LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾರ್ಚ್ 1ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಶ್ರೀ ಜಗದ್ಗುರು  ರೇಣುಕಾಚಾರ್ಯರ ತತ್ವ, ಸಿದ್ದಾಂತ ಜೀವನದಲ್ಲಿ ಆಳವಡಿಸಿಕೊಳ್ಳಿ, ಉತ್ತಮ ಸಮಾಜ ನಿರ್ಮಾಣ ಸಾಧ್ಯ-ಮನೋಹರ್ ಅಬ್ಬಿಗೆರೆ

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಮಾರ್ಚ್ 1ರಂದು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದೆ ಇದರ ಕುರಿತು ಅಖಿಲ-ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಬಿ. ಮುಕ್ತಂಬಾ, ನಗರ ಅಧ್ಯಕ್ಷರಾದ ನವೀನ್ ಕುಮಾರ್ ಬಿಡದಿರವರು ಭಾಗವಹಿಸಿದ್ದರು.

 

ಇದೇ ಸಂದರ್ಭದಲ್ಲಿ ಮನೋಹರ್ ಅಬ್ಬಿಗೆರೆರವರು ಮಾತನಾಡಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮಹಾನ್ ಶರಣರು, ಗುರುಶೇಷ್ಠರು. ಕನ್ನಡ ಭಾಷೆಯಲ್ಲಿ ಬದುಕು ಮತ್ತು ಪುರಾಣ  ತತ್ವ ಸಿದ್ದಾಂತಗಳ ಹಲವು ಪುರಾಣ, ಗ್ರಂಥಗಳು ಇದೆ. ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಗದ್ದುರು ಶ್ರೀ ರೇಣುಕಾಚಾರ್ಯ ಜಯಂತಿಯನ್ವು ಅಚರಿಸುತ್ತಿದ್ದಾರೆ.



ಶ್ರೀ ಜಗದ್ಗುರು ಶ್ರೀ ರೇಣಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಮಾರ್ಚ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 11ಗಂಟೆಗೆ ಆಯೋಜಿಸಲಾಗಿದೆ.

ಉದ್ಘಾಟನೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ದಿವ್ಯಸಾನಿಧ್ಯ ರಂಭಾಪುರಿ ಶಾಖ ಹಿರೇಮಠದ ಪೂಜ್ಯ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಮುಖ್ಯ ಅತಿಥಿಗಳಾಗಿ  ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ, ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ , ಅಧ್ಯಕ್ಷತೆ ಶಾಸಕರಾದ ಉದಯ್ ಗರುಡಚಾರ್ ರವರು ಉದ್ಘಾಟನೆ ನೇರವೆರಿಸುವರು.

 

ವಿಶೇಷ ಆಹ್ವಾನಿತರಾಗಿ ವೀರಶೈವ-ಲಿಂಗಾಯಿತ ಸಮನ್ವಯ ವೇದಿಕೆ ಸಂಚಾಲಕರಾದ ಪಾಲನೇತ್ರ, ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ, ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆ, ಬೆಂಗಳೂರುನಗರದ ಅಧ್ಯಕ್ಷರಾದ ಬಿ.ಆರ್.ನವೀನ್ ಕುಮಾರ್ ರವರು, ಯುವ ಘಟಕದ ಹರೀಶ್ ಮಹೇಶ್ ರವರು, ಭಾಗವಹಿಸಲಿದ್ದಾರೆ.

 

ಬೆಳಗ್ಗೆ 10ಗಂಟೆಗೆ ಹಡ್ಸನ್ ಸರ್ಕಲ್ ನಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಪ್ರತಿಮೆ ಹೊತ್ತ ಭವ್ಯ ಮೆರವಣಿಗೆಯಲ್ಲಿ ರವೀಂದ್ರ ಕಲಾಕ್ಷೇತ್ರದವರಗೆ ಮೆರವಣಿಗೆ ಸಾಗಲಿದೆ, ವೀರಗಾಸೆ, ಕಂಸಾಳೆ, ತಮಟೆವಾದ್ಯ, ನಾದಸ್ವರ ವಿವಿಧ ಕಲಾತಂಡಗಳು ಭಾಗವಹಿಸಲಿದೆ.

 

ಸಾಹಿತಿ ಪ್ರಶಾಂತ ರಿಪ್ಬನಪೇಟೆರವರಿಂದ ಉಪನ್ಯಾಸ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

 

ಜಗದ್ದುರು ಶ್ರೀ ರೇಣುಕಾಚಾರ್ಯ ಆದರ್ಶ ತತ್ವ ಸಿದ್ದಾಂತಗಳನ್ನು ಇಂದಿನ ಯುವ ಸಮುದಾಯ ಪಾಲಿಸಬೇಕು ಆಗ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ.

ಮಾರ್ಚ್ 1ರ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ವಿನಂತಿ ಎಂದು ಹೇಳಿದರು.

 

ರಾಷ್ಟ್ರೀಯ ಉಪಾಧ್ಯಕ್ಷರಾದ ಸಚ್ಚಿದಾನಂದಮೂರ್ತಿ, ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ,ಮತ್ತು ವೀರಶೈವ ಲಿಂಗಾಯಿತ ಸಮಾಜದ ಮುಖಂಡರುಗಳಾದ ಗುರುಸ್ವಾಮಿ,  ಬಸವರಾಜಣ್ಣ, ಅಬ್ಬಿಗೆರೆ ಮಹೇಶ್ ಪಚ್ಚಿ, ಚಿದಾನಂದ ಮಠದ್, ಹುರುಳಿ ಚಿಕ್ಕನಹಳ್ಳಿ ಮಲ್ಲಿಕಾರ್ಜುನ ಸ್ವಾಮಿರವರು ಭಾಗವಹಿಸಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST