LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಾರಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ ಅಬಕಾರಿ ನಿರೀಕ್ಷಕರಿಗೆ ಮನವಿ

ಸಿಂಧನೂರು: ಸಿಂಧನೂರು ತಾಲೂಕಿನ ಕನ್ನಾರಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಮತ್ತು ಯುವಕರ ಜೊತೆಗೆ ಕೆ ಆರ್ ಎಸ್ ಪಕ್ಷದ ವತಿಯಿಂದ ಅಬಕಾರಿ ನಿರೀಕ್ಷಕರು ಇವರಿಗೆ ಕನ್ನಾರಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹದ ಮನವಿ ಮಾಡಿದರು.

ಮನವಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಮುಖಂಡ ನಿರುಪಾದಿ ಕೆ ಗೋಮರ್ಸಿ ಅವರು ಕನ್ನಾರಿ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಸತಿ ಪ್ರದೇಶಗಳ ಸಮೀಪ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ.ಇದರ ಪರಿಣಾಮವಾಗಿ ಊರಿನ ಯುವಕರು,ಕಾರ್ಮಿಕ ವರ್ಗದವರು,ರೈತಾಪಿ ಕೂಲಿಕಾರರು ದಿನ ನಿತ್ಯ ಮಧ್ಯ ಸೇವಿಸುವಂತಾಗುತ್ತಿದ್ದು ಇದರಿಂದ ಕುಟುಂಬದಲ್ಲಿ ಕಲಹ,ಸಾರ್ವಜನಿಕ ಅಶಾಂತಿ ಹಾಗೂ ಕಾನೂನು ವ್ಯವಸ್ಥೆಗೆ ಗ್ರಾಮದಲ್ಲಿ ಬಂಗ ಉಂಟಾಗುತ್ತಿದೆ.ವಿಶೇಷವಾಗಿ ಮಹಿಳೆಯರು,ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗುತ್ತಿದ್ದು ಇದರಿಂದ ಗ್ರಾಮದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

 

ಗ್ರಾಮದಲ್ಲಿನ ಈ ಅಕ್ರಮ ಮಧ್ಯ ಮಾರಾಟವು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದ್ದು ಸಮಾಜಕ್ಕೆ ಗಂಭೀರ ಹಾನಿ ಉಂಟು ಮಾಡುತ್ತಿದೆ ಗ್ರಾಮದ ಹಲವು ಅಂಗಡಿ ಮುಂಗಟಗಳಲ್ಲಿ,ಕಿರಾಣಿ ಅಂಗಡಿಯಗಳಲ್ಲಿ,ಮನೆಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಇದರ ಪರಿಣಾಮ ಮಧ್ಯವು ಗ್ರಾಮಸ್ಥರಿಗೆ ಸುಲಭವಾಗಿ ದೊರೆಯುವಂತಾಗುತ್ತಿದೆ,ಆದ್ದರಿಂದ ದಯವಿಟ್ಟು ಸಂಬಂಧಿಸಿದ ಸ್ಥಳಗಳಲ್ಲಿ ತಕ್ಷಣ ದಾಳಿ ನಡೆಸಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಅವರನ್ನ ಶಿಕ್ಷೆಗೆ ಒಳಪಡಿಸಿ ಸಾರಾಯಿ ಮುಕ್ತ ಕನ್ನಾರಿ ಗ್ರಾಮವನ್ನಾಗಿ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

 

ಇದೇ ಸಂದರ್ಭದಲ್ಲಿ ಮಧ್ಯ ನಿಷೇಧ ಆಂದೋಲನದ ಮುಖ್ಯಸ್ಥೆ ಶ್ರೀಮತಿ ವಿರುಪಮ್ಮ ಉದ್ಭಳ,ಮರಿಯಮ್ಮ,ಇಂದಿರಮ್ಮ,ಶಿವಮ್ಮ,ಈರಮ್ಮ, ನಿರುಪಾದಿ ಕನ್ನಾರಿ, ರೆಡ್ಡಪ್ಪ ಕನ್ನಾರಿ,ಕನ್ನಾರಿ ಗ್ರಾಮದ ಮಹಿಳೆಯರಾದ  ಅಲ್ಲಬಿ,ಯಂಕಮ್ಮ,ನಾಗಮ್ಮ,ಬಸಮ್ಮ,ರುದ್ರಮ್ಮ,ಹಂಪಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST