LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಾಗತಿಕ ಪ್ರವಾಸ ಮತ್ತು ಬುಕಿಂಗ್ ವೇದಿಕೆ ಪರಿಚಯಿಸಿದ ಮೇಕ್ಮೈಟ್ರಿಪ್

130 ದೇಶಗಳ 1,100 ನಗರಗಳಲ್ಲಿ ಪ್ರವಾಸದ ಮಾಹಿತಿ ಲಭ್ಯ

ಬೆಂಗಳೂರು : ಭಾರತದ ಮುಂಚೂಣಿ ಆನ್‌ಲೈನ್ ಪ್ರಯಾಣ ಸಂಸ್ಥೆಯಾದ ಮೇಕ್‌ಮೈಟ್ರಿಪ್  ಭಾರತೀಯ ಪ್ರಯಾಣಿಕರಿಗೆ ವಿಶ್ವವ್ಯಾಪಿಯಾಗಿ 130 ದೇಶಗಳ 1100 ನಗರಗಳಾದ್ಯಂತ 200,000 ಕ್ಕಿಂತ ಹೆಚ್ಚಿನ ಬುಕ್ ಮಾಡಬಹುದಾದ ಚಟುವಟಿಕೆಗಳಿಗೆ ಪ್ರವೇಶಾವಕಾಶ ಒದಗಿಸಿದೆ.

ಈ ವೇದಿಕೆಯು, ಸಾಂಸ್ಕೃತಿಕ ಪ್ರವಾಸಗಳಿಂದ ಹಿಡಿದು ಥೀಮ್ ಪಾರ್ಕ್ಸ್ ಹಾಗೂ ಸಾಹಸ ಕ್ರೀಡೆಗಳವರೆಗೆ ಜಾಗತಿಕ ಅನುಭವಗಳನ್ನು ಶೋಧಿಸಿ ಬುಕ್ ಮಾಡಿಕೊಳ್ಳುವ ಅವಕಾಶವನ್ನು ಭಾರತೀಯ ಪ್ರಯಾಣಿಕರಿಗೆ ನೀಡುತ್ತಿದೆ. ಟೂರ್ಸ್‌ ಅಂಡ್‌ ಅಟ್ರಾಕ್ಷನ್ಸ್ ಬುಕಿಂಗ್ ವೇದಿಕೆಯು ಪ್ರಮುಖ ಪ್ರಯಾಣಿಕರ ಸಮಸ್ಯೆಯನ್ನು ಪರಿಹರಿಸುತ್ತದೆ. ಅನುಭವಗಳನ್ನು ಬುಕ್ ಮಾಡುವಾಗ, ಅನೇಕ ವೇಳೆ ಹಂಚಿಹೋದ ಮಾಹಿತಿ, ವಿದೇಶೀ ಹಣ ದರ ಮತ್ತು ಸೇರಿಸಲಾಗದ ಯೋಜನಾ ಸಾಧನಗಳ ಸಮಸ್ಯೆಯಿಂದ ಬಳಲುತ್ತಾರೆ. ಒಂದು ಅಡಚಣೆರಹಿತ ಇಂಟರ್ ಫೇಸ್‌ನಲ್ಲಿ ಎಲ್ಲವನ್ನೂ ಒಟ್ಟಿಗೆ ತರುವ ಮೂಲಕ ಮೇಕ್‌ಮೈಟ್ರಿಪ್, ಜಾಗತಿಕ ಅನುಭವ ಯೋಜನೆಯಲ್ಲಿನ ಸಮಸ್ಯೆಯನ್ನು ನಿವಾರಿಸಿ ಸ್ಪಷ್ಟತೆ ತರುವ ಗುರಿ ಹೊಂದಿದೆ.



ಮೇಕ್‌ಮೈಟ್ರಿಪ್‌ನ ಗ್ರೂಪ್ ಸಿಇಒ ರಾಜೇಶ್ ಮಗೋವ್ ಮಾತನಾಡಿ, “ಭಾರತೀಯರು ವಿದೇಶಗಳಿಗೆ ಪ್ರಯಾಣಿಸುವಾಗ ಸೂಕ್ತ ರೀತಿಯ ಶೋಧ ಮತ್ತು ಮುಂಗಡ ಕಾಯ್ದಿರಿಸುವ ಮಾಹಿತಿಯನ್ನು ಇದು ನೀಡುತ್ತದೆ. ವಿಮಾನ, ಹೋಟೆಲ್‌ಗಳು ಮತ್ತು ಭೂಸಾರಿಗೆ ಬುಕಿಂಗ್ಸ್ ಮುಂತಾದವುಗಳನ್ನು ಸರಳ, ಅನುಕೂಲಕರವಾಗಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಗ್ರಾಹಕರಿಗೆ ಆನಂದಮಯ ಅನುಭವದ ಜೊತೆಗೆ, ಎಲ್ಲಾ ಪ್ರಯಾಣ ಬುಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದೇವೆ.” ಎಂದರು.

ಐತಿಹಾಸಿಕ ಭೂಪ್ರದೇಶಗಳು, ಪ್ಯಾರಿಸ್‌ನ ಈಫಲ್ ಟವರ್, ಡಿಸ್ನಿಲ್ಯಾಂಡ್‌ಅಥವಾ ದುಬೈನ ಕೌತುಕಮಯ ಮರಳುಗಾಡು ಸಫಾರಿಯಿಂದ ಹಿಡಿದು, ಹವಾಯ್‌ನ ಸಮೃದ್ಧ ಕುವಾಇ ದ್ವೀಪ ಅಥವಾ ಟೋಕ್ಯೋದ ಐತಿಹಾಸಿಕ ಅಸಾಕುಸ ಜಿಲ್ಲೆಯಲ್ಲಿರುವ ಪರಸ್ಪರ ಸಂವಾದದ ಸುಮೋ ಪ್ರದರ್ಶನ, ಹೆಲಿಕಾಪ್ಟರ್ ಸವಾರಿ ಮುಂತಾದ ತಲ್ಲೀನ ಚಟುವಟಿಕೆಗಳವರೆಗೆ ವೇದಿಕೆಯು ಎಲ್ಲವನ್ನೂ ಒಂದೇ ಜಾಗದಲ್ಲಿ ತರುತ್ತಿದೆ. ಬಳಕೆದಾರರು ವಿಮಾನಗಳು, ಹೋಟೆಲ್‌ಗಳು ಹಾಗೂ ಇನ್ನೂ ಅನೇಕ ಸಂಗತಿಗಳಂತೆ, ಎಲ್ಲಾ ಬುಕಿಂಗ್‌ಗಳೂ “ಮೈಟ್ರಿಪ್ಸ್” ವಿಭಾಗಕ್ಕೆ ಸಂಯೋಜಿತಗೊಂಡಿವೆ.



ಈ ಕ್ಷೇತ್ರಕ್ಕೆ ಮೇಕ್‌ಮೈಟ್ರಿಪ್‌ನ ಪ್ರವೇಶವು ಪ್ರಯಾಣದ ಎಲ್ಲಾ ಪ್ರಮುಖ ಪದರುಗಳಾದ್ಯಂತ ಅದರ ನಿರಂತರ ವಿಸ್ತರಣೆಯ ಭಾಗವಾಗಿದೆ. ಭಾರತೀಯ ಪ್ರಯಾಣಿಕರಿಗಾಗಿ ಪ್ರಯಾಣದ ಪ್ರತಿಯೊಂದು ಹಂತದಲ್ಲಿ ಬೆಂಬಲ ಒದಗಿಸುವ ನಿಜವಾದ ಸಮಗ್ರ ಪ್ರಯಾಣ ಸಂಗಾತಿಯಾಗಬೇಕೆನ್ನುವ ಸಂಸ್ಥೆಯ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST