ಬಳ್ಳಾರಿ : ಕಳೆದ ಸೆಪ್ಟಂಬರ್ ನಲ್ಲಿ ನಗರದ ಖಾಸಗೀ ಶಾಲೆಯೊಂದರಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂತ್ರಸ್ಥೆಯ ಹೆಸರನ್ನು ಬಹಿರಂಗವಾಗಿ ಉಲ್ಲೇಖ ಮಾಡಿದ್ದರಿಂದ ಮಾಜಿ ಸಚಿವ ಬಿ.ಶ್ರೀರಾಮುಲು ಮೇಲೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೊನ್ನೆ ಜ.17 ರಂದು ನಗರದ ಎಪಿಎಂಸಿ ಆವರಣದಲ್ಲಿ ನಡೆದ ಬಿಜೆಪಿಯ ಪ್ರತಿಭಟನಾ ಸಮಾವೇಶದಲ್ಲಿ ಶ್ರೀರಾಮುಲು ಅವರು ನಗರದಲ್ಲಿ ಗಾಂಜಾ ಮಾರಾಟ ಬಹಿರಂಗವಾಗಿ ನಡೆಯಿತ್ತಿದ್ದು. ಅದನ್ನು ಸೇವಿಸಿದ ವಿದ್ಯಾರ್ಥಿಗಳು ತನ್ನ ಸಹಪಾಠಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಹೇಳುವಾಗ ಸಂತ್ರಸ್ಥೆಯ ಹೆಸರು, ಜಾತಿ, ಶಾಲೆ, ತರಗತಿಯನ್ನ ಉಲ್ಲೇಖಿಸಿದ್ದರು.ಇದು ಪೋಕ್ಸೋ ಕಾಯ್ದೆಯಡಿ ಅಪರಾಧವಾಗಿರುತ್ತದೆ.
ಅಂದು ಅಲ್ಲಿ ಸಾರ್ವಜನಿಕರು, ಮಾಧ್ಯಮಗಳು ಇರುವಾಗಲೇ ಶ್ರೀರಾಮುಲು ಅವರು ಕಾಯ್ದೆ ಉಲ್ಲಂಘನೆ ಮಾಡಿ ಮಾತನಾಡಿದ್ದಾರೆ ಎಂದು ಕಲಂ: 23 ಪೋಕ್ಸ್ ಕಾಯ್ದೆ ಅಡಿಯಲ್ಲಿ ಮತ್ತು ಕಲಂ: 74 ಜೆ.ಜೆ. ಅಕ್ಟ್ ಅಡಿಯಲ್ಲಿ ಎಪಿಎಂಸಿ ಇನ್ಸ್ ಫೆಕ್ಟರ್ ಮಹಮ್ಮದ್ ರಫಿ ಅವರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಡಾ ಸುಮನ್ ಡಿ.ಪೆನ್ನೇಕರ್ ಇದು ಏಳು ವರ್ಷದೊಳಗಿನ ಶಿಕ್ಷೆ ಪ್ರಮಾಣದ ಕೇಸಾಗಿದ್ದು. ಜಮೀನು ನೀಡುವಂತಹದ್ದಾಗಿದೆ. ಪ್ರಕರಣದ ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸಲಿದೆಂದು ಹೇಳಿದ್ದಾರೆ.