LIVE TV StateNationalPoliticsCrimeEntertainmentSportsEducationFINANCE & TAXATION
Districts Vijayanagara

ಲೇಖಕರ ಅನುಭವ ಪದಗಳ ಗುಚ್ಛ ಕಥೆ ಕವನ : ಡಾ. ದಯಾನಂದ ಕಿನ್ನಾಳ್

ಹೊಸಪೇಟೆ : ವಿಜಯನಗರ ಕನ್ನಡಕಟ್ಟೆ ಸಾಹಿತಿ ಬಳಗದ ವತಿಯಿಂದ  ಪ್ರತಿ ತಿಂಗಳ ಎರಡನೇ ಭಾನುವಾರದಂದು ಸಾಹಿತ್ಯ ಸಮ್ಮಿಲನ ಗೋಷ್ಠಿಯನ್ನು ಕೈಗೊಳ್ಳಲಾಗುತ್ತಿದೆ.

 ಅದರಂತೆ ಇಂದು ಅ.11 ರ ಎರಡನೇ ಭಾನುವಾರದಂದು   12ನೆಯ ಸಾಹಿತ್ಯ ಸಮ್ಮಿಲನ ಗೋಷ್ಠಿಯನ್ನು ಮುನಿಸಿಪಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಚಿತ್ತವಾಡಿಗಿಯಲ್ಲಿ ಕೈಗೊಳ್ಳಲಾಗಿತ್ತು.

 

 ಈ ಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ಶ್ರೀಮತಿ ನೂರ್ ಜಹಾನ್ ಅವರ "ಕಾವ್ಯ ಗೊಂಚಲು" ಕವನ ಸಂಕಲನದ ಓದು ಮತ್ತು ವಿಮರ್ಶೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ  ಹಿರಿಯ ಸಾಹಿತಿಗಳಾದ ಡಾ ದಯಾನಂದ

ಕಿನ್ನಾಳ್ ಇವರು ಲೇಖಕರ ಅನುಭವಗಳ ಪದಗಳ ಗುಚ್ಛ ಕಥೆಗಳಾಗಿ ಕವನಗಳಾಗಿ ಹೊರಹೊಮ್ಮುತ್ತವೆ ಮತ್ತು ಇವುಗಳು ಲೇಖಕರ  ಜೀವನ ಚರಿತ್ರೆಯನ್ನು ಬಿಂಬಿಸುವಂತಿರುತ್ತವೆ ಮತ್ತೊಮ್ಮೆ ಜೀವನ ಚರಿತ್ರೆಯನ್ನು ಬರೆಯುವ ಅವಶ್ಯಕತೆ ಇರುವುದಿಲ್ಲ. ಕಥೆ ಕವನ ಲೇಖನಗಳಲ್ಲಿ ನಿಜ ಜೀವನದ ಅಂಶಗಳೇ ಅಡಕವಾಗಿರುವುದರುತ್ತವೆ ಎಂದು ಹೇಳಿದರು.

news_1791732034_2_788.webp

 

 ಈ ಗೋಷ್ಠಿಯಲ್ಲಿ ದೀಪಕ್  ಬಿಳ್ಳೂರ್, ವಾಲ್ಯಾ ನಾಯ್ಕ್, ಅನುಪಮಾ ಸುಲಾಖೆ, ಬಿ.ಎಂ ಬಸವರಾಜ್, ಕಣಿವೆ ಶಿವರಾಮಪ್ಪ, ಡಾ.ಕಿಚಡಿ ಚನ್ನಪ್ಪ, ಡಾ.ಭಾರತಿ ಮೂಲಿಮನಿ, ಡಾ ಸುಧಾ ಚಿದಾನಂದಗೌಡ, ವಿ. ನಾಗರಾಜ, ಕವಿತಾ ನಾಯ್ಡು, ಶೀಲಾ ಬಿಕೆ,  ಜಂಬುನಾಥ ಎಚ್.ಎಂ, ಗೋವಿಂದಪ್ಪ, ಡಾ ಎ.ರಂಗನಾಥ. ಪಿ.ಭಾರತಿ ಮಲ್ಲಿಕಾರ್ಜುನ ಮುಂತಾದ  ಇಪ್ಪತ್ತು ಜನ ಕವಿಗಳು ಕವಯಿತ್ರಿಯರು ವಿಮರ್ಶಕರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಸಾಹಿತಿ ಜಗದೀಶ ಬೆನ್ನೂರ್ ನಿರೂಪಿಸಿದರು.  ಕಣಿವೆ ಶಿವರಾಮಪ್ಪ ಪ್ರಾರ್ಥಿಸಿದರು. ಲೇಖಕಿ ನೂರ್ ಜಾನ್ ಅವರು ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲ್ಲಿಕಾರ್ಜುನ ಖರ್ಗೆ ಅವರಿಂದ ಇಂತಹ ಪದಬಳಕೆಯನ್ನು ನಿರೀಕ್ಷಿಸಿರಲಿಲ್ಲ – ಬಿಜೆಪಿ ಮುಖಂಡ ಪ್ರಭಾಕರ್ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ದಿಢೀರ್ ಭೇಟಿಆರ್.ವಿ.ಐ.ಎಂ ನಲ್ಲಿ 2024–26ನೇ ಸಾಲಿನ ಎಂಬಿಎ ಮತ್ತು ಪಿ ಜಿ ಡಿ ಬಿ ಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ;ಐಸಿಎಫ್ಎಐ ಕಾನೂನು ಶಾಲೆಯಲ್ಲಿ ಭಾರತದ ನಾಲ್ಕು ಕಾರ್ಮಿಕ ಸಂಹಿತೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ ಕಪ್ಪು ಪಟ್ಟಿ ಧರಿಸಿ ವಾಲ್ಮೀಕಿ ಜಯಂತಿ ಆಚರಣೆಏಷ್ಯನ್‌ ಗೇಮ್ಸ್‌ ಪದಕ ವಿಜೇತ ಕೆಐಐಟಿ, ಕಿಸ್‌ ಸಾಧಕರಿಗೆ ಸನ್ಮಾನಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ.  ಮೊಳಕಾಲ್ಮೂರಿಗೆ ಹೊಸ ನಾಯಕತ್ವದ ಅಗತ್ಯ ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆ