ಸೆ.22 ರ ಮೊದಲ ದಿನ ಸೋಮವಾರ ಶ್ರೀ ಬಾಲಾ ತ್ರಿಪುರ ಸುಂದರಿ ದೇವಿ ಅಲಂಕಾರ, ಸೆ.23 ರಂದು ಮಂಗಳವಾರ ಶ್ರೀ ಗಾಯತ್ರಿ ದೇವಿ ಅಲಂಕಾರ, ಸೆ.24 ರ ಬುಧವಾರ ಶ್ರೀ ಅನ್ನಪೂರ್ಣೇಶ್ವರಿ ಅಲಂಕಾರ, ಸೆ.25 ರಂದು ಗುರುವಾರ ಶ್ರೀ ಕಾತ್ಯಾಯಿನಿದೇವಿ ಅಲಂಕಾರ, ಸೆ.26 ರಂದು ಶುಕ್ರವಾರ ಶ್ರೀ ಮಹಾಲಕ್ಷ್ಮಿ ದೇವಿ ಅಲಂಕಾರ, ಸೆ.27 ರ ಶನಿವಾರ ಶ್ರೀ ಲಲಿತಾ ತ್ರಿಪುರ ಸುಂದರಿ ದೇವಿ ಅಲಂಕಾರ, ಸೆ.28 ರ ರವಿವಾರ ಶ್ರೀ ಮಹಾಚಂಡಿ ದೇವಿ ಅಲಂಕಾರ, ಸೆ.29 ರ ಸೋಮವಾರ ಶ್ರೀ ಸರಸ್ವತಿ ದೇವಿ ಅಲಂಕಾರ, ಸೆ.30 ರ ಮಂಗಳವಾರ ಶ್ರೀ ದುರ್ಗಾದೇವಿ ಅಲಂಕಾರ, ಅ.1 ರ ಬುಧವಾರ ಶ್ರೀ ಮಹಿಷಾಸುರ ಮರ್ದಿನಿ ಅಲಂಕಾರ ಮತ್ತು ಅ. 2 ರಂದು ಶ್ರೀ ರೇಣುಕಾ ಎಲ್ಲಮ್ಮದೇವಿ ದರ್ಶನ ಏರ್ಪಡಿಸಲಾಗಿದೆ.

ಪ್ರತಿನಿತ್ಯ ಸಂಜೆ 5 ರಿಂದ ಕುಂಕುಮ ಅರ್ಚನೆ, ಸೆ.30 ರಂದು ಅಷ್ಟಮಿ ದಿನ ಸಂಜೆ 5ಕ್ಕೆ ಮಹಾಚಂಡಿಯಾಗ ಮತ್ತು ಮಹಾಮಂಗಳಾರತಿ ಇರಲಿದೆ. ಹೋಮದಲ್ಲಿ ಪಾಲ್ಗೊಳ್ಳುವ ದಂಪತಿಗಳು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಅ.2 ರಂದು ಗಂಗೆ ಪೂಜೆಗೆ ಬರುವ ಮಹಿಳಾ ಭಕ್ತರು ತಮ್ಮ ಹೆಸರನ್ನು ಮುಂಚಿತವಾಗಿ ನಮೂದಿಸಿಕೊಳ್ಳಬೇಕೆಂದು ಶ್ರೀ ರೇಣುಕಾ ಎಲ್ಲಮ್ಮದೇವಿ ಟ್ರಸ್ಟ್ ನವರು ತಿಳಿಸಿದ್ದಾರೆ.