ ನೀಡುವುದಲ್ಲ - ನಾವು ಮಕ್ಕಳನ್ನು ಪ್ರೇರೇಪಿಸುತ್ತೇವೆ, ಅವರ ವ್ಯಕ್ತಿತ್ವವನ್ನು ರೂಪಿಸುತ್ತೇವೆ ಮತ್ತು ಭವಿಷ್ಯದ ನಾಯಕರನ್ನು ನಿರ್ಮಿಸುತ್ತೇವೆ  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880701701 ಎಂದು ತಿಳಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST