LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನಲ್ಲಿ ತನ್ನ ಮೊದಲ ಯೂನಿಕ್ಲೋ ಮಳಿಗೆ ಉದ್ಘಾಸಿದ ರಾಹುಲ್ ದ್ರಾವಿಡ್

ಬೆಂಗಳೂರು: ಭಾರತ- ಜಾಗತಿಕ ಮಟ್ಟದ ರಿಟೇಲ್ ಉಡುಪು ವ್ಯಾಪಾರ ಸಂಸ್ಥೆ ಆಗಿರುವ ಯೂನಿಕ್ಲೋ ಇಂದು ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿದ್ದು,  ಭಾರತದ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಬ್ರಿಗೇಡ್ ಗೇಟ್‌ ವೇಯ ಒರಾಯನ್ ಮಾಲ್ ನಲ್ಲಿ ಮಳಿಗೆ ತೆರೆಯಲಾಗಿದೆ.  ನೆರೆದಿದ್ದ ಅಪಾರ ಸಂಖ್ಯೆಯ ಗ್ರಾಹಕರು ಮತ್ತು ಅಭಿಮಾನಿಗಳು ರಾಹುಲ್‌ ಡ್ರಾವಿಡ್‌ ಕಂಡು ಹರ್ಷ ವ್ಯಕ್ತಪಡಿಸಿದರು.

ರಾಹುಲ್ ದ್ರಾವಿಡ್ ಮಾತನಾಡಿ, “ಯೂನಿಕ್ಲೋ ಒಂದು ಅದ್ಭುತ ಬ್ರಾಂಡ್ ಆಗಿದೆ. ಇದರ ಆಕರ್ಷಕ ಶೈಲಿ, ಉತ್ತಮ ಗುಣಮಟ್ಟ ಮತ್ತು ಸರಳತೆಯನ್ನು ನಾನು ಬಹಳ ಸಮಯದಿಂದ ಗೌರವಿಸುತ್ತಾ ಬಂದಿದ್ದೇನೆ. ಈ ಬ್ರಾಂಡ್ ನ ಆ ಗುಣಗಳನ್ನು ನಾನು ವೈಯಕ್ತಿಕವಾಗಿ ಸಹ ಮೆಚ್ಚುತ್ತೇನೆ. ಬೆಂಗಳೂರಿನಲ್ಲಿ ನನ್ನ ಸ್ವಂತ ಊರಿನಲ್ಲಿ, ಈ ಬ್ರಾಂಡ್ ತನ್ನ ಮೊದಲ ಮಳಿಗೆಯನ್ನು ತೆರೆಯುತ್ತಿರುವುದು ಸಂತೋಷ ಉಂಟು ಮಾಡಿದೆ. ಈ ವಿಶೇಷ ಸಂದರ್ಭದ ಭಾಗವಾಗಿರುವುದು ಖಂಡಿತವಾಗಿಯೂ ಖುಷಿ ತಂದಿದೆ. ಬೆಂಗಳೂರಿನ ಜನರು ಈ ಬ್ರಾಂಡ್ ಅನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದರು.



ಯೂನಿಕ್ಲೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆಂಜಿ ಇನೌಯೆ ಮಾತನಾಡಿ. “ಇಂದು ನಾವು ಬೆಂಗಳೂರಿನಲ್ಲಿ ನಮ್ಮ ಮೊದಲ ಮಳಿಗೆಯನ್ನು ಉದ್ಘಾಟಿಸಿದ್ದೇವೆ. ಈ ಮಳಿಗೆ ಆರಂಭಿಸುವ ಮೂಲಕ ದಕ್ಷಿಣ ಭಾರತಕ್ಕೆ ಪ್ರವೇಶಿಸುತ್ತಿದ್ದೇವೆ. ಇದು ನಮ್ಮ ಭಾರತ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST