ಈಗಾಗಲೇ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಎರಡು ಬಾರಿ ಚಾಂಪಿಯನ್ ಆಗಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷ 2025 ರಲ್ಲೂ ಟ್ರೋಫಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವುದು ಅಭಿನಂದನಾರ್ಹ ವಿಷಯವಾಗಿದೆ.

ಒಂದನೇ ಕರ್ನಾಟಕ ಬೆಟಾಲಿಯನ್ ನ ಕರ್ನಲ್ ರಾಜೇಶ್ ಶ ವಿ ಆರ್ ಸಿ., ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್. ಆರ್ ಡಿ ವರ್ಮ ಹಾಗೂ ಲೆಫ್ಟಿನೆಂಟ್ ಕರ್ನಲ್ ವಿಜಯ್ ಫೆಡ್ರಿಕ್ಸ್ ಅವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರ್ ಟಿಛಿಛಿ ಕ್ರಿಕೆಟ್ಗಳು ಉತ್ತಮ ಸಾಧನೆ ಯೊಂದಿಗೆ ದೇಶದ ವಿವಿಧ ನಿರ್ದೇಶನಾಲಯಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಜೊತೆ ಸ್ಪರ್ಧಿಸಿ ಅಂತಿಮವಾಗಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದರು. ಸಾಧಿಸಿದ ಕೆಡೆಟ್ಸ್ ಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.