LIVE TV StateNationalPoliticsCrimeEntertainmentSportsEducationFINANCE & TAXATION
Districts Vijayanagara

ಸ್ವಚ್ಚತೆಗೆ ಒತ್ತು ನೀಡುವ ಪೌರಕಾರ್ಮಿಕರನ್ನು ಸಮಾಜ ಗೌರವಿಸ ಬೇಕು

ಮರಿಯಮ್ಮನಹಳ್ಳಿ: ಅಸ್ವಚ್ಚತೆಯಲ್ಲೂ ಸ್ವಚ್ಚತೆಗೆ ಒತ್ತು ನೀಡುವ ಪೌರಕಾರ್ಮಿಕರನ್ನು ಸಮಾಜ ಗೌರವಿಸ ಬೇಕು ಎಂದು ಪಟ್ಟಣಪಂಚಾಯತಿ ಅಧ್ಯಕ್ಷ ಆದಿಮನಿ ಹುಸೇನಬಾಷ ಹೇಳಿದರು.

ಕರ್ನಾಟಕರಾಜ್ಯ ಪೌರನೌಕರರಸಂಘ,ಪಟ್ಟಣಪಂಚಾಯತಿ ಕಾರ್ಯಾಲಯ ಸಹಯೋಗದಲ್ಲಿ,ಪಟ್ಟಣ ಪಂಚಾಯತಿ ಆವರಣದಲ್ಲಿ,ಹಮ್ಮಿಕೊಂಡ 16ನೇ ಪೌರಕಾರ್ಮಿಕರ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವರ್ಷಪೂರ್ತಿ ನಮ್ಮೂರನ್ನು ಸ್ವಚ್ಚಗೊಳಿಸಿ ದುಡಿಯುವ ಪೌರಕಾರ್ಮಿಕರ ದಿನಾಚರಣೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಮನವಿ ಮಾಡಿದರು.

news_1790339916_0_454.webp

 

ಪ.ಪಂ.ಮುಖ್ಯಾಧಿಕಾರಿ ಗರಡಿಕಳಕ ಮಲ್ಲೇಶ್ ಮಾತನಾಡಿ,ಪೌರಕಾರ್ಮಿಕರು ಸ್ವಚ್ಚಗೊಳಿಸುವ ಕಾರ್ಯದ ಜೊತಗೆ,ನಾಗರಿಕರಿಗೆ ಜವಾಬ್ದಾರಿಗಳನ್ನು ತಿಳಿಸುವ ಮಹತ್ತರ ಜವಾಬ್ದಾರಿ ಇದೆ.ಪೌರಕಾರ್ಮಿಕರ ಕುರಿತು ಸಾರ್ವಜನಿಕರಿಗೆ ಸಂಕುಚಿತತೆ ಬೇಡ,ಅವರು ಬದುಕಿಗಾಗಿ ವೃತ್ತಿಗೆ ಬಂದವರು ಎಂದರು.ಅವರನ್ನು ಗೌರವಿಸುವ,ಗುರುತಿಸುವಿಕೆ‌ ಸಾರ್ವಜನಿಕರಿಂದಾಗ ಬೇಕು ಎಂದರು.ಸಾರ್ವಜನಕರು ತಮ್ಮ ಕಸ ಎಸೆಯುವ ಮುನ್ನ ಯೋಚಿಸ ಬೇಕು.ಸ್ವಚ್ಚತೆಯ ನೆಪದಲ್ಲಿ ಅಸ್ವಚ್ಚತೆಯನ್ನು ನಿರ್ಮಿಸ ಬಾರದೆಂದರು.

ಇದೇ ಸಂಧರ್ಭದಲ್ಲಿ ಪೌರಕಾರ್ಮಿಕರಿಗೆ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ನೈರ್ಮಲ್ಯ ಅಧಿಕಾರಿ ಪಂಪಾಪತಿ, ಪ.ಪಂ.ಉಪಾಧ್ಯಕ್ಷೆ ಲಕ್ಷ್ಮೀಮಂಜುನಾಥ,ಸ್ಥಾಯಿಸಮಿತಿ ಅಧ್ಯಕ್ಷೆ  ಹುಲಿಗಿಬಾಯಿರುದ್ರನಾಯ್ಕ್, ಸದಸ್ಯರಾದ ಎಸ್.ಮಹಮದ್,ಮರಡಿಸುರೇಶ,ರಾಜೀವ್,ಕೆ.ಮಂಜುನಾಥ,ಪರಶುರಾಮ ಮುಖಂಡರಾದ ರುದ್ರನಾಯ್ಕ್, ಬಿ.ಸುರೇಶ, ಕೆ.ರವಿ, ರವಿಕಿರಣ್, ವೆಂಕಟೇಶ, ದುರುಗಪ್ಪ, ಪೌರಕಾರ್ಮಿಕರಾದ ಚಿದಾನಂದ, ಹನುಮಂತ ಸೇರಿದಂತೆ ಇತರರಿದ್ದರು. ಮಹಾಂತೇಶ್ ನೆಲ್ಕುದ್ರಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲ್ಲಿಕಾರ್ಜುನ ಖರ್ಗೆ ಅವರಿಂದ ಇಂತಹ ಪದಬಳಕೆಯನ್ನು ನಿರೀಕ್ಷಿಸಿರಲಿಲ್ಲ – ಬಿಜೆಪಿ ಮುಖಂಡ ಪ್ರಭಾಕರ್ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ದಿಢೀರ್ ಭೇಟಿಆರ್.ವಿ.ಐ.ಎಂ ನಲ್ಲಿ 2024–26ನೇ ಸಾಲಿನ ಎಂಬಿಎ ಮತ್ತು ಪಿ ಜಿ ಡಿ ಬಿ ಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ;ಐಸಿಎಫ್ಎಐ ಕಾನೂನು ಶಾಲೆಯಲ್ಲಿ ಭಾರತದ ನಾಲ್ಕು ಕಾರ್ಮಿಕ ಸಂಹಿತೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ ಕಪ್ಪು ಪಟ್ಟಿ ಧರಿಸಿ ವಾಲ್ಮೀಕಿ ಜಯಂತಿ ಆಚರಣೆಏಷ್ಯನ್‌ ಗೇಮ್ಸ್‌ ಪದಕ ವಿಜೇತ ಕೆಐಐಟಿ, ಕಿಸ್‌ ಸಾಧಕರಿಗೆ ಸನ್ಮಾನಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ.  ಮೊಳಕಾಲ್ಮೂರಿಗೆ ಹೊಸ ನಾಯಕತ್ವದ ಅಗತ್ಯ ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆ