LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುವ ಮಾರ್ಬಲ್ ಬಿಡುಗಡೆ

ಭಾರತದ ಒಳಗಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪ ಉದ್ಯಮದಲ್ಲಿ ನಾವೀನ್ಯತೆಯನ್ನು ಪರಿಚಯಿಸುವ ನಾವಿಗ್‌ ಜಿ8 ಪ್ರದರ್ಶನ

ಬೆಂಗಳೂರು : ಭಾರತದ ಒಳಗಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪ ಉದ್ಯಮದಲ್ಲಿ ನಾವೀನ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಕ್ಲಾಸಿಕ್ ಮಾರ್ಬಲ್ ಕಂಪನಿ ನಗರದಲ್ಲಿಂದು ನಾವಿಗ್‌ ಜಿ8 [NAVIG8] ಪ್ರದರ್ಶನ ನಗರದಲ್ಲಿಂದು ನಡೆಯಿತು.

ನಗರದ ಲೀಲಾ ಭಾರತೀಯ ಸಿಟಿಯಲ್ಲಿ ಆಯೋಜಿಸಿದ್ದ ಪ್ರದರ್ಶನಕ್ಕೆ ನ್ಯಾಯವಾದಿ ಸತ್ಯಂ ಪುತ್ತೂರು ಮತ್ತು ವಿಶ್ವಪ್ರಸಿದ್ಧ ವಾಸ್ತುಶಿಲ್ಪಿ ರೆಝಾ ಕಬೂಲ್ ಉದ್ಘಾಟಿಸಿದರು. ಭಾರತೀಯ ವಿನ್ಯಾಸದ ಭವಿಷ್ಯವನ್ನು ನಿರ್ಧರಿಸುವ ನಿಟ್ಟಿನಲ್ಲಿ ಮಹತ್ವದ ವಿಚಾರ ವಿನಿಮಯ ನಡೆಯಿತು.

ಈ ಪ್ರದರ್ಶನದಲ್ಲಿ ದೇಶದ ಅತ್ಯಂತ ಹೆಚ್ಚಿನ ಗುಣಮಟ್ಟದ ಬ್ರ್ಯಾಂಡ್‌ ಗಳನ್ನು ಬಿಡುಗಡೆ ಮಾಡಲಾಯಿತು. ದೇಶದ ಅಗ್ರಗಣ್ಯ ಎಂಜಿನಿಯರ್ಡ್ ಸರ್ಫೆಸ್ ಬ್ರ್ಯಾಂಡ್ “ಕಳಿಂದ ಸ್ಟೋನ್” ತನ್ನ ನಾವೀನ್ಯತೆಯನ್ನು ಅನಾವರಣಗೊಳಿಸಿತು.  ಬ್ಯಾಕ್ಟೀರಿಯಾಗಳಿಂದ ರಕ್ಷಣೆಯನ್ನು ನೀಡುವ ಕಳಿಂಗ ಸ್ಟೋನ್‌ ಮ್ಯಾಕ್ಸ್‌ ಗಾರ್ಡ್ – ಶೇ 99.9 ರಷ್ಟು  ಅತಿ ಆಧುನಿಕ ತಂತ್ರಜ್ಞಾನ ಹೊಂದಿದ್ದು. ಇದು ಸುರಕ್ಷಿತ ಹಾಗೂ ಆರೋಗ್ಯಕರ ಜೀವನದ ಪರಿಕಲ್ಪನೆಗೆ ಪೂರಕವಾಗಿದೆ.



ಕ್ಲಾಸಿಕ್ ಮಾರ್ಬಲ್ ಕಂಪನಿ ಡೈಮ್ಮೆ ಅಡ್ವಾನ್ಸ್ಡ್‌ ಸರ್ಪೇಸ್ ಉತ್ಪನ್ನವನ್ನು ಬಿಡುಗಡೆಗೊಳಿಸಿದ್ದು, ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಒಳಾಂಗಣ, ಬಾಹ್ಯ ವಿನ್ಯಾಸಗಳಿಗೆ ಸೂಕ್ತವಾದ ಉತ್ಪನ್ನವಾಗಿದ್ದು, ಮೇಲ್ಮೈ ವಿನ್ಯಾಸದ  ಸಾಧ್ಯತೆಗಳನ್ನು ಮರುನಿರ್ವಹಿಸುತ್ತದೆ.

ಈ ಕಾರ್ಯಕ್ರಮದಲ್ಲಿ ಪ್ರಮುಖ ವ್ಯಾಪಾರ ಸಂಸ್ಥೆಗಳು,  ವಾಸ್ತುಶಿಲ್ಪಿಗಳು ಮತ್ತು ನೀತಿ ನಿರೂಪಕರು ಒಂದೆ ವೇದಿಕೆಯಡಿ ನಾವೀನ್ಯತೆ, ಸಾಮಗ್ರಿಗಳು ಮತ್ತು ವಾಸ್ತುಶಿಲ್ಪದ ವೈವಿಧ್ಯತೆ ಕುರಿತು ಚರ್ಚಿಸಿದರು.  “ಕಾನ್ಸೆಪ್ಟ್ ಒವರ್ ಕ್ಲಟ್ಟರ್” ಎಂಬ ಮೂಲಭೂತ ಸಿದ್ಧಾಂತದೊಂದಿಗೆ, ನಾವಿಗ್‌ ಜಿ8 ಶಿಲ್ಪಕೌಶಲ್ಯ ಮತ್ತು ಆಧುನಿಕ ಆಲೋಚನೆಗಳ ವಿನಿಯಮಕ್ಕೆ ವೇದಿಕೆಯಾಗಿತ್ತು.  ಇದೇ ಮೊದಲ ಬಾರಿಗೆ ಭಾರತೀಯ ವಾಸ್ತುಶಿಲ್ಪಿಗಳ ಸಂಸ್ಥೆ [ಐಐಎ] ಮತ್ತು ಭಾರತೀಯ ಒಳಾಂಗಣ ವಿನ್ಯಾಸಕರ ಸಂಸ್ಥೆ[ಐಐಐಡಿ) ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಪರಸ್ಪರ ಚರ್ಚಿಸಿದರು. ಕಾರ್ಯಕ್ರಮದಲ್ಲಿ ವಸ್ತುಗಳ ಗುಣಮಟ್ಟ, ವಿನ್ಯಾಸ ಶ್ರೇಷ್ಠತೆ ಮತ್ತು ಭವಿಷ್ಯದ ಚಿಂತನೆಗಳಿಗೆ ಆದ್ಯತೆ ನೀಡುವ 25 ಪ್ರಮುಖ ಬ್ರ್ಯಾಂಡ್ ಗಳನ್ನು ಪ್ರದರ್ಶಿಸಲಾಯಿತು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST